ಖಾಸಗಿ ಸಿಟಿ ಬಸ್‌ಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಕರು ಹೆಚ್ಚಾಗಿ ಫುಟ್‌ಬೋರ್ಡ್‌ಗಳಲ್ಲಿ ನಿಂತಿರುತ್ತಾರೆ. ಬಸ್‌ನಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶವಿದ್ದರೂ ನಿರ್ವಾಹಕರು ಎಚ್ಚರಿಕೆ ನೀಡಿದರೂ ಫುಟ್‌ಬೋರ್ಡ್ ಬಿಟ್ಟು ಕದಲದ ಅನೇಕ ಉದಾಹರಣೆಗಳು ದಿನಂಪ್ರತಿ ಬಸ್‌ಗಳಲ್ಲಿ ನಡೆಯುತ್ತಿವೆ. ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುವ ಬೆಳಗಿನ ಸಮಯ ಮತ್ತು ಸಂಜೆ ಹೊತ್ತಿನಲ್ಲಿ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಿವೆ.
Advertisement
ಈಗ ಸಾರಿಗೆ ಇಲಾಖೆ ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದು, ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸುವವರ ವಿರುದ್ಧ ಮತ್ತು ಆ ಬಸ್ ಮೇಲೆ ಕಾನೂನು ಕ್ರಮಕೈಗೊಳ್ಳಲು ಮುಂದಾಗಿದೆ. ಬಸ್ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣ ಮಾಡುವುದು ಕಾನೂನು ಪ್ರಕಾರ ಅಪರಾಧ. ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳಲ್ಲಿನ ಫುಟ್‌ಬೋರ್ಡ್ ಕನಿಷ್ಟ 52 ಸೆಂ.ಮೀ. ಎತ್ತರವಿರಬೇಕು ಎಂಬ ಕಾನೂನು ಇದೆ. ಆದರೆ ಹೊಸ ಬಸ್‌ಗಳಲ್ಲಿ ಈ ಸಮಸ್ಯೆ ತಲೆದೋರುವುದಿಲ್ಲ. ಆದರೆ ಕೆಲವು ಹಳೆ ಸಿಟಿ ಬಸ್‌ಗಳು ಇದರ ಪಾಲನೆಯಾಗುತ್ತಿಲ್ಲ. ಫುಟ್‌ಬೋರ್ಡ್ ತೀರ ಕೆಳಗಿರುವುದರಿಂದ ಪಾವೂರು, ಪೊಳಲಿ ಸಹಿತ ಕೆಲವು ಪ್ರದೇಶಗಳಲ್ಲಿ ಫುಟ್‌ಬೋರ್ಡ್‌ನಲ್ಲಿ ನಿಂತಿದ್ದವರಿಗೆ ಗಾಯಗಳಾದ ಉದಾಹರಣೆಗಳಿವೆ. ನಗರದಲ್ಲಿ ಒಟ್ಟಾರೆ 363 ಖಾಸಗಿ ಸಿಟಿ ಬಸ್‌ಗಳ ದಿನಂಪ್ರತಿ ಓಡಾಡುತ್ತಿದ್ದು, ಕೇವಲ 5 ಸಿಟಿ ಬಸ್‌ಗಳಲ್ಲಿ ಮಾತ್ರ ಸ್ವಯಂಚಾಲಿತ ಬಾಗಿಲುಗಳಿವೆ.