Advertisement

ದಕ್ಷಿಣ ಏಷ್ಯಾದ ಕುಶಲಕರ್ಮಿಗಳು ತಯಾರಿಸುವ ಮೋಹಕ ಮೋಜರಿ!

04:17 PM Nov 14, 2020 | Suhan S |

ಮೋಜರಿ, ಖುಸ್ಸಾ ಅಥವಾ ಸಲೀಂ ಶಾಹೀಸ್‌ ಎಂಬ ಹೆಸರಿನ ಪಾದರಕ್ಷೆಗಳು ಈಗ ಟ್ರೆಂಡ್‌ ಆಗುತ್ತಿವೆ. ಕಾರಣ ಇಷ್ಟೇ- ಹಬ್ಬದ ಸೀಸನ್‌ ಶುರುವಾಗಿದೆ! ಗ್ರಾಂಡ್‌ ಪಾದರಕ್ಷೆಯನ್ನು ತೊಡಲು ಒಳ್ಳೆ ಕಾರಣ ಸಿಕ್ಕಿದೆ. ಹಬ್ಬ- ಹರಿದಿನಗಳಲ್ಲಿ ಉಟ್ಟ ಉಡುಗೆಗೆಷ್ಟು ಪ್ರಾಮುಖ್ಯತೆ ಇರುತ್ತದೋ ಅಷ್ಟೇ ಪ್ರಾಮುಖ್ಯತೆಯನ್ನು ಮಹಿಳೆಯರು, ತಾವು ತೊಡುವ ಪಾದರಕ್ಷೆಗೂ ನೀಡುತ್ತಾರೆ.

Advertisement

ಹ್ಯಾಂಡ್‌ ಕ್ರಾಫೆrಡ್‌ ಅಂದರೆ, ಯಂತ್ರಗಳನ್ನು ಬಳಸದೆ, ಕೈಯಲ್ಲಿ ಹೊಲಿಯಲಾಗುವ ಈ ಪಾದರಕ್ಷೆ ನೋಡಲೂ ಅಂದ, ತೊಡಲೂ ಆರಾಮದಾಯಕ. ಮೊದಲ ಬಾರಿ ಇವುಗಳನ್ನು ತೊಡುವಾಗ, ಇರುವ ಎರಡು ಮೆಟ್ಟುಗಳಲ್ಲಿ ಯಾವುದನ್ನು ಬೇಕಾದರೂ ಬಲಗಾಲಿಗೆ ಮತ್ತು ಎಡಗಾಲಿಗೆ ತೊಟ್ಟುಕೊಳ್ಳಬಹುದು. ಅದಾದ ನಂತರ ಈ ಚಪ್ಪಲಿಗಳಿಗೆ ಬಲಗಾಲಿನ ಪಾದ ಮತ್ತು ಎಡಗಾಲಿನ ಪಾದದ ಆಕೃತಿ ಬರುತ್ತದೆ. ಎರಡನೇ ಬಾರಿಯಿಂದ ಎಡಗಾಲಿನ ಚಪ್ಪಲಿಯನ್ನು ಬಲಗಾಲಿಗೆ ಅಥವಾ ಬಲಗಾಲಿನಚಪ್ಪಲಿಯನ್ನು ಎಡಗಾಲಿಗೆ ತೊಡಲು ಆಗುವುದಿಲ್ಲ. ತೊಟ್ಟರೆ, ಚಪ್ಪಲಿಗಳು ಅವುಗಳ ಆಕೃತಿ ಕಳೆದುಕೊಳ್ಳುತ್ತವೆ!

