Advertisement
ಇದರಡಿ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದುದ್ದಕ್ಕೂ ಬರುವ ಒಂಬತ್ತು ಜಿಲ್ಲೆಗಳ57 ತಾಲೂಕುಗಳ ಅಂದಾಜು1,785 ಗ್ರಾಮ ಪಂಚಾಯ್ತಿಗಳಲ್ಲಿ 24 ಲಕ್ಷ ರೈತರನ್ನು ತಲುಪುವ ಗುರಿ ಹೊಂದಲಾಗಿದೆ. ಇದರೊಂದಿಗೆ ಉದ್ದೇಶಿತ ಅಭಿಯಾನವು ಮತ್ತೊಂದು ಐತಿಹಾಸಿಕ ಮೈಲುಗಲ್ಲಿಗೆ ಸಾಕ್ಷಿಯಾಗಲಿದೆ ಎಂದು ಈಶ ಪ್ರತಿಷ್ಠಾನದ ಸಂಸ್ಥಾಪಕ ಜಗ್ಗಿ ವಾಸುದೇವ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಲಾನಯನ ಪ್ರದೇಶದಲ್ಲಿ ಅಂದಾಜು 1.10 ಕೋಟಿ ಸಸಿಗಳನ್ನು ನೆಡುವಲ್ಲಿ ಯಶಸ್ವಿಯಾಗಿದ್ದೇವೆ. ಅಷ್ಟೇ ಅಲ್ಲ, ಕಾವೇರಿ ಕೊಳ್ಳದ 28 ಜಿಲ್ಲೆಗಳ 189 ತಾಲೂಕು ಗಳಲ್ಲಿ 33 ಸಾವಿರ ರೈತರನ್ನು ಒಗ್ಗೂಡಿಸಿದೆ. ಈಗ ಅದರ ಮುಂದುವರಿದ ಭಾಗವಾಗಿ “ಮರ ಆಧಾರಿತ ಕೃಷಿ’ ಅಭಿಯಾನದಡಿ ಐದು ಪಟ್ಟು ಅಂದರೆ 5 ಕೋಟಿ ಸಸಿಗಳನ್ನು ನೆಡುವ ಗುರಿ ಇದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಅರಣ್ಯ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಸಹಯೋಗದಲ್ಲಿ ಇದನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
Related Articles
Advertisement
“ಸ್ಟೇಟ್ ಆಫ್ ದಿ ಆರ್ಟ್’ ಮೊಬೈಲ್ ಆ್ಯಪ್‌ಯೊಂದನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಹೆಸರು ನೋಂದಾಯಿಸಿಕೊಳ್ಳುವ ರೈತರ ಮನೆ ಬಾಗಿಲಿಗೇ “ಮರ ಮಿತ್ರ ‘ರು ಸಸಿಗಳನ್ನು ತಲುಪಿಸಲಿದ್ದಾರೆ. ರೈತರ ಹೆಸರು ಮಾತ್ರವಲ್ಲ; ಅವರಿಗೆ ವಿತರಿಸಿದ ಸಸಿಯ ಜಾತಿ, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಇರುವ ¸ಬೇಡಿಕೆ ಸೇರಿದಂತೆ ಪ್ರತಿಯೊಂದು ದಾಖಲಿಸಿಕೊಳ್ಳಲಾಗುತ್ತದೆ. ಜತೆಗೆ ಸಸಿಗಳ ನೆಡುವುದರ ಬಗ್ಗೆ ತಾಂತ್ರಿಕ ಮಾಹಿತಿ ಕುರಿತು ಜ್ಞಾನವನ್ನೂ ಹಂಚಿಕೊಳ್ಳ ಲಾಗುವುದು. ಸ್ವಯಂ ಸೇವಕರೆಲ್ಲರೂಕೋವಿಡ್-19ರ ಮಾರ್ಗಸೂಚಿಗಳನ್ನು ಅನುಸರಿಸಲಿದ್ದಾರೆ ಎಂದರು. ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಇದ್ದರು.
