ಮಂಗಳೂರು: ಮಂಗಳೂರು – ಬೆಂಗಳೂರು ರೈಲು ಮಾರ್ಗದ ಸಕಲೇಶಪುರ-ಬಳ್ಳುಪೇಟೆ ನಿಲ್ದಾಣದ ನಡುವೆ ಸಕಲೇಶಪುರ ಸಮೀಪ ಮತ್ತೆ ಗುಡ್ಡ ಕುಸಿತ ಉಂಟಾಗಿರುವುದರಿಂದ ಆ. 19 ಮತ್ತು 20ರಂದು ಸಂಚರಿಸಬೇಕಾಗಿದ್ದ ಹಲವು ರೈಲುಗಳನ್ನು ರದ್ದು ಮಾಡಲಾಗಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಆ. 19 ಮತ್ತು 20ರಂದು ಪ್ರಯಾಣ ಆರಂಭಿಸಬೇಕಾಗಿದ್ದ ನಂ. 07378 ಮಂಗಳೂರು ಸೆಂಟ್ರಲ್- ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ರದ್ದಾಗಿದೆ. ವಿಜಯಪುರಿಂದ ಆ. 19ರಂದು ಪ್ರಯಾಣ ಆರಂಭಿಸಬೇಕಾಗಿದ್ದ ನಂ. 07377 ವಿಜಯಪುರ- ಮಂಗಳೂರು ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲು ರದ್ದಾಗಿದೆ.
ಮುರುಡೇಶ್ವರದಿಂದ ಆ. 19ರಂದು ಪ್ರಯಾಣ ಆರಂಭಿಸಬೇಕಿದ್ದ ನಂ.16586 ಮುರುಡೇಶ್ವರ – ಎಸ್‌ಎಂವಿಬಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು, ಬೆಂಗಳೂರಿನಿಂದ ಆ. 19ರಂದು ಪ್ರಯಾಣ ಆರಂಭಿಸಬೇಕಾಗಿದ್ದ ನಂ.16585 ಎಸ್‌ಎಂವಿಬಿ ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ರದ್ದಾಗಿದೆ.
ಕೆಆರ್‌ಎಸ್ ಬೆಂಗಳೂರಿನಿಂದ ಆ. 19ರಂದು ಪ್ರಯಾಣ ಆರಂಭಿಸಬೇಕಾಗಿದ್ದ ನಂ.16595 ಕೆಎಸ್‌ಆರ್ ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್ ರೈಲು, ಕಾರವಾರದಿಂದ ಆ.19ರಂದು ಪ್ರಯಾಣ ಆರಂಭಿಸಬೇಕಾಗಿದ್ದ ನಂ. 16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ರದ್ದಾಗಿದೆ.
ಕೆಆರ್‌ಎಸ್ ಬೆಂಗಳೂರಿನಿಂದ ಆ. 19ರಂದು ಪ್ರಯಾಣ ಆರಂಭಿಸಬೇಕಾಗಿದ್ದ ನಂ. 16511 ಕೆಎಸ್‌ಆರ್ ಬೆಂಗಳೂರು- ಕಣ್ಣೂರು ಎಕ್ಸ್‌ಪ್ರೆಸ್ ರೈಲು, ಕಣ್ಣೂರಿನಿಂದ ಆ.19ರಂದು ಪ್ರಯಾಣ ಆರಂಭಿಸಬೇಕಾಗಿದ್ದ ನಂ.16512 ಕಣ್ಣೂರು- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ರದ್ದಾಗಿದೆ.
ಯಶವಂತಪುರ ಜಂಕ್ಷನ್‌ನಿಂದ ಆ. 19ರಂದು ಪ್ರಯಾಣ ಆರಂಭಿಸಬೇಕಾಗಿದ್ದ ನಂ. 16515 ಯಶವಂತಪುರ ಜಂಕ್ಷನ್- ಕಾರವಾರ ಎಕ್ಸ್‌ಪ್ರೆಸ್, ಕಾರವಾರದಿಂದ ಆ.20ರಂದು ಪ್ರಯಾಣ ಆರಂಭಿಸಬೇಕಾಗಿದ್ದ ನಂ. 16516 ಕಾರವಾರ -ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ರದ್ದಾಗಿದೆ ಎಂದು ದಕ್ಷಿಣ ರೈಲ್ವೇ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.