Advertisement

ಶ್ರಮಿಕ ರೈಲುಗಳಲ್ಲಿ 3.76ಲಕ್ಷ ವಲಸಿಗರ ಪ್ರಯಾಣ

12:29 PM Jun 29, 2020 | Suhan S |

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯದಿಂದ ಇಲ್ಲಿಯವರೆಗೆ 256 ಶ್ರಮಿಕ್‌ ರೈಲುಗಳ ಮೂಲಕ 3.76 ಲಕ್ಷ ವಲಸಿಗರನ್ನು ತವರು ರಾಜ್ಯಗಳಿಗೆ ತಲುಪಿಸುವ ಕಾರ್ಯ ಮಾಡಲಾಗಿದೆ. ಮೇ 4ರಿಂದ ಆರಂಭವಾದ ಶ್ರಮಿಕ್‌ ರೈಲುಗಳ ಮೂಲಕ ಮೊದಲ 13 ದಿನಗಳಲ್ಲಿ ಒಂದು ಲಕ್ಷ ಜನರು ಅವರ ರಾಜ್ಯಗಳಿಗೆ ತೆರಳಿದರೆ ನಂತರದ ಆರು ದಿನಗಳಲ್ಲಿ 2 ಲಕ್ಷ ಜನರು ಪ್ರಯಾಣಿಸಿದ್ದಾರೆ.

Advertisement

ರಾಜ್ಯದಿಂದ 248 ರೈಲುಗಳ ಮೂಲಕ 3.63 ಜನರುತಮ್ಮ ರಾಜ್ಯಗಳಿಗೆ ಹೋಗಿದ್ದಾರೆ. ಉಳಿದ 8 ರೈಲುಗಳು ತಮಿಳುನಾಡು ಹೊಸೂರು ನಿಲ್ದಾಣದಿಂದ 12,718 ಜನರು ಪ್ರಯಾಣ ಮಾಡಿದ್ದಾರೆ.ಬೆಂಗಳೂರು ವಿಭಾಗ 223 ಶ್ರಮಿಕ್‌ ರೈಲುಗಳು ಮೂಲಕ 3.28 ವಲಸಿಗರು, ಹುಬ್ಬಳ್ಳಿ ವಿಭಾಗದ 21 ರೈಲುಗಳಲ್ಲಿ 30,580 ಹಾಗೂ ಮೈಸೂರು ವಿಭಾಗದಿಂದ 12 ರೈಲುಗಳ ಮೂಲಕ 16,974 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ರಾಜ್ಯ ಸರಕಾರದ ಸಹಕಾರ ಹಾಗೂ ಬೇಡಿಕೆಯ ಮೇರೆಗೆ ಇಷ್ಟೊಂದು ವಲಸಿಗರನ್ನು ಅವರ ರಾಜ್ಯಗಳಿಗೆ ತಲುಪಿಸಲಾಗಿದೆ. ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿಅನುಸರಿಸಲಾಗಿದೆ. ಪ್ರಯಾಣಿಸುವ ವಲಸಿಗರ ಆರೋಗ್ಯ ತಪಾಸಣೆಯಿಂದ ಹಿಡಿದು ಆಹಾರ, ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next