Advertisement

ಗ್ಯಾಂಗ್‌ಸ್ಟರ್‌ಗಳನ್ನು ಉಗ್ರರೆಂದು ಪರಿಗಣಿಸಿ; ರಾಷ್ಟ್ರೀಯ ತನಿಖಾ ಸಂಸ್ಥೆಗೆ ಕೇಂದ್ರದ ಸೂಚನೆ

08:26 PM Aug 03, 2022 | Team Udayavani |

ನವದೆಹಲಿ: ದೇಶದ ಹಲವಾರು ಗ್ಯಾಂಗ್‌ಸ್ಟರ್‌ಗಳು, ಪಾಕಿಸ್ತಾನ ಮೂಲದ ಉಗ್ರವಾದಿಗಳ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ವಿಚಾರವನ್ನು ಬಹಿರಂಗಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಸೂಚನೆ ನೀಡಿರುವ ಕೇಂದ್ರ ಸರ್ಕಾರ ಅಂಥ ಗ್ಯಾಂಗ್‌ಸ್ಟರ್‌ಗಳನ್ನು ಉಗ್ರರಂತೆಯೇ ಪರಿಗಣಿಸಿ ಎಂದು ಹೇಳಿದೆ.

Advertisement

ಪಾಕಿಸ್ತಾನದ ಉಗ್ರ ಸಂಘಟನೆಗಳು ಹಾಗೂ ಕೆನಡಾದ ಖಲಿಸ್ತಾನ ಬೆಂಬಲಿತ ಉಗ್ರರ ಜೊತೆಗೆ ದೇಶದ ಗ್ಯಾಂಗ್‌ಸ್ಟರ್‌ಗಳು ನಂಟು ಹೊಂದಿರುವುದು ಮಾತ್ರವಲ್ಲ, ಅವರ ಪರವಾಗಿ, ದೇಶದಲ್ಲಿ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳ ಕಳ್ಳಸಾಗಣೆ, ಉಗ್ರವಾದ ಕೃತ್ಯಕ್ಕೆ ಬೆಂಬಲ ನೀಡುವಂಥ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಎನ್‌ಐಎ ಹೇಳಿದೆ.

ಆ ಹಿನ್ನೆಲೆಯಲ್ಲಿ, ದೇಶದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಗ್ಯಾಂಗ್‌ಸ್ಟರ್‌ಗಳ ನೆಟ್‌ವರ್ಕ್‌ಗಳನ್ನು ಪರಿಶೀಲಿಸಿ, ಅವರ ಎಲ್ಲಾ ವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಅದು ಹೇಳಿದೆ ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next