Advertisement
“ದೇಶ ಸುತ್ತು, ಕೋಶ ಓದು’ ಎಂಬ ಮಾತಿದೆ. ದೇಶ ಸುತ್ತುವುದರಿಂದ ಕೋಶದಲ್ಲಿರುವ ಜೀವನಾನುಭವ ದೊರೆಯುತ್ತದೆ ಎಂಬ ಮಾತು ಸತ್ಯ. ಆದರೆ ದೇಶ ಸುತ್ತುವ ಮೊದಲು ನಾವು ಓಡಾಡಬೇಕಾದ ಸ್ಥಳಗಳ ಕುರಿತು ಚಿಂತಿಸಬೇಕಲ್ಲವೆ? ಜೊತೆಗೆ, ಎಲ್ಲೆಲ್ಲಿಗೆ ಪ್ರವಾಸ ಹೋಗಬಹುದು? ಅಲ್ಲಿ ಎಲ್ಲಿ ಉಳಿದುಕೊಳ್ಳಬಹುದು ಎಂಬ ವಿಷಯವಾಗಿ ಸರಿಯಾದ ಯೋಜನೆಯೂ ಬೇಕು. ಅದನ್ನು ವ್ಯವಸ್ಥೆ ಮಾಡಿಕೊಡಲು ಟೂರ್ ಏಜೆನ್ಸಿಗಳಿವೆ.
Related Articles
ಯಾವುದೇ ವಿಷಯದಲ್ಲಿ ಪಿಯುಸಿ ಪೂರೈಸಿದ ಬಳಿಕ ಟ್ರಾವೆಲ್ ಟೂರಿಸಮ್ ಪದವಿ ಅಭ್ಯಾಸ ಮಾಡಿ ಟ್ರಾವೆಲ್ ಏಜೆಂಟ್ ಆಗಬಹುದು. ಅಥವಾ ಪದವಿಯಲ್ಲಿ ಟ್ರಾವೆಲ್ ಟೂರಿಸಮ್/ ಪಬ್ಲಿಕ್ ರಿಲೇಷನ್ ವಿಷಯ ಅಭ್ಯಾಸ ಮಾಡಿ, ಸ್ನಾತಕೋತ್ತರ ಪದವಿಯಲ್ಲಿ ಮಾಸ್ಟರ್ ಆಫ್ ಮ್ಯಾನೇಜ್‌ಮೆಂಟ್ ಮಾಡಿಯೂ ಟ್ರಾವೆಲ್ ಮ್ಯಾನೇಜರ್ ಆಗಬಹುದು. ಐಎಟಿಟಿಎ/ ಯುಎಫ್ಟಿಟಿಎ/ ಎಫ್ಐಎಟಿಟಿಎ ಸರ್ಟಿಫಿಕೇಷನ್ ಕೋರ್ಸ್ ಮಾಡಿ, ಟ್ರಾವೆಲ್ ಎಜೆನ್ಸಿಗಳಲ್ಲಿ ವೃತ್ತಿ ನೈಪುಣ್ಯತೆ ಸಾಧಿಸಿಯೂ ಗುರಿ ಮುಟ್ಟಬಹುದು.
Advertisement
ಏನೇನು ಗೊತ್ತಿರಬೇಕು?– ದೇಶ ಹಾಗೂ ವಿದೇಶದ ಪ್ರವಾಸಿ ತಾಣಗಳ ಪರಿಚಯ
– ಪ್ರವಾಸಿಗನ ಅವಶ್ಯಕತೆ ಅರಿವು ಮುಖ್ಯ
– ಪ್ರಯಾಣದ ಸಮಯ, ಮಾರ್ಗ, ಯಾತ್ರಿಕರು ಉಳಿದುಕೊಳ್ಳಲು ಹೋಟೆಲ್, ಬಾಡಿಗೆಗೆ ಸಿಗುವ ಕಾರ್, ಟ್ಯಾಕ್ಸಿಗಳ ಸಂಪರ