16 ಸಾವಿರ ರೈತರಿಗೆ ತರಬೇತಿ“ಕಾವೇರಿ ಕೂಗು’ಕನ್ನಡ ಫೇಸ್‌ಬುಕ್ ಪೇಜ್‌ಕಳೆದ ಒಂದು ತಿಂಗಳಲ್ಲಿ ಹತ್ತು ಲಕ್ಷ ರೈತರನ್ನು ತಲುಪಿದೆ! ಜತೆಗೆ ಲಾಕ್‌ಡೌನ್ ಅವಧಿಯಲ್ಲಿ ನಿತ್ಯ 12 ಸಾವಿರ ರೈತರನ್ನು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕ ಸಾಧಿಸಿದೆ.ಕಳೆದ ಆರು ವಾರಗಳಲ್ಲಿ16 ಸಾವಿರಕ್ಕೂ ಅಧಿಕ ರೈತರಿಗೆ ತರಬೇತಿ
ನೀಡಲಾಗಿದೆ ಎಂದು ಈಶ ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. ಕಾವೇರಿ ರಕ್ಷಣೆಯೊಂದೇ ಗುರಿ: ಸದ್ಗುರು
ಬೆಂಗಳೂರು: “ಕಾವೇರಿ ಸಂರಕ್ಷಣೆ ನಮ್ಮ ಮೊದಲ ಆದ್ಯತೆ. ಮೇಕೆದಾಟು ಆಗಲಿ ಮತ್ತೊಂದು ಯೋಜನೆಯಾಗಲಿ ಅದು ಸರ್ಕಾರ ಅಥವಾ ಜನಪ್ರತಿನಿಧಿಗಳು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ’. ಇದು ಈಶ ಪ್ರತಿಷ್ಠಾನದ ಸಂಸ್ಥಾಪಕ ಜಗ್ಗಿ ವಾಸುದೇವ್ ಅವರ ಸ್ಪಷ್ಟನೆ. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮ್ಮ ನಿಲುವು ಬಗ್ಗೆ ಸೋಮವಾರ ಸುದ್ದಿಗಾರರು ಪ್ರಶ್ನಿಸಿದಾಗ, “ಯೋಜನೆಗಳು ಮತ್ತು ಅವುಗಳ ಅನುಷ್ಠಾನ ವಿಚಾರದಲ್ಲಿ ಆಯಾ ರಾಜ್ಯ ಸರ್ಕಾರಗಳು ಸೂಕ್ತ ತೀರ್ಮಾನ ಕೈಗೊಳ್ಳುತ್ತವೆ. ನಮ್ಮ ಗುರಿ ಏನಿದ್ದರೂ ಕಾವೇರಿ ಮತ್ತು ಅದರ ವ್ಯಾಪ್ತಿಗೆ ಬರುವ ಜಲಾನಯನ ಪ್ರದೇಶದ ಮಣ್ಣಿನ ಸಂರಕ್ಷಣೆ ಹಾಗೂ ರೈತರ ಅಭಿವೃದ್ಧಿ ಆಗಿದೆ’ ಎಂದು ಸಮಜಾಯಿಷಿ ನೀಡಿದರು. “ಒಂದು ತಂಬಿಗೆಯಲ್ಲಿ ನೀರಿದ್ದಾಗ ಮಾತ್ರ ಅದನ್ನು ಯಾರುಕುಡಿಯಬೇಕು ಎಂಬುದರ ಚರ್ಚೆ ಬರುತ್ತದೆ. ಆಗ ಸೂಕ್ತ ನಿರ್ಧಾರಗಳನ್ನೂಕೈಗೊಳ್ಳಬಹುದು. ಆದರೆ, ತಂಬಿಗೆಯಲ್ಲಿ ನೀರಿಲ್ಲದಿದ್ದರೆ, ಯಾರು ಕುಡಿಯಬೇಕು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸೂಚ್ಯವಾಗಿ ಹೇಳಿದರು.