Advertisement
ಆತುರವಾಗಿ ಶುರುವಾದ ನನ್ನ ಪಯಣ ಅಷ್ಟೊಂದು ಸುಸಜ್ಜಿತವಾಗಿ ಏರ್ಪಾಡಾಗಿರಲಿಲ್ಲ. ಆದರೂ ನನ್ನ ಕುಟುಂಬದವರ ಸಹಾಯ ಪಡೆದುಕೊಂಡು ಹೋದೆ. ಆದರೆ ನನಗೆ ಏನು ಒಂದು ದೈರ್ಯ, ಕೈಯಲ್ಲಿ ದುಡ್ಡು ಒಂದಿದ್ರೆ ಎಲ್ಲಿಗೆ ಬೇಕಾದರೂ ಹೋಗಿ ಬರಬಹುದು ಎಂದು.
Related Articles
Advertisement
ನಂತರ ಹೇಗಾದರೂ ಮಾಡಿ ಉದ್ಯೋಗ ಹುಡುಕಬೇಕೆಂಬ ಆಸೆಯಿಂದ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ನಡೆಸಲು ಮುಂದಾದೆ, ಆದರೆ ಅಲ್ಲಿಯೂ ಕೂಡ ದಿಟ್ಟ ನಿರ್ಧಾರವಿಲ್ಲದೆ ಮತ್ತೆ ವಿಫಲನಾಗಿ ಕೊನೆಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆಯಲು ಮುಂದಾದೆ. ಇದೆಲ್ಲವನ್ನೂ ಪಯಣದುದಕ್ಕೂ ಯೋಚಿಸಿದಾಗ ಅರಿವಾದದ್ದು ಯಾಕೆ ನನ್ನ ವಿದ್ಯಾಭ್ಯಾಸದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲವೆಂದು.
ಒಂದು ವೇಳೆ ಒಳ್ಳೆಯ ಪದವಿ ಅಥವಾ ಶ್ರದ್ಧೆಯಿಂದ ಅಭ್ಯಾಸ ಮಾಡಿದ್ದರೆ ಅಂದುಕೊಂಡ ಹಾಗೆ ಇಷ್ಟೊತ್ತಿಗೆ ಒಂದು ಒಳ್ಳೆಯ ಉದ್ಯೋಗದಲ್ಲಿ ಇರುತ್ತಿದ್ದೆ. ಇದೆಲ್ಲವನ್ನೂ ಯೋಚಿಸಿಕೊಂಡು ಸಾಗುವಾಗ ಇದಕ್ಕೆ ಮೂಲ ಕಾರಣ ಹುಡುಕುವ ತವಕ ಹೆಚ್ಚಿತ್ತು. ಈ ರೀತಿಯಾಗಲು ನನ್ನ ಸೋಮಾರಿತನ ಕಾರಣವೋ, ನನ್ನ ಕುಟುಂಬದ ಜವಾಬ್ದಾರಿಗಳು ಕಾರಣವೋ ಯಾವುದು ಎಂಬುದು ತಿಳಿಯದಂತಾಗಿ ಮುಖವಿಶ್ಮಿತನಾದೆ.
ಆದರೆ ನನ್ನ ಏಕಾಂಗಿ ಪಯಣವು ನಾನು ಮಾಡಿದ ಎಲ್ಲ ಸರಿತಪ್ಪುಗಳನ್ನು ನನಗೆ ಅರಿವು ಮಾಡಿಕೊಟ್ಟು, ಜೀವನದಲ್ಲಿ ಬಂದ ಯಾವ ಸಂಬಂಧವನ್ನು ಕಳೆದುಕೊಳ್ಳಬೇಡ ಹಾಗೂ ತೆಗೆದುಕೊಂಡ ನಿರ್ಧಾರಗಳ ಮೇಲೆ ನಿರಂತರ ಪರಿಶ್ರಮ ಕಾರ್ಯನಿರ್ವಹಿಸಬೇಕು ಎಂದು ಮನವರಿಕೆ ಮಾಡಿಕೊಟ್ಟಿತು. ಜೀವನದಲ್ಲಿ ಪ್ರತಿಯೊಬ್ಬರೂ ಏಕಾಂಗಿಯಾಗಿ ಹೋರಾಟ ನಡೆಸುವುದು ಅತ್ಯವಶ್ಯಕ ಮತ್ತು ಅನಿವಾರ್ಯ ಕೂಡ.
-ಮಡು ಮೂಲಿಮನಿ
ಧಾರವಾಡ