Advertisement

ಸೋಂಕಿತರ ಬಳಿಯೇ ಇತರೆ ರೋಗಿಗಳಿಗೆ ಚಿಕಿತ್ಸೆ!

01:24 PM Apr 27, 2021 | Team Udayavani |

ಹುಣಸೂರು: ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದೆಡೆ ಡಯಾಲಿಸೀಸ್‌ ಕೇಂದ್ರ, ಪಕ್ಕದಲ್ಲಿ ಹೆರಿಗೆ ವಾರ್ಡ್‌ಗಳಿದ್ದು,ಮದ್ಯದಲ್ಲಿ ಕೋವಿಡ್‌ ಚಿಕಿತ್ಸಾ ಘಟಕ ತೆರೆಯಲಾಗಿದೆ. ಇದರ ಜೊತೆಗೆ ಇನ್ನೊಂದು ಕಡೆ ಕೋವಿಡ್‌ ಲಸಿಕೆ ನೀಡುವ ಘಟಕವಿದೆ. ಹೀಗಾಗಿ ಇತರೆ ರೋಗಿಗಳು ಜೀವ ಭಯದಲ್ಲಿಆಸ್ಪತ್ರೆಗೆ ಬರುವಂತಾಗಿತ್ತು. ಹೀಗಾಗಿ ಕೋವಿಡ್‌ ಚಿಕಿತ್ಸಾ ಘಟಕ ಸ್ಥಳಾಂತರಕ್ಕೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

Advertisement

ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕ ಮಂಜುನಾಥ್‌ ಬಳಿ ರೋಗಿಗಳು ಅಳಲು ತೋಡಿ ಕೊಂಡಿದ್ದರು. ಡಯಾಲಿಸೀಸ್‌ ಕೇಂದ್ರದ ಪಕ್ಕದಲ್ಲೇ ಕೋವಿಡ್‌ ಚಿಕಿತ್ಸಾಘಟಕದಲ್ಲಿ ತುರ್ತು ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬೇಕು. ಉಳಿದವರನ್ನು ಕೋವಿಡ್‌ ಕೇರ್‌ ಸೆಂಟರ್‌ ಅಥವಾಮನೆಯಲ್ಲೇ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆಮಾಡಿಕೊಳ್ಳಬೇಕೆಂದು ಆಸ್ಪತ್ರೆ ವೈದ್ಯ ಡಾ|ಉಮೇಶ್‌ ಅವರಿಗೆ ಶಾಸಕರು ಸೂಚಿಸಿದರು.

ಆಕ್ಸಿಜನ್‌ ಘಟಕ ಪರಿಶೀಲನೆ: ಆಸ್ಪತ್ರೆಯ ಹಿಂಭಾಗದಲ್ಲಿ ನೂತನವಾಗಿ ಸ್ಥಾಪಿಸಿರುವ ಆಕ್ಸಿಜನ್‌ ಘಟಕ ವೀಕ್ಷಿಸಿದಶಾಸಕರು, ಆಕ್ಸಿಜನ್‌ ಕೊರತೆಯಾಗದಂತೆ ಮುನ್ನೆಚ್ಚರಿಕೆವಹಿಸುವಂತೆ ಸೂಚಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಡಾ.ಉಮೇಶ್‌,ಸದ್ಯದ ಪರಿಸ್ಥಿತಿಯಲ್ಲಿ ಆಮ್ಲಜನಕದ ಕೊರತೆ ಇಲ್ಲ, 9ಸಿಲಿಂಡರ್‌ಗಳು ಭರ್ತಿ ಇವೆ. ಅಗತ್ಯಕ್ಕೆ ತಕ್ಕಂತೆ ಸಿಲಿಂಡರ್‌ಭರ್ತಿಗೆ ಇಂಡೆಂಟ್‌ ಹಾಕಲಾಗುತ್ತಿದೆ ಎಂದು ಮಾಹಿತಿನೀಡಿದರು. ಈ ವೇಳೆ ಟಿಎಚ್‌ಒ. ಡಾ.ಕೀರ್ತಿಕುಮಾರ್‌, ಡಾ| ಶ್ರೀನಿವಾಸ್‌ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು

ಒಂದೇ ದಿನ 70 ಮಂದಿಗೆ ಸೋಂಕು :

ತಾಲೂಕಿನಲ್ಲಿ ಸೋಮವಾರ ಒಂದೇ ದಿನ 70 ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟಾರೆ 286 ಸಕ್ರಿಯಪ್ರಕರಣಗಳಿವೆ. ತಾಲೂಕಿನಲ್ಲಿ ಒಟ್ಟು 3154 ಮಂದಿಗೆಸೋಂಕಿತರ ಪೈಕಿ 2834 ಮಂದಿ ಗುಣಮುಖರಾಗಿದ್ದು. 39 ಮಂದಿ ಸಾವನ್ನಪ್ಪಿದ್ದರೆ. 11 ಮಂದಿ ಹುಣಸೂರುಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. 9 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕಳುಹಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next