Advertisement

ಸೋಂಕಿತರಿಗೆ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ

12:50 AM Aug 08, 2021 | Team Udayavani |

ಉಡುಪಿ: ಕೊರೊನಾ ನಿಯಂತ್ರಣಕ್ಕಾಗಿ ಸೋಂಕಿತರಿಗೆ ಇನ್ನು ಮುಂದೆ ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ (ಸಿಸಿಸಿ) ಚಿಕಿತ್ಸೆ ನೀಡಲು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಶನಿವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಕೋವಿಡ್‌ 19 ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಿರ್ಣಯ ತಳೆದಿದೆ.

Advertisement

10 ದಿನಗಳ ಹಿಂದೆ 1,368 ಸಕ್ರಿಯ ಪ್ರಕರಣ ಗಳಿದ್ದವು. ಸೋಂಕು ಹೆಚ್ಚುತ್ತಿದೆ. 1,408 ಸೋಂಕಿತರಲ್ಲಿ 139 ಮಂದಿ ಆಸ್ಪತ್ರೆಗಳಲ್ಲಿ, 12 ಮಂದಿ ಸಿಸಿಸಿಗಳಲ್ಲಿ, ಉಳಿದ 1,257 ಮಂದಿ ಹೋಂ ಐಸೊಲೇಶನ್‌ನಲ್ಲಿದ್ದಾರೆ. ಎಲ್ಲ ಸೋಂಕಿತರನ್ನೂ ಸಿಸಿಸಿಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲು ಸೋಂಕಿತರು ಮತ್ತು ಮನೆಯವರು ಸಹಕರಿಸಬೇಕು ಎಂದು ಸಚಿವರು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

ಮೈಕ್ರೋ ಕಂಟೈನ್ಮೆಂಟ್ ಝೋನ್ :

ಮಣಿಪಾಲ ಎಂಐಟಿ, ಕಾರ್ಕಳದ ಮಿಯಾರು, ಕುಂದಾಪುರದ ಹಳೆಯ ಆದರ್ಶ ಆಸ್ಪತ್ರೆ, ನಿಟ್ಟೆ, ಹೆಬ್ರಿ  ಮೊದಲಾದೆಡೆ ಸಿಸಿಸಿ ಆರಂಭಿಸಲಾಗಿದೆ. ಸಿಸಿಸಿಯಲ್ಲಿ ಒಟ್ಟು 2,000 ಬೆಡ್‌ ವ್ಯವಸ್ಥೆ ಮಾಡಲಾಗು ವುದು ಎಂದರು.

ಆಗಸ್ಟ್ನಲ್ಲಿ 50 ಐಸಿಯು ಬೆಡ್ ಸಿದ್ಧ:

Advertisement

2ನೇ ಅಲೆಯಲ್ಲಿ ಸೋಂಕು ಕಡಿಮೆ ಇದ್ದ ಗ್ರಾ.ಪಂ.ಗಳಲ್ಲಿ ಈ ಬಾರಿ ಹೆಚ್ಚಾಗಿರುವುದು ಕಂಡುಬಂದಿದೆ. ಆಗಸ್ಟ್‌ ಅಂತ್ಯದೊಳಗೆ ಕಾರ್ಕಳ- ಕುಂದಾಪುರದಲ್ಲಿ ತಲಾ 15, ಜಿಲ್ಲಾಸ್ಪತ್ರೆಯಲ್ಲಿ 20 ಮಕ್ಕಳ ಐಸಿಯು ಬೆಡ್‌ಗಳನ್ನು ನಿರ್ಮಿಸಲಾಗುವುದು ಎಂದರು.

34,000 ಎರಡನೇ ಡೋಸ್ ಬಾಕಿ:

ಜಿಲ್ಲೆಯಲ್ಲಿ 2ನೇ ಡೋಸ್‌ ಲಸಿಕೆ ತೆಗೆದುಕೊಳ್ಳಲು 34,000 ಜನರಿದ್ದಾರೆ. ಮೊದಲ ಡೋಸ್‌ ತೆಗೆದುಕೊಂಡವರು ಜಿಲ್ಲೆಯಲ್ಲಿ ಶೇ. 64 ಇದ್ದು ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದೇವೆ. 2ನೇ ಡೋಸ್‌ ತೆಗೆದುಕೊಂಡವರಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ಆದಷ್ಟು ಹೆಚ್ಚಿಗೆ ಲಸಿಕೆ ಪಡೆಯಲು ರಾಜ್ಯ ಮಟ್ಟದ ಅಧಿಕಾರಿಗಳ ಜತೆ ಮಾತನಾಡುತ್ತೇನೆ ಎಂದರು.

48 ಗಂಟೆಯೊಳಗೆ ಪರಿಹಾರ:

ತೌಖ್ತೆ ಚಂಡಮಾರುತದ ವೇಳೆ ಹಾನಿಗೀಡಾದ ಪ್ರದೇಶಗಳ ಯಥಾಸ್ಥಿತಿಗೆ ಸುಮಾರು 100 ಕೋ. ರೂ. ಯೋಜನೆ ಸಿದ್ಧಪಡಿಸಿದ್ದು ಕೇಂದ್ರ ಸರಕಾರಕ್ಕೆ  ಸಲ್ಲಿಸುತ್ತೇವೆ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಜಿಲ್ಲಾಡಳಿತದಲ್ಲಿ 11 ಕೋ.ರೂ. ಇದೆ. ಹಾನಿಗೊಳ ಗಾಗಿ 48 ಗಂಟೆಗಳೊಳಗೆ ಪರಿಹಾರ ನೀಡುವಂತೆ ತಹಶೀಲ್ದಾರರಿಗೆ ತಿಳಿಸಿದ್ದೇವೆ ಎಂದರು.

ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಬಿ.ಎಂ. ಸುಕುಮಾರ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಡಿಸಿ ಜಿ. ಜಗದೀಶ್‌, ಜಿ.ಪಂ. ಸಿಇಒ ಡಾ| ನವೀನ್‌ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಎಡಿಸಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಸಚಿವರ ಸ್ವಯಂ ನಿರ್ಬಂಧ :

ಕೊರೊನಾ ನಿಯಂತ್ರಣಕ್ಕಾಗಿ ಪ್ರವಾಸಿ ತಾಣಗಳಲ್ಲಿ ಕಠಿನ ನಿರ್ಬಂಧ ಜಾರಿಗೊಳಿಸಲಾಗುವುದು. ದೇವಸ್ಥಾನಗಳಲ್ಲಿಯೂ ಸ್ವಯಂ ನಿರ್ಬಂಧ ಹೇರಿಕೊಳ್ಳಬೇಕಾಗಿದೆ. ನಿನ್ನೆ ಅಭಿನಂದನೆ ನಡೆದಿದೆ. ಇನ್ನು ಮುಂದೆ ಯಾವುದೇ ಅಭಿನಂದನೆ ಬೇಡ. ನಾನೇ ಸ್ವಯಂ ಅನುಶಾಸನಕ್ಕೆ ಒಳಗಾಗಿದ್ದೇನೆ ಎಂದು ಸುನಿಲ್‌ ಕುಮಾರ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next