Advertisement
ಆದರೆ ಅವತ್ತು ನೋಡಿದರೆ ಹತ್ತೂವರೆ ಹೊತ್ತಿಗೇ ಮೈಲುದ್ದದ ಕಾರುಗಳ ಸಾಲು. ಬೈಕುಗಳೇನು, ಜನರೇನು, ಚಾ, ಕಾಫಿ ಮಾರೋ ಅಂಗಡಿಗಳೇನು.. ಅಬ್ಟಾ, ಕೆಲ ವರ್ಷಗಳ ಹಿಂದೆ ನೋಡಿದ್ದ ಕವಲೇದುರ್ಗ ಇದೇನಾ ಅನಿಸಿಬಿಡ್ತು.
Related Articles
Advertisement
ಕೊನೆಯೆಂದು ಈ ಗೋಳಿಗೆ? : ಮುಂಚೆಯೆಲ್ಲಾ ವಾರಾಂತ್ಯವೆಂದರೆ ಎಲ್ಲಾದ್ರೂ ಹೋಗ್ತಿದ್ದೋರಿಗೆ, ತಿಂಗಳಿಗೊಂದಾದರೂ ಬೆಟ್ಟಗುಡ್ಡ ಅಲೆಯೋರಿಗೆ ಈಗ ಎಲ್ಲಿಗೂ ಹೋಗಬೇಡ, ಮನೇಲೇ ಇರು ಅಂದ್ರೆ ಕಷ್ಟವೇ. ಮುಂಚೆಯಾದ್ರೂ ಲಾಕ್ ಡೌನಿತ್ತು. ಈಗ ಎಲ್ಲ ಓಪನ್ನಾಗಿದ್ಯಲ್ಲ. ಈಗೇನು ಅಂತೀರಾ ? ಈಗ ಓಪನ್ನಾಗಿದೆ ಅಂತ ಎಲ್ಲರೂ ತಿರುಗ್ತಿರೋದ್ರಿಂದ ಮುಂಚೆಗಿಂತ ಹೆಚ್ಚಿನ ಅಪಾಯ ಈಗಿದೆ.
ಯುರೋಪಿನಲ್ಲಿ ಲಾಕ್ ಡೌನ್ ತೆಗೆದ ಮೇಲೆ ಅಲ್ಲಿನ ಕಡಲ ಕಿನಾರೆಯಲ್ಲಿ ಹುಚ್ಚೆದ್ದು ಸೇರಿದ ಜನರಿಂದ ಕೋವಿಡ್ ಎರಡನೇ ಅಲೆ ಶುರುವಾಗಿತ್ತು. ಅಮೇರಿಕಾದಲ್ಲಿ ತೆರೆದ ಶಾಲೆಗಳಿಂದ, ಹೆಚ್ಚೆಚ್ಚು ಜನ ಸೇರೋ ಸ್ಥಳಗಳಿಂದ
ಕೋವಿಡ್ ಭೀತಿ ಹೆಚ್ಚಾಗಿತ್ತು. ಈಗ ಕೋವಿಡ್ ಪೀಡಿತರ ಸಂಖ್ಯೆ ಜನಸಂಖ್ಯೆಯ ಎಂಟು ಪ್ರತಿಶತ ಮಾತ್ರ ಅಂತ ಎಲ್ಲೆಡೆ ತಿರುಗೋ ಮೊದಲು ಎಚ್ಚರಿಕೆ ವಹಿಸದಿದ್ರೆ ಈ ಸಂಭ್ರಮವೇ ಸಾವ ದಾರಿಯಾಗಿ ಪರಿವರ್ತನೆಯಾಗಬಹುದು. ಮುಂದಿನ ತಿಂಗಳುಗಳಲ್ಲಿ ಅಲ್ಲವೆಂದರೂ ಮುಂದಿನ ವರ್ಷವಾದರೂ ಈ ಕೋವಿಡ್ ಮಾರಿ ಹಂತಹಂತವಾಗಿ ತೊಲಗಬಹುದು. ಆದರೆ ನಾಳೆಯೇ ಕೊನೆಯ ದಿನ ಅನ್ನೋ ರೀತಿ ಈ ರಿವೆಂಜ್ ಟೂರ್, ರಿವೆಂಜ್ ಟ್ರೆಕ್ಕಿಂಗ್ ಮಾಡೋದ್ರಿಂದ ನಮ್ಮ ಕೊನೆ ನಿಜವಾಗಲೂ ಹತ್ತಿರ ಬರಬಹುದು !
