ಹುಬ್ಬಳ್ಳಿ: ತೋಳ ಕಚ್ಚಿದ್ದರಿಂದ ದವಡೆ ಕಿತ್ತು ಗಂಭೀರ ಸ್ಥಿತಿಯಲ್ಲಿದ್ದ ಒಂಭತ್ತು ತಿಂಗಳ ಮಗುವಿಗೆ ಸತತ ನಾಲ್ಕು ತಾಸುಗಳವರೆಗೆ ಫೇಸಿಯೋ ಮ್ಯಾಕ್ಸಿಲರಿ ಸರ್ಜರಿ ನಡೆಸಿಕಿಮ್ಸ್ ವೈದ್ಯರು ಜೀವದಾನ ಮಾಡಿದ್ದಾರೆ. ಕಿಮ್ಸ್‌ನ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಂಡಿದ್ದರಿಂದ ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ 9 ತಿಂಗಳ ಮಗು ಅನ್ನಪ್ಪ ಬದುಕಿಳಿದಿದೆ.
ಕೂಲಿಕಾರ್ಮಿಕರಾದ ಮಗುವಿನ ತಂದೆ ಹುಸೇನಪ್ಪ ದುರ್ಗಮುರಗಿ ದಂಪತಿಯು ಹೊಸರಿತ್ತಿಯ ಹೊರವಲಯದ ಹೊಲದಲ್ಲಿ ಜೋಪಡಿ ಹಾಕಿಕೊಂಡುಮಲಗಿದ್ದರು. ಮಾ. 7ರಂದು ರಾತ್ರಿ ವೇಳೆ ತೋಳವೊಂದುಮಗು ಅನ್ನಪ್ಪನ ಮೇಲೆ ಏಕಾಏಕಿ ದಾಳಿ ಮಾಡಿ, ಮುಖಕಚ್ಚಿ ತಿಂದು ಮುಖ ಮತ್ತು ದವಡೆಯ ಕೆಳಗಿನ ಭಾಗ ಸಂಪೂರ್ಣ ಸೀಳಿ ಹಾಕಿತ್ತು. ಹೀಗಾಗಿ ಮಗುವಿಗೆ ತೀವ್ರ ರಕ್ತಸ್ರಾವವಾಗಿ ಸ್ಥಿತಿ ಗಂಭೀರವಾಗಿತ್ತು.
ತಕ್ಷಣ ಪಾಲಕರು ಮಗುವನ್ನು ಹೊಸರಿತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಹಾವೇರಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಬಾಯಿಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯ ಇಲ್ಲದ್ದರಿಂದ ಕಿಮ್ಸ್‌ಗೆಕಳುಹಿಸಿದ್ದರು. ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಮಾ.8ರಂದು ಕಿಮ್ಸ್ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗಕ್ಕೆ ದಾಖಲಿಸಲಾಗಿತ್ತು.
ಸತತ 4 ತಾಸು ಶಸ್ತ್ರಚಿಕಿತ್ಸೆ: ಕಿಮ್ಸ್‌ನ ಚಿಕ್ಕ ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲು ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ರೆಫರ್ ಮಾಡಲಾಗಿತ್ತು. ಇದನ್ನು ವಿಭಾಗದ ವೈದ್ಯರು ಸವಾಲಾಗಿ ಸ್ವೀಕರಿಸಿದರು.
