Advertisement

ಧಾರವಾಡದ ಕೋವಿಡ್-19 ವೈರಸ್ ಸೋಂಕಿತ ವ್ಯಕ್ತಿಯ ಪ್ರಯಾಣ ಮಾಹಿತಿ 

11:49 AM Mar 27, 2020 | keerthan |

ಧಾರವಾಡ: ಇಲ್ಲಿನ ಹೊಸಯಲ್ಲಾಪುರದ ನಿವಾಸಿಗೆ ಕೋವಿಡ್-19 ವೈರಸ್ ಸೋಂಕು ದೃಢಪಟ್ಟಿದ್ದು, ಇದೀಗ ಆತನ ಪ್ರಯಾಣದ ವಿವರ ಲಭ್ಯವಾಗಿದೆ.

Advertisement

ಈ ವ್ಯಕ್ತಿಯು ಮಾ. 11 ರಂದು ಆಸ್ಟ್ರೇಲಿಯಾ ದೇಶದ ಪರ್ಥ್ ನಗರದಿಂದ ಪ್ರಯಾಣ ಪ್ರಾರಂಭಿಸಿದ್ದಾನೆ. ಇಎ 421 ಎಮಿರೇಟ್ಸ್ ವಿಮಾನದ ಮೂಲಕ ದುಬೈ ತಲುಪಿದ್ದಾರೆ. ದುಬೈನಿಂದ ಓಮನ್ ಏರ್ ಲೈನ್ಸ್ ಮೂಲಕ 12.35 ಕ್ಕೆ ಮಸ್ಕತ್ ನಗರ ತಲುಪಿದ್ದಾರೆ.12- 3-2020 ಮಧ್ಯಾಹ್ನ 2.45 ಕ್ಕೆ ಮಸ್ಕತ್ ನಗರದಿಂದ ಓಮನ್ ಏರ್ ಲೈನ್ಸ್ ಮೂಲಕ ಹೊರಟು ಸಂಜೆ 7 ಗಂಟೆಗೆ ಗೋವಾ ವಿಮಾನ ನಿಲ್ದಾಣ ತಲುಪಿದ್ದಾರೆ.

ಗೋವಾ ವಿಮಾನ ನಿಲ್ದಾಣದಿಂದ ಬಾಡಿಗೆ ಸ್ಕೂಟರ್ ಪಡೆದು ಪಣಜಿ ಬಸ್ ತಲುಪಿದ್ದಾರೆ. (12-3-2020) ಅದೇ  ರಾತ್ರಿ  8 .16 ನಿಮಿಷಕ್ಕೆ ವಾಹನ ಸಂಖ್ಯೆ : ಕೆ.ಎ. 26 ಎಫ್ 962 ಪಣಜಿ – ಗದಗ ಬೆಟಗೇರಿ  ಕೆ.ಎಸ್.ಆರ್.ಟಿ.ಸಿ.ಬಸ್ ಮೂಲ ಪ್ರಯಾಣ ಮಾಡಿ, 13-3-2020 ರಂದು ಬೆಳಿಗ್ಗೆ 01 ಗಂಟೆಗೆ ಧಾರವಾಡ ಬಸ್ ನಿಲ್ದಾಣಕ್ಕೆ ಆಗಮಿಸಿರುತ್ತಾನೆ. ಅಲ್ಲಿಂದ ಆಟೋ ಮೂಲಕ ಧಾರವಾಡದ ತಮ್ಮ ಮನೆ ತಲುಪಿದ್ದಾರೆ.

ಅನಾರೋಗ್ಯದ ಕಾರಣ 17-03-2020 ಧಾರವಾಡದ ಸ್ಪಂದನಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.18-03-2020 ರಿಂದ 21-03-2020 ರವರೆಗೆ ಓಪಿಡಿ ಸಂಖ್ಯೆ 6 ರೊಂದಿಗೆ ಎಸ್ ಡಿಎಂ ಆಸ್ಪತ್ರೆಯ ರೂಮ್ ನಂಬರ್ 4 ರಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ವ್ಯಕ್ತಿ ಪ್ರಯಾಣಿಸಿರುವ ವಿಮಾನ,ಬಸ್, ಆಟೋ ಮೂಲಕ  ಪ್ರಯಾಣಿಸಿರುವವರು, ಆತ ಭೇಟಿ ನೀಡಿರುವ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಹಾಗೂ ಆ ಸಮಯದಲ್ಲಿ ಹಾಜರಿದ್ದ ಸಾರ್ವಜನಿಕರಿಗೂ ಸೋಂಕು  ತಗಲುವ ಸಾಧ್ಯತೆ ಇರುವುದರಿಂದ , ಅಂತಹವರು ತಮ್ಮ ಮನೆಯಿಂದ ಹೊರಬರದೇ ಕಡ್ಡಾಯವಾಗಿ ಮನೆಯಲ್ಲಿಯೇ ಇರಬೇಕು. ಕೋರೊನಾ ಸಹಾಯವಾಣಿ 104 ಮತ್ತು 1077 ನಂಬರ್ ಗಳಿಗೆ ಕರೆ ಮಾಡಿ ತಮ್ಮ ವಿವರಗಳನ್ನು ನೀಡಬೇಕು. ಹಾಗೂ ಸೂಕ್ತ ಮಾರ್ಗದರ್ಶನ ಪಡೆದುಕೊಳ್ಳಬೇಕು. ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next