Advertisement
ಅರಣ್ಯ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ 2-3 ತಿಂಗಳಲ್ಲಿ ಅನುಮತಿ ಸಿಗುವ ನಿರೀಕ್ಷೆ ಇದ್ದು, ಚಾರಣಪ್ರಿಯರಲ್ಲಿ ಸಂತಸ ಮೂಡಿಸಲಿದೆ. ಚಳಿಗಾಲ, ಮಳೆಗಾಲ ಸಂದರ್ಭದಲ್ಲಿ ಚಾರಣ ಮಾಡಲು ಪ್ರವಾಸಕ್ಕೆ ಹೋಗುವವರಿಗೆ ಚಾರಣದ ಸವಿಸವಿಯಬಹುದು. ಜೋಗಿಮಟ್ಟಿ ಬೆಂಗಳೂರಿನಿಂದ ಕೇವಲ 200 ಕಿಮೀ ದೂರದಲ್ಲಿದೆ.
Related Articles
Advertisement
ಟ್ರಕ್ಕಿಂಗ್ ಸ್ಥಳಗಳಿವು: ಜೋಗಿಮಟ್ಟಿಯ ಸಾಲು ಸಾಲು ಗುಡ್ಡ ಬೆಟ್ಟಗಳು, ಚಿನ್ಮೂಲಾದ್ರಿ ಬೆಟ್ಟ, ಧವಳಪ್ಪನಗುಡ್ಡ, ಈರಣ್ಣನ ಕಲ್ಲು ಬೆಟ್ಟ, ಕಡ್ಲೆಕಟ್ಟೆ ಕಣಿವೆ, ಗೋಡೆಗವಿ, ಗಾಳಿಗುಡ್ಡ, ಚಿರತೆಕಲ್ಲು, ಅಂಕೋಲೆಗುತ್ತಿ, ಸೀಳುಗಲ್ಲು, ದೇವರಹಳ್ಳ, ಪಾಂಡವಮಟ್ಟಿ, ಅಹೋಬಲ ನರಸಿಂಹಸ್ವಾಮಿ ಬೆಟ್ಟ, ಕಿಂದರಿ ಬೆಟ್ಟ, ಬಗರಿ ಬಂಡೆ, ಹಿಮ್ಮತ್ ಕೇದಾರ್, ಭೂತಪ್ಪನಬೆಟ್ಟ (ವಜ್ರ), ಹನುಮನ ಕಲ್ಲು, ಸಣ್ಣ ಬಿದರೆ ಕಲ್ಲು, ಕೆನ್ನೆಡಲು, ಚಿಕ್ಕಸಿದ್ದವ್ವನಹಳ್ಳಿ, ಕೊಳಾಳ್ ಕೆಂಚಾವಧೂತರ ಸಮೀಪದ ವಜ್ರ, ಐರಾನ್ ಗುಡ್ಡ, ಬೆಳ್ಳಿ ಗುಡ್ಡಗಳು ಬಯಲು ಸೀಮೆಯಲ್ಲಿ ಚಾರಣ ಮಾಡಲು ಯೋಗ್ಯ ಸ್ಥಳಗಳಾಗಿವೆ.
ಈ ಸ್ಥಳಗಳು ಊಟಿಯ ವಾತಾವರಣವನ್ನು ನೆನಪಿಸುತ್ತವೆ. ಮುಂಜಾನೆಯ ಮಂಜನ್ನು ಸೀಳಿಕೊಂಡು ಪಯಣಿಸುವ ಚಾರಣಿಗರಿಗೆ ರಸ್ತೆಯ ಅಕ್ಕಪಕ್ಕದ ಕಲ್ಲುಗಳ ಮೇಲೆ ಕುಳಿತ ನವಿಲುಗಳು ಸ್ವಾಗತ ಕೋರುತ್ತವೆ. ಗಿರಿ ಶಿಖರಗಳ ತುದಿಗೆಮೋಡಗಳು ಮುತ್ತಿಕ್ಕಿ ಮಳೆ ಸುರಿಯುವ ದೃಶ್ಯ ಮನಮೋಹಕ. ಚಿತ್ರದುರ್ಗದ ಬಸ್ ನಿಲ್ದಾಣದಿಂದ ಮದಕರಿ ವೃತ್ತದ ಮೂಲಕ 8 ಕಿಮೀ ಕಾಡಿನ ಮಧ್ಯೆ ಸಾಗಿದರೆ ಜೋಗಿಮಟ್ಟಿ ಪ್ರದೇಶ ಸಿಗುತ್ತದೆ. ಜೋಗಿಮಟ್ಟಿ ಚಾರಣಕ್ಕೆ ಹಲವು ಮಾರ್ಗಗಳಿದ್ದು ಕೋಟೆ, ಚಂದ್ರವಳ್ಳಿ, ಆಡುಮಲ್ಲೇಶ್ವರ, ಜೋಗಿಮಟ್ಟಿಗೆ ಯಾವುದೇ ಮಾರ್ಗದಿಂದ ಹೋಗಬಹುದಾಗಿದೆ. ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಚಾರಣ ಮಾಡಲಿರುವ
ಪ್ರತಿ ವ್ಯಕ್ತಿಗೆ 200 ರೂ. ಶುಲ್ಕ ನಿಗದಿ ಮಾಡುವಂತೆ ಕೋರಲಾಗಿದೆ. ಈ ಹಣವನ್ನು ಮಾರ್ಗದರ್ಶಿಗೆ ನೀಡಲಾಗುತ್ತದೆ. 25 ರೂ. ಪ್ರವೇಶ ಶುಲ್ಕ, ರಾತ್ರಿ ಅರಣ್ಯ ಟೆಂಟ್ ಗಳಲ್ಲಿ ಉಳಿದುಕೊಂಡರೆ ಪ್ರತಿ ವ್ಯಕ್ತಿಗೆ 500 ರೂ. ನಿಗದಿ ಮಾಡುವಂತೆ ಪ್ರಸ್ತಾವನೆಯಲ್ಲಿ ಕೋರಲಾಗಿದೆ.
ಕೆ.ಆರ್. ಮಂಜುನಾಥ್, ಉಪ ಅರಣ್ಯ ಸಂರಕ್ಷಣಾಧಿಕಾರಿ. ಹರಿಯಬ್ಬೆ ಹೆಂಜಾರಪ್ಪ