Advertisement

ಕೋವಿಡ್‌ ರೋಗಿಗಳ ಚಿಕಿತ್ಸೆ: ಪ್ಯಾಕೇಜ್‌ ದರ ಪರಿಷ್ಕರಣೆ

12:36 PM May 08, 2021 | Team Udayavani |

ಬೀದರ: ಸಾರ್ವಜನಿಕ ಆರೋಗ್ಯ ಸಂಸ್ಥೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ಸೂಚಿತ ಮಾಡಿದ ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆರೋಗ್ಯ ಸೇವೆಗೆ ನೀಡುತ್ತಿರುವ ಪ್ಯಾಕೇಜ್‌ ದರಗಳನ್ನು ಪರಿಷ್ಕರಿಸಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌ ತಿಳಿಸಿದ್ದಾರೆ.

Advertisement

ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ಪಿಪಿಇ ಹಾಗೂ ಪರಿಕರಗಳನ್ನು ಒಳಗೊಂಡಂತೆ ದರಗಳನ್ನು ಸೂಚಿಸಲಾಗಿದೆ. ಸಾರ್ವಜನಿಕ ಆರೋಗ್ಯ ಪ್ರಾಧಿ ಕಾರದಿಂದ ಶಿಫಾರಸ್ಸಾಗಿರುವ ಕೋವಿಡ್‌ ಸೋಂಕಿತರ ಚಿಕಿತ್ಸೆಗಾಗಿ ದಿನವೊಂದಕ್ಕೆ ಈ ಪ್ಯಾಕೇಜ್‌ ದರಗಳು ಅ ಧಿಸೂಚನೆಯ ಹೊರಡಿಸಿದ ಮೇ 6ರಿಂದಲೇ ಜಾರಿಗೊಳ್ಳುತ್ತವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಆದೇಶ ಪಾಲಿಸದಿದ್ದಲ್ಲಿ ಕ್ರಮ: ಜನರಲ್‌ ವಾರ್ಡಗೆ 5200 ರೂ., ಎಚ್‌ಡಿಯುಗೆ 8000 ರೂ., ಐಸೋಲೇಷನ್‌ ಐಡಿಯು ವೆಂಟಿಲೇಟರ್‌ ರಹಿತ 9750 ರೂ., ಐಸೋಲೇಷನ್‌ ಐಸಿಯು ವೆಂಟಿಲೇಟರ್‌ ಸಹಿತ 11500 ರೂ. ನಿಗದಿ ಮಾಡಲಾಗಿದೆ. ಈ ಆದೇಶ ಪಾಲಿಸದಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ, 2005ರ ಸೆಕ್ಷನ್‌ (51ರಿಂದ 60) ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿ ಶಿಕ್ಷಾರ್ಹವಾಗಿರುತ್ತದೆ. ಇತರೆ ಕಾನೂನುಗಳು ಅನ್ವಯಿಸುತ್ತವೆ.

ಮೇ 1ರಂದು ಮುಖ್ಯ ಮಂತ್ರಿಯವರೊಂದಿಗೆ ಖಾಸಗಿ ಆಸ್ಪತ್ರೆಗಳು ಕೈಗೊಂಡ ಸಭೆಯಲ್ಲಿ, ಮಾನವ ಸಂಪನ್ಮೂಲ ಹಾಗೂ ಪರಿಕರಗಳ ವೆಚ್ಚವು ಹೆಚ್ಚಾಗುತ್ತಿರುವುದರಿಂದ ಪ್ಯಾಕೇಜ್‌ ದರಗಳ ಪರಿಷ್ಕರಣೆಗಾಗಿ ಕೋರಲಾಗಿತ್ತು. ಅದರಂತೆ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ತಾಂತ್ರಿಕ ಸಮಿತಿಯಿಂದ ಪರಿಶೀಲನೆ ಕೈಗೊಳ್ಳಲಾಗಿದೆ. ಆದ್ದರಿಂದ, ಸಾರ್ವಜನಿಕ ಆರೋಗ್ಯ ಸಂಸ್ಥೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆರೋಗ್ಯ ಸೇವೆಗೆ ನೀಡುತ್ತಿರುವ ಪ್ಯಾಕೇಜ್‌ ದರಗಳನ್ನು ಪರಿಷ್ಕರಿಸಿ ಆದೇಶಿಸಿ ಅಧಿ ಸೂಚನೆ ಹೊರಡಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next