ತೋಳವು ಮಗುವಿನ ಕೆಳಗಿನ ದವಡೆ ಮತ್ತು ಮುಖ ಕಿತ್ತು ತಿಂದಿದ್ದು, ಮಗುವಿಗೆ ಹಾಲು ಕುಡಿಯಲು ಆಗುತ್ತಿರಲಿಲ್ಲ. ಮಾ. 10ರಂದು ಕಿಮ್ಸ್‌ನ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸಾ ವಿಭಾಗದವರು ಮಗುವಿಗೆತುರ್ತು ಚಿಕಿತ್ಸೆ ನೀಡಲು ಮುಂದಾದರು. ಶಸ್ತ್ರಚಿಕಿತ್ಸೆಗೂಮುನ್ನ ರಕ್ತಸ್ರಾವ ತಡೆಗಟ್ಟಿ, ರೇಬಿಸ್ ಹಾಗೂ ನಂಜುಹರಡದಂತೆ ರೋಗ ನಿರೋಧಕ ಡ್ರಗ್ಸ್ ಕೊಟ್ಟು ನಂತರ ಅರವಳಿಕೆ ವಿಭಾಗದ ತಜ್ಞರಾದ ಡಾ| ಉಮೇಶ,ತರಣಜಿತ್ ಕೌರ್ ಅವರು ಮೂಗಿನಿಂದ ಟ್ಯೂಬ್ ಹಾಕಿ ಅರವಳಿಕೆ ನೀಡಿದರು. ಬಳಿಕ ಕೆಳಗಿನ ದವಡೆಗೆ ಪ್ಲೇಟ್ ಹಾಗೂ ಮೇಲಿನ ಚರ್ಮಕ್ಕೆ ನೀಟಾಗಿ ಹೊಲಿಗೆ ಹಾಕಿ ಮುಖದ ಕೆಳಗಿನ ದವಡೆಯ ಎಲುಬು (ಫೇಸಿಯೋಮ್ಯಾಕ್ಸಿಲರಿ ಸರ್ಜರಿ) ಜೋಡಿಸಿದ್ದಾರೆ. ಈಗ ಮಗುವಿನ ಆರೋಗ್ಯ ಸ್ಥಿರವಾಗಿದೆ.
ಕಿಮ್ಸ್‌ನಲ್ಲಿ ಮಾತ್ರ ಎಫ್‌ಎಂಎಸ್ ಸೌಲಭ್ಯ: ಉತ್ತರ ಕರ್ನಾಟಕ ಭಾಗದ ಸರಕಾರಿ ಆಸ್ಪತ್ರೆಗಳಲ್ಲಿ ಬಾಯಿ ಮತ್ತುಮುಖ ಶಸ್ತ್ರಚಿಕಿತ್ಸಾ ವಿಭಾಗ ಬಳ್ಳಾರಿ ಹೊರತುಪಡಿಸಿದರೆ ಕಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಲಭ್ಯವಿದೆ.
ಮಗುವಿನ ಆರೋಗ್ಯ ಸ್ಥಿರ :
ತೋಳ ದಾಳಿಯಿಂದ 9 ತಿಂಗಳ ಮಗುವಿನ ಮುಖದ ಚರ್ಮ ಮತ್ತು ದವಡೆಯ ಕೆಳಗಿನ ಸಂಪೂರ್ಣ ಭಾಗ ಕಿತ್ತು ಹೋಗಿತ್ತು. ತುರ್ತು ಚಿಕಿತ್ಸೆ ಆಧಾರ ಮೇಲೆ ಮಾ. 10ರಂದು ಕೆಳಗಿನ ದವಡೆಗೆ ಪ್ಲೇಟ್ ಹಾಕಿ, ಮೇಲಿನ ಚರ್ಮ ಹೊಲಿದು ಸತತ 4 ತಾಸುಗಳ ಕಾಲ ಶಸ್ತ್ರಚಿಕಿತ್ಸೆಮಾಡಲಾಯಿತು. ಈಗ ಮಗುವಿನ ಆರೋಗ್ಯ ಸ್ಥಿರವಾಗಿದೆ. ಮಗು ಈಗ ಚಿಕ್ಕದಾಗಿದ್ದರಿಂದ ಆರು ತಿಂಗಳು ಇಲ್ಲವೆ ಒಂದು ವರ್ಷದ ನಂತರ ಮೇಲಿನ ಮತ್ತು ಕೆಳಗಿನ ದವಡೆ ಮತ್ತೆ ಮರುಸ್ಥಾಪಿಸಲಾಗುವುದು ಎಂದು ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸಾ (ಫೇಸಿಯೋ ಮ್ಯಾಕ್ಸಿಲರಿ ಸರ್ಜರಿ) ವಿಭಾಗದ ಡಾ| ಮಂಜುನಾಥ ಎಂ. ವಿಜಾಪುರ ತಿಳಿಸಿದರು.
-ಶಿವಶಂಕರ ಕಂಠಿ