ಅಭಿವೃದ್ಧಿಯ ಆಶಾಭಾವ
ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ
Advertisement
ಮಹಾನಗರ: ಹೊಸ ಯೋಜನೆಯ ಕನಸುಗಳೊಂದಿಗೆ ಆರಂಭವಾದ “2019′ ಮಂಗಳೂರಿಗೆ ಒಂದಿಷ್ಟು ಹೊಸತನ-ಅಭಿರುಚಿಯನ್ನು ನೀಡಿದರೂ ಮತ್ತೂಂದಿಷ್ಟು ವಿವಾದಗಳನ್ನು ಎಳೆದು ಸುದ್ದಿಯಾಗಿದ್ದು; ಇದೀಗ ವರ್ಷದ ಕೊನೆಯ ದಿನದಲ್ಲಿ ನಾವಿದ್ದೇವೆ. ಲವಲವಿಕೆಯಿಂದ ಹೊಸ ವರ್ಷ ಆಮಂತ್ರಿಸುವ ಸಡಗರಕ್ಕೆ ಮಂಗಳೂರು ಸದ್ಯ ಸಜ್ಜಾಗುತ್ತಿದ್ದು, ಅಭಿವೃದ್ಧಿಯ ಆಶಾಭಾವದೊಂದಿಗೆ ಮುನ್ನಡೆಯುವ ಕಾತುರದಲ್ಲಿದೆ.
Related Articles
ಮಳೆಗಾಲದಲ್ಲಂತು ನಗರದ ಹಲವೆಡೆ ನೂರಾರು ಸಮಸ್ಯೆಗಳು ಎದುರಾಯಿತು. ಡೆಂಗ್ಯೂ ಜ್ವರದಿಂದ ನಗರದ ಹಲವು ಭಾಗಗಳಲ್ಲಿ ನೂರಾರು ಮಂದಿ ನಲುಗಿದರು. ಡೆಂಗ್ಯೂ ವಿರುದ್ಧ ನಗರದಲ್ಲಿ ಅಆಂದೋಲನ ನಡೆಯಿತು. ನದಿ ತೀರದಲ್ಲಿ ನೀರು ಉಕ್ಕಿ ಬಂದು ಹಲವರನ್ನು ನಿರಾಶ್ರಿತರನ್ನಾಗಿಸಿದರೆ, ಸಿಟಿಯ ಮಧ್ಯೆ ತಗ್ಗುಪ್ರದೇಶದಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತವಾಯಿತು. ಸಿಡಿಲಿನ ಆಘಾತಕ್ಕೆ, ಮಣ್ಣು ಕುಸಿದು ನಗರದಲ್ಲಿ ಕೆಲವರು ಪ್ರಾಣ ಕಳೆದುಕೊಂಡರು. ಕೆಲವೆಡೆ ಪಾಲಿಕೆಯ ಎಡವಟ್ಟಿಗೆ ಇಂತಹ ಸಮಸ್ಯೆ ಎದುರಾಗಿದ್ದು, ಮುಂದೆಯಾದರೂ ಇಂತಹ ಸಮಸ್ಯೆಗಳಿಗೆ ಪಾಲಿಕೆ ಆಡಳಿತ ಇತಿಶ್ರೀ ಹಾಡುವ ಸಂಕಲ್ಪ ಹೊಸ ವರ್ಷದಲ್ಲಿ ಮಾಡಬೇಕಿದೆ.
Advertisement
ಸಂತ್ರಸ್ತರ ಬದುಕಿಗೆ ಸರಕಾರ ದಾರಿ ತೋರಲಿಪಚ್ಚನಾಡಿಯ ತ್ಯಾಜ್ಯರಾಶಿಯು ಮಳೆಯ ರಭಸದಿಂದ ಕೊಚ್ಚಿ ಮಂದಾರವೆಂಬ ಹಸಿರ ಸಿರಿಗೆ ಎರಗಿ ಬಂದು 23 ಕುಟುಂಬಗಳು ಮನೆ ಕಳೆದುಕೊಂಡು ಇದೀಗ ನಿರ್ವಸಿತರಾಗಿ ಬದುಕು ನಡೆಸುತ್ತಿದ್ದಾರೆ. ಆಗಸ್ಟ್‌ನಲ್ಲಿ ಘಟನೆ ನಡೆದರೂ ಇಲ್ಲಿಯವರೆಗೆ ನಿರಾಶ್ರಿತರಿಗೆ ಪರಿಹಾರ ಸಿಕ್ಕಿಲ್ಲ; ಹರಿದು ಬಂದ ತ್ಯಾಜ್ಯವನ್ನು ತೆಗೆಯುವ ಪ್ರಯತ್ನವೂ ನಡೆದಿಲ್ಲ. ಜನಪ್ರತಿನಿಧಿಗಳ ದಂಡು ಹತ್ತಾರು ಬಾರಿ ಇಲ್ಲಿಗೆ ಭೇಟಿ ನೀಡಿದರೂ ನಿರ್ವಸಿತರ ಶಾಶ್ವತ ಕಣ್ಣೊರೆಸುವ ಪ್ರಯತ್ನ ನಡೆದೇ ಇಲ್ಲ. 2020ರಲ್ಲಾದರೂ ಮಂದಾರ ಸಂತ್ರಸ್ತರ ಬದುಕಿಗೆ ಸರಕಾರ ದಾರಿ ತೋರಲಿ. ಈ ವರ್ಷದ ಕೊನೆಯಲ್ಲಿ ಮಂಗಳೂರಿನಲ್ಲಿ ನಿಷೇಧಾಜ್ಞೆ ಮಧ್ಯೆ ನಡೆದ ಪ್ರತಿಭಟನೆ ತಾರಕಕ್ಕೆ ಹೋಗಿ ಪೊಲೀಸ್ ಗೋಲಿಬಾರ್‌ಗೆ ಇಬ್ಬರು ಪ್ರಾಣ ಕಳೆದುಕೊಂಡರು. ನಡೆಯಬಾರದ ಘಟನೆ ನಡೆದ ಪರಿಣಾಮದಿಂದ ನಗರದಲ್ಲಿ ಕರ್ಪ್ಯೂ ಹೇರಿ ಜನಜೀವನದ ಮೇಲೆ ಬಹುದೊಡ್ಡ ಪರಿಣಾಮ ಬೀರಿತು. ಬಳಿಕ ರಾಜಕೀಯ ನಾಯಕರ ವಾಕ್ಸಮರಕ್ಕೆ ಮಂಗಳೂರು ನಲುಗಿ ಹೋಯಿತು. “ಸ್ಮಾರ್ಟ್‌ಸಿಟಿ’; ಹೆಸರಿನಂತೆ ಕಾರ್ಯವಾಗಲಿ!