ದಿನವಿಡೀ ಮನೆಯಲ್ಲಿ ಇದ್ದುಕೊಂಡು ಬೋರ್ ಆಗಿಹೋಗಿದೆ ಅನ್ನುವವರಿಗೆ ಒಂದು ಕಿವಿಮಾತು. ಹೇಗಿದ್ರೂ ಈಗ ಬಿಡುವು ಸಿಕ್ಕಿದೆ ಆಲ್ವಾ? ಅದರಲ್ಲಿ ನಿಮ್ಮ ಹಳೆಯ ಹವ್ಯಾಸಗಳಿಗೆ ಸ್ವಲ್ಪ ಸಮಯ ಕೊಡಿ. ಓದಬೇಕೆಂದು ತಂದಿಟ್ಟುಕೊಂಡಿದ್ದ ಪುಸ್ತಕ, ಕಲಿಯಬೇಕೆಂದು ತಂದಿಟ್ಟುಕೊಂಡಿದ್ದ ಪಿಯಾನೋ ಪೆಟ್ಟಿಗೆ ಮೇಲೆ ಎಷ್ಟು ಧೂಳು ಕೂತಿದೆ ನೋಡಿ!
ವಾರಾಂತ್ಯದಲ್ಲಿ ನಿಮ್ಮ ಸಂಗಾತಿಗೋ, ಮಕ್ಕಳಿಗೋ, ಪೋಷಕರಿಗೋ ಒಂದಿಷ್ಟು ಸಮಯವಿತ್ತರೆ, ಹರಟಿದರೆ, ಅವರನ್ನು ಎಲ್ಲಾದರೂ ಹತ್ತಿರದ ಜಾಗಕ್ಕೆ ಕರೆದುಕೊಂಡು ಹೋಗಿ ಬಂದರೆ ಅವರ ಮುಖದಲ್ಲಿ ಕಾಣೋ ನಗುವಿನಷ್ಟು ಖುಷಿ ನಿಮಗೆ ಈ ರಿವೆಂಜ್ ಟ್ರೆಕ್ಕಿಂಗೂ, ಅಲ್ಲಿನ ಗಿಜಿಗಿಜಿ, ಗೊಂದಲಗಳಿಗಿಂತ ಎಷ್ಟೋ ಮೇಲೆನಿಸದಿದ್ದರೆ ಹೇಳಿ. ಮುಗಿಸೋ ಮುನ್ನ: ಎಲ್ಲಾದರೂ ಇರಿ, ಹೇಗಾದರೂ ಇರಿ. ಈ ರಿವೆಂಜ್, ಗಿವೆಂಜ್ ಅನ್ನೋದನ್ನ ಬಿಟ್ಟು ಮನೆಯವರೊಂದಿಗೆ ಸುರಕ್ಷಿತವಾಗಿರಿ.
ಏನೇನು ಮಾಡಬಹುದು? : ಕೋವಿಡ್ ಅಂತ ಮನೆಯಲ್ಲೇ ಇರಿ ಎಂದಲ್ಲ. ಎಲ್ಲಾದರೂ ಹೋಗೋದಿದ್ದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಉಳಿಸಿಕೊಂಡು, ಸ್ಯಾನಿಟೈಸರ್‌ಗಳ ಬಳಕೆಯೊಂದಿಗೆ ಖಂಡಿತಾ ಹೋಗಿ ಬರಬಹುದು. ಆದರೆ ಅದು ಅತೀ ಅಗತ್ಯವಿದ್ದರೆ ಮಾತ್ರ. ಇಲ್ಲವೆಂದರೆ ಮನೆಯ ಹತ್ತಿರದ ಹೆಚ್ಚು ಜನರಿರದ ಯಾವುದೋ ಉದ್ಯಾನಕ್ಕೆ ಹೋಗಿ ಬನ್ನಿ, ಮನೆಯವರೊಂದಿಗೆ ಲಘು ವಾಕ್ ಹೋಗಿ ಬನ್ನಿ. ಎಂದೂ ಮಾತನಾಡದ ಗೆಳೆಯರೊಂದಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿ…
– ಪ್ರಶಸ್ತಿ ಪಿ. ಸಾಗರ