ದಕ್ಷಿಣ ಏಷ್ಯಾದ ಕುಶಲಕರ್ಮಿಗಳು ತಯಾರಿಸುವ ಈ ಮೋಜರಿಗೆ ಸಲೀಂ ಶಹೀಸ್‌ ಎಂಬ ಹೆಸರು ಬರಲು ಕಾರಣ – ಮುಘಲ್‌ ರಾಜ ಸಲೀಂ ಶಾಹ್‌ನ ಕಾಲದಲ್ಲಿ ಈ ಮೆಟ್ಟುಗಳ ಬಳಕೆ ಬಹಳಹೆಚ್ಚಾಗಿತ್ತು. ಅಲ್ಲದೆ ಸ್ವತಃ ರಾಜನೇ ಇವುಗಳನ್ನು ತೊಡುತ್ತಿದ್ದನು. ಟ್ಯಾನ್ಡ್ ಲೆದರ್‌ ಅಂದರೆ ಹಸು, ಎಮ್ಮೆ-ಕೋಣ, ಕುರಿ-ಮೇಕೆಯ ಚರ್ಮದಿಂದ ಅಥವಾ ಬಟ್ಟೆಯಿಂದ ತಯಾರಿಸಲಾಗುವ ಈ ಮೆಟ್ಟುಗಳ ಮೇಲೆ ಹಿತ್ತಾಳೆಯ ಮೊಳೆಗಳನ್ನು ಬಳಸಿ ಭದ್ರಪಡಿಸಲಾಗುತ್ತದೆ. ಕಾಲ ಕಳೆದಂತೆ ಚರ್ಮದಬದಲಿಗೆ ಪ್ಲಾಸ್ಟಿಕ್‌, ಫೇಕ್‌ ಲೆದರ್‌, ರಬ್ಬರ್‌ ಮುಂತಾದ ಆಯ್ಕೆಗಳನ್ನು ಬಳಸಲು ಕುಶಲಕರ್ಮಿಗಳು ಮುಂದಾದರು. ಚರ್ಮದ ಮೋಜರಿ ಮಳೆಗೆ ಹಾಳಾಗುತ್ತದೆ. ಆದರೆ ಇತರ ಆಯ್ಕೆಗಳಿಂದ ತಯಾರಿಸಿದ ಮೋಜರಿ ನೀರಿಗೆ ತಾಗಿದರೆ ಅಷ್ಟು ಬೇಗ ಹಾಳಾಗುವುದಿಲ್ಲ.

ಬಹಳ ಗ್ರಾಂಡ್‌ ಆಗಿರುವ ಮೋಜರಿಗಳನ್ನು ಸಾಂಪ್ರದಾಯಿಕ ಉಡುಗೆ ಜೊತೆಯಷ್ಟೇ ತೊಡಬಹುದು. ಪಾಶ್ಚಾತ್ಯ ಉಡುಗೆ ಜೊತೆ ಇವುಗಳನ್ನು ತೊಟ್ಟರೆ ವಿಚಿತ್ರವಾಗಿ ಕಾಣಿಸಬಾರದೆಂದು ಹೊಸ ಥರದ ಮೋಜರಿ ಇದೀಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಉಳಿದ ಪ್ರಕಾರದ ಪಾದರಕ್ಷೆಗಳಂತೆ ಈ ವೆಸ್ಟರ್ನ್ ಮೋಜರಿ ಮೇಲೆ ಚಿತ್ರ ಬಿಡಿಸಲಾಗಿರುತ್ತದೆ. ಅಕ್ಷರಗಳನ್ನು ಮೂಡಿಸಲಾಗುತ್ತದೆ. ಬಟನ್‌ (ಗುಂಡಿ), ಬೋ, ಡೆನಿಮ್, ಜಿಪ್‌ ಮುಂತಾದವುಗಳನ್ನುಬಳಸಲಾಗುತ್ತದೆ. ಪೋಲ್ಕಾ ಡಾಟ್ಸ್, ಜ್ಯಾಮಿತಿಯವಿನ್ಯಾಸಗಳು, ಪಟ್ಟಿಗಳು, ವ್ಯಂಗ್ಯ ಚಿತ್ರಗಳನ್ನೆಲ್ಲ ವಿನ್ಯಾಸಕರು ಈ ಮೋಜರಿಗಳ ಮೇಲೆ ತಂದಿದ್ದಾರೆ. ಇವುಗಳಲ್ಲಿ ಕಸ್ಟಮೈಡ್ ಆಯ್ಕೆಗಳೂ ಲಭ್ಯ.

