Advertisement

ಟ್ರೀ ಪಾರ್ಕ್‌ ಅಗ್ನಿ ಅನಾಹುತ: ತನಿಖೆ ತೀವ್ರ

06:04 PM Apr 13, 2020 | |

ಪಣಂಬೂರು:  ಇಲ್ಲಿಯ ಟ್ರೀ ಪಾರ್ಕ್‌ನಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಲಾಗಿದೆ.

Advertisement

ಮೆಸ್ಕಾಂ ಇಲಾಖೆಗೂ ಘಟನೆಯ ವಿವರಣೆ ಕೋರಿ ನೊಟೀಸ್‌ ಜಾರಿಗೊಳಿಸಲಾಗಿದೆ. ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲ ಯದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವರ ವರದಿ ಬಂದ ಬಳಿಕ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಲು ನಗರ ಪೊಲೀಸರು ನಿರ್ಧರಿಸಿದ್ದಾರೆ.

ದುಷ್ಕೃರ್ಮಿಗಳ ಕೃತ್ಯ : ಶಂಕೆ
ತಣ್ಣೀರುಬಾವಿ  ಬೀಚ್‌ನಲ್ಲಿದ್ದ ಮರ ಹಾಗೂ ಸಿಮೆಂಟ್‌ನ ಆಸನಗಳನ್ನು ಕಿಡಿಗೇಡಿಗಳು  ಹಾನಿಗೊಳಿಸಿದ ನೆನಪು ಮಾಸುವ ಮೊದಲೇ ಈಗ ಆರಣ್ಯ ಇಲಾಖೆ  ರೂಪಿಸಿದ ಟ್ರೀ ಪಾರ್ಕ್‌  ಕಿಡಿಗೇಡಿಗಳ ದುಷ್ಕೃತ್ಯಕ್ಕೆ ಭಸ್ಮವಾಗಿದೆ.

ಮಾ. 29ರಂದು ಬೆಳಗ್ಗೆ 6.30ರ ವೇಳೆಗೆ ಟ್ರೀ ಪಾರ್ಕ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ಈ ಘಟನೆಯಿಂದ ಅರಣ್ಯ ಇಲಾಖೆಗೆ ಸುಮಾರು 7 ಲಕ್ಷ ರೂ. ನಷ್ಟವಾಗಿದೆ.

ಕಚೇರಿ ಕುಟೀರ, ಗೇಟ್‌ ಮುಂಭಾಗದ  ಕಲಾಕೃತಿಗಳು ಸುಟ್ಟು ಕರಕಲಾಗಿದೆ. ಮಂಗಳೂರು ಆಯುಕ್ತ ಚಂದ್ರಶೇಖರ್‌ ಅವರು ಸ್ವತಃ ತನಿಖೆಯ ನೇತೃತ್ವ ವಹಿಸಿದ್ದು, ಪಣಂಬೂರು ಠಾಣೆಯಲ್ಲಿ  ದೂರು ದಾಖಲಾಗಿದೆ. ಕಳೆದ ಜೂನ್‌ನಲ್ಲಿ  ಅರಣ್ಯ ಸಚಿವ ಬಿ. ರಮಾನಾಥ ರೈ ಅವರಿಂದ  ಉದ್ಘಾಟನೆಗೊಂಡಿದ್ದ ಸುಮಾರು 1.99 ಕೋಟಿ ರೂ. ವೆಚ್ಚದ ತಣ್ಣೀರುಬಾವಿ ಟ್ರೀ ಪಾರ್ಕ್‌ ರಾಜ್ಯದ ಗಮನ  ಸೆಳೆದಿತ್ತು.

Advertisement

ಸಮುದ್ರ ಕೊರೆತ ತಡೆ ಯೋಜನೆ
ಸಸ್ಯೋದ್ಯಾನವನದ ಒಂಬತ್ತು ಎಕ್ರೆ ಪ್ರದೇಶದಲ್ಲಿ  ಫಲವತ್ತತೆ ಕಾಪಾಡಲು ಹೊನ್ನೆ ಗಿಡ ನೆಡಲಾಗಿದೆ. 31 ಲಕ್ಷ ರೂ. ವೆಚ್ಚದಲ್ಲಿ ಆವರಣೆ ಗೋಡೆಯನ್ನೂ ನಿರ್ಮಿಸಲಾಗಿದೆ. ಔಷಧೀಯ ತಳಿಯ 16 ಗಿಡಗಳು, ಶೇ. 50ರಷ್ಟು ಪಶ್ಚಿಮ ಘಟ್ಟದ ಸಸ್ಯ  ಸಂಕುಲವನ್ನು ನೆಡಲಾಗಿದೆ. ಇವುಗಳ ಮಾಹಿತಿ ಫಲಕಗಳನ್ನೂ ಅಳವಡಿಸಲಾಗಿದೆ.  ನಗರ ಪ್ರದೇಶದಲ್ಲಿ ಸಸ್ಯ ಸಂರಕ್ಷಣೆ, ಜಾಗೃತಿ, ಶಿಕ್ಷಣ ಹಾಗೂ ಸೌಕರ್ಯ ಒದಗಿಸುವುದು     ಈ ಸಸ್ಯೋದ್ಯಾನವನದ ಉದ್ದೇಶವಾಗಿತ್ತು. ಸಂಸ್ಕೃತಿಯ ವೈಭವ ಸಾರಲು ಯಕ್ಷಗಾನ, ಭೂತ ಕೋಲ, ಬುಡಕಟ್ಟು ಜನರ ಪ್ರತಿಕೃತಿಯನ್ನೂ ಅಳವಡಿಸಲಾಗಿತ್ತು.

ವರದಿಯ ಬಳಿಕ ಕ್ರಮ
ಅಗ್ನಿ ಅನಾಹುತದ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೆಸ್ಕಾಂಗೂ ವಿವರಣೆ ಕೋರಿ ನೋಟೀಸು ನೀಡಲಾಗಿದೆ. ಅರಣ್ಯ ಇಲಾಖೆಯ ಸಹಕಾರ ಪಡೆದು ತನಿಖೆ ನಡೆಸಲಾಗುತ್ತಿದ್ದು  ಪ್ರಯೋಗಾಲಯದ ವರದಿ ಬಂದ ಬಳಿಕ ತನಿಖೆ ತೀವ್ರಗೊಳಿಸಲಾಗುವುದು.
– ಶಾಂತರಾಜು,
ಡಿಸಿಪಿ, ಕಾನೂನು ಸುವ್ಯವಸ್ಥೆ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next