ಕ್ರೈಸ್ಟ್‌ಚರ್ಚ್: ಏಳು ವಿಕೆಟ್ ಉಡಾಯಿಸಿ ವೆಸ್ಟ್ ಇಂಡೀಸಿಗೆ ಏಳYತಿ ಇಲ್ಲದಂತೆ ಮಾಡಿದ ವೇಗಿ ಟ್ರೆಂಟ್ ಬೌಲ್ಟ್ ನ್ಯೂಜಿಲ್ಯಾಂಡಿಗೆ ಏಕದಿನ ಸರಣಿ ಗೆಲುವನ್ನು ತಂದಿತ್ತಿದ್ದಾರೆ. ಶನಿವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ದ್ವಿತೀಯ ಪಂದ್ಯವನ್ನು ಕಿವೀಸ್ 204 ರನ್ನುಗಳ ಭಾರೀ ಅಂತರದಿಂದ ಗೆದ್ದು 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ 6 ವಿಕೆಟಿಗೆ 325 ರನ್ ಪೇರಿಸಿದರೆ, ವೆಸ್ಟ್ ಇಂಡೀಸ್ 28 ಓವರ್‌ಗಳಲ್ಲಿ 121 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಪ್ರಥಮ ಓವರಿನಿಂದಲೇ ವಿಕೆಟ್ ಬೇಟೆಯಲ್ಲಿ ತೊಡಗಿದ ಬೌಲ್ಟ್ ಕೆರಿಬಿಯನ್ನರನ್ನು ಕಾಡುತ್ತಲೇ ಹೋದರು; 34 ರನ್ನಿತ್ತು 7 ವಿಕೆಟ್ ಕಿತ್ತರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ. ಉಳಿದ 3 ವಿಕೆಟ್ ಲಾಕಿ ಫರ್ಗ್ಯುಸನ್ ಪಾಲಾಯಿತು. 27 ರನ್ ಮಾಡಿದ ಆ್ಯಶೆÉ ನರ್ಸ್ ಅವರದೇ ವಿಂಡೀಸ್ ಸರದಿಯ ಅತಿ ಹೆಚ್ಚಿನ ಗಳಿಕೆ. ನ್ಯೂಜಿಲ್ಯಾಂಡ್ ಕೊನೆಯ 17 ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. 33 ಓವರ್ ಮುಕ್ತಾಯಕ್ಕೆ 5ಕ್ಕೆ 186 ರನ್ ಮಾಡಿದ್ದ ಕಿವೀಸ್ ಉಳಿದ ಓವರ್‌ಗಳಲ್ಲಿ ಒಂದೇ ವಿಕೆಟ್ ಕಳೆದುಕೊಂಡು 139 ರನ್ ಪೇರಿಸಿತು. ಹೆನ್ರಿ ನಿಕೋಲ್ಸ್ ಹಾಗೂ ಟಾಡ್ ಆ್ಯಸ್ಟಲ್ ಅವರ ಬಿರುಸಿನ ಆಟ ಈ ಅವಧಿಯ ಆಕರ್ಷಣೆಯಾಗಿತ್ತು. ನಿಕೋಲ್ಸ್ 62 ಎಸೆತಗಳಿಂದ ಅಜೇಯ 83 ರನ್ ಸಿಡಿಸಿದರೆ (7 ಬೌಂಡರಿ, 2 ಸಿಕ್ಸರ್), ಆ್ಯಸ್ಟಲ್ 45 ಎಸೆತ ಎದುರಿಸಿ 49 ರನ್ ಹೊಡೆದರು (1 ಬೌಂಡರಿ, 2 ಸಿಕ್ಸರ್).
ನ್ಯೂಜಿಲ್ಯಾಂಡ್ ಸರದಿಯಲ್ಲಿ ಮಿಂಚಿದ ಉಳಿದಿಬ್ಬರೆಂದರೆ ಆರಂಭಕಾರ ಜಾರ್ಜ್ ವರ್ಕರ್ (58) ಮತ್ತು ಅನುಭವಿ ರಾಸ್ ಟಯ್ಲರ್ (57).ಸರಣಿಯ ಆಂತಿಮ ಪಂದ್ಯ ಇದೇ ಅಂಗಳದಲ್ಲಿ ಮಂಗಳವಾರ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-6ಕ್ಕೆ 325 (ನಿಕೋಲ್ಸ್ ಔಟಾಗದೆ 83, ವರ್ಕರ್ 58, ಟಯ್ಲರ್ 57, ಆ್ಯಸ್ಟಲ್ 49, ಕಾಟ್ರೆಲ್ 62ಕ್ಕೆ 3, ಹೋಲ್ಡರ್ 52ಕ್ಕೆ 2). ವೆಸ್ಟ್ ಇಂಡೀಸ್-28 ಓವರ್‌ಗಳಲ್ಲಿ 121 (ನರ್ಸ್ 27, ಹೋಪ್ 23, ಬೌಲ್ಟ್ 34ಕ್ಕೆ 7, ಫರ್ಗ್ಯುಸನ್ 17ಕ್ಕೆ 3). ಪಂದ್ಯಶ್ರೇಷ್ಠ: ಟ್ರೆಂಟ್ ಬೌಲ್ಟ್.