ಅಂದರೆ ತಮಗೆ ಬೇಕಾದ ಬಣ್ಣ, ಬಟ್ಟೆ (ಫ್ಯಾಬ್ರಿಕ್‌ ಮೆಟೀರಿಯಲ್), ವಸ್ತು ಮತ್ತು ವಿನ್ಯಾಸದಂತೆ ತಯಾರಕರು ಮೋಜರಿಗಳನ್ನು ಅಳತೆಗೆ ತಕ್ಕಂತೆ ಮಾಡಿಕೊಡುತ್ತಾರೆ. ಇಂಥ ಮೋಜರಿಗಳಿಗೆ ವಿಶ್ವಾದ್ಯಂತ ಸೆಲೆಬ್ರಿಟಿಗಳು ಹೆಚ್ಚು ಬೇಡಿಕೆ ಇಡುತ್ತಾರೆ. ಹಾಗಾಗಿ ಕಸ್ಟಮೈಡ್ ಮೋಜರಿ ದುಬಾರಿ ಕೂಡ. ಈ ಮೋಜರಿಗಳನ್ನು ಮುಕ್ಕಾಲು ಪ್ಯಾಂಟ್, ಲೆಗಿಂಗ್ಸ್, ಸಲ್ವಾರ್‌ ಕಮೀಜ್  ಚೂಡಿದಾರ, ಪಟಿಯಾಲ ಸೂಟ್, ಪಲಾಝೊ, ಹ್ಯಾರಮ್‌ ಪ್ಯಾಂಟ್, ಧೋತಿ ಪ್ಯಾಂಟ್, ಡೆನಿಮ್‌ ಪ್ಯಾಂಟ್, ಜೆಗಿಂಗ್ಸ್, ಅನಾರ್ಕಲಿಯಂಥ ಉಡುಗೆಗಳ ಜೊತೆ ತೊಡಬಹುದು. ಸೀರೆ, ಉದ್ದ ಲಂಗ, ಲಂಗ ಧಾವಣಿ, ಶಾರ್ಟ್ಸ್, ಸ್ಕರ್ಟ್ಸ್, ಡ್ರೆಸ್ಸಸ್‌, ಡಂಗ್ರೀಸ್‌ ಜೊತೆ ಇವು ಒಪ್ಪುವುದಿಲ್ಲ. ಮ್ಯಾಕ್ಸಿ ಅಥವಾ ಜಂಪ್‌ ಸೂಟ್‌ ಜೊತೆ ಇವುಗಳನ್ನು ತೊಡಬೇಕು ಎಂದರೆ ಮ್ಯಾಕ್ಸಿ ಮತ್ತು ಜಂಪ್‌ ಸೂಟ್‌ ಮೇಲೆ ಇಂಡಿಯನ್‌ ಪ್ರಿಂಟ್‌ ಇದ್ದರೆ ಒಳ್ಳೆಯದು. ಇಲ್ಲವಾದಲ್ಲಿ, ಕಾಂಬಿನೇಶನ್‌ ವಿಚಿತ್ರವಾಗಿ ಕಾಣಿಸುತ್ತದೆ.

Advertisement

ಪುರುಷರೂ ತೊಡುತ್ತಾರೆ… : ಈ ಪಾದರಕ್ಷೆಯನ್ನು ಪುರುಷರೂ ತೊಡುತ್ತಾರೆ, ಮಹಿಳೆಯರೂ ತೊಡುತ್ತಾರೆ. ಪುರುಷರ ಮೋಜರಿ ಗಳು ಸರಳವಾಗಿರುತ್ತವೆ. ಆದರೆ ಮಹಿಳೆಯರ ಮೋಜರಿಗಳಲ್ಲಿ ಬಣ್ಣಗಳು ಹೆಚ್ಚು, ಕಸೂತಿ ಹೆಚ್ಚು, ಬಗೆಬಗೆಯ ಆಕೃತಿಗಳೂ ಹೆಚ್ಚು. ಕವಡೆ, ಬಣ್ಣಬಣ್ಣದ ಗಾಜಿನ ಚೂರುಗಳು,ಮಣಿಗಳು, ದಾರಗಳು, ಗೆಜ್ಜೆ, ಮುತ್ತಿನಂಥ ಆಕೃತಿಗಳು, ಬಣ್ಣದ ಕಲ್ಲುಗಳು, ಹೊಳೆಯುವ ವಸ್ತುಗಳು, ಟಿಕ್ಲಿ, ಕನ್ನಡಿ, ಲೇಸ್‌ ವರ್ಕ್‌, ಟ್ಯಾಸಲ್‌ ಗಳು, ಉಣ್ಣೆ ಅಥವಾ ಹತ್ತಿಯಿಂದ ತಯಾರಿಸಿದ ಚಿಕ್ಕ – ಪುಟ್ಟ ಆಕೃತಿಗಳು, ಹೀಗೆ ಅನೇಕ ನಮೂನೆಯ ಅಲಂಕಾರಿಕ ವಸ್ತುಗಳನ್ನು ಬಳಸಿ ಅಂದದ ಮೋಜರಿ ತಯಾರಿಸಲಾಗುತ್ತದೆ

 

ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next