ಮಂಗಳೂರು ನಗರಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಮಂಜೂರಾಗಿ ಬರೋಬ್ಬರಿ ನಾಲ್ಕು ವರ್ಷಗಳೇ ಕಳೆಯಿತು. ನಗರದ ಚಿತ್ರಣವೇ ಬದಲಾಗಬಹುದು ಎಂದು ಅಂದಾಜಿಸಿದ್ದ ಸ್ಮಾರ್ಟ್‌ಸಿಟಿ ಯೋಜ ನೆಗೆ ಇನ್ನೂ ಕೂಡ ಜೀವ ಕಲೆ ಬಂದಿಲ್ಲ. ಪಾಲಿಕೆ ಅನುಷ್ಠಾನಿಸಿದ್ದ “ಕ್ಲಾಕ್ ಟವರ್’ ಯೋಜ ನೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸೇರಿಸಿರುವುದರಿಂದ ಇದೊಂದು ಯೋಜನೆ ಈ ವರ್ಷ ಮುಗಿದಿದೆ ಎನ್ನಬಹುದು. ಉಳಿದಂತೆ ಬಸ್‌ನಿಲ್ದಾಣ, ಒಳಚರಂಡಿ, ಅಂಡರ್‌ಪಾಸ್ ಸಹಿತ ಹಲವಾರು ಯೋಜನೆಗಳು ಈಗಷ್ಟೇ ಕಾಮಗಾರಿ ಆರಂಭ ಕಂಡಿದೆ. ಹೀಗಾಗಿ 2020ಕ್ಕೆ ಸ್ಮಾರ್ಟ್‌ಸಿಟಿಯ ಎಲ್ಲಾ ಯೋಜನೆಗಳು ಪೂರ್ಣಗೊಳ್ಳಲಿ ಎಂಬುದು ಅಪೇಕ್ಷೆ. ಸಿದ್ದಾರ್ಥ್ ಆತ್ಮಹತ್ಯೆ-ಜಾರಿದ ವಿಮಾನ!
ಕಾಫಿ ಡೇ ಮಾಲಕ ಸಿದ್ಧಾರ್ಥ್ ಆತ್ಮಹತ್ಯೆ, ಮಂಗಳೂರು ಏರ್‌ಪೋರ್ಟ್‌ನಲ್ಲಿ ರನ್‌ವೇ ಬಿಟ್ಟು ವಿಮಾನ ಜಾರಿದ್ದು ಈ ವರ್ಷ ದೊಡ್ಡ ಸುದ್ದಿ ಮಾಡಿದ್ದರೆ, ವರ್ಷಾಂತ್ಯಕ್ಕೆ ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್ ರಾಷ್ಟ್ರೀಯವಾಗಿ ಗಮನಸೆಳೆಯಿತು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಸಹಿತ ರಾಷ್ಟ್ರೀಯ ಹಾಗೂ ರಾಜ್ಯದ ಜನನಾಯಕರು ಈ ವರ್ಷ ಮಂಗಳೂರಿಗೆ ಆಗಮಿಸಿದ್ದರು. ನಟಿ ಶಿಲ್ಪಾ ಶೆಟ್ಟಿ, ಕ್ರಿಕೆಟಿಗ ರಾಹುಲ್ ದ್ರಾವಿಡ್ ಸಹಿತ ಹಲವು ಸ್ಟಾರ್‌ಗಳು ಮಂಗಳೂರಿಗೆ ಬಂದಿದ್ದರು. ನದಿ ಉತ್ಸವ ಸೇರಿದಂತೆ ಹಲವು ಸಾಂಸ್ಕೃತಿಕ ಚಟುವಟಿಕೆಗಳು ಮಂಗಳೂರಿಗೆ ಹೊಸ ದಿಕ್ಕು ನೀಡುವಲ್ಲಿ ಯಶಸ್ವಿಯಾಯಿತು. ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಬೈಠಕ್, ಮಂಗಳೂರು ಲಿಟ್‌ಫೆಸ್ಟ್ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ನಗರ ಸಾಕ್ಷಿಯಾಯಿತು. ಕದ್ರಿ ಗೋಪಾಲ್‌ನಾಥ್ ಸಹಿತ ಹಲವು ಶ್ರೇಷ್ಠರನ್ನು ಇದೇ ವರ್ಷ ಕಳೆದುಕೊಂಡಿರುವುದು ಬೇಸರದ ಸಂಗತಿ.