Advertisement

ತ್ರಿಕೋನ ಪ್ರೇಮಕಥೆಯ ಚಿತ್ರ “ಪ್ರಸ್ತ’

11:38 AM Oct 09, 2018 | |

ಗ್ರಾಮೀಣ ಪರಿಸರದಲ್ಲಿ ನಡೆಯುವ ತ್ರೀಕೋನ ಪ್ರೇಮ ಕಥಾನಕ ಹೊಂದಿರುವ “ಪ್ರಸ್ತ’ ಚಿತ್ರದ ಸದ್ದಿಲ್ಲದೇ ಚಿತ್ರೀಕರಣವಾಗಿದೆ. ರವಿ ಶತಭಿಷ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣದ ಜೊತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

Advertisement

ಚಿತ್ರದ ಸಾಹಸ ನಿರ್ದೇಶನ ಮತ್ತು ಸಂಕಲನವನ್ನು ಕೂಡ ಮಾಡಿರುವ ರವಿ ಶತಭಿಷ ಅವರು “ಪ್ರಸ್ತ’ ಚಿತ್ರದ ಏಳು ಜವಾಬ್ದಾರಿಗಳನ್ನು ತನ್ನ ಹೆಗಲಿಗೆ ಹಾಕಿಕೊಂಡು ನಿಭಾಯಿಸಿದ್ದಾರೆ. ತನಗೆ ಗೊತ್ತಿಲ್ಲದೆ ಇಬ್ಬರು ಯುವತಿಯರನ್ನು ಲವ್‌ ಮಾಡುವ ನಾಯಕ ಕೊನೆಗೆ ಯಾರ   ಪ್ರೀತಿ ಉಳಿಸಿಕೋಳ್ಳುತ್ತಾನೆ ಎನ್ನುವುದೇ “ಪ್ರಸ್ತ’ ಚಿತ್ರದ ಕಥಾ ಹಂದರವಾಗಿದೆ.

ಅಭಿಜ್ಞಾ ಕ್ರೀಯೇಷನ್ಸ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಮೋಹನ್‌ ಎಂ.ಎಸ್‌.ಎಸ್‌., ಸಂಗಮೇಶ್‌ ಛಾಯಗ್ರಹಣ, ಅಸನೆಲ್‌ ಸಂಗೀತ, ನಿತೀಶ್‌ ಹಿನ್ನೆಲೆ ಸಂಗೀತವಿದೆ. ವಿಶ್‌, ವರ್ಷ, ಯಾದ್ವಿಕ್‌, ಸುಧಾಕರ ಕಾಳೇನಹಳ್ಳಿ, ಚಂದ್ರು, ಮಂಜುಳ, ಕಿಶೋರ್‌, ದೇವೇಗೌಡ, ಲೋಕೇಶ, ಕಾಳೇಗೌಡ, ಮಧು ಚೆಲುವರಾಜ್‌ ಮುಂತಾದವರ ತಾರಾಬಳಗವಿದೆ.

Advertisement

Udayavani is now on Telegram. Click here to join our channel and stay updated with the latest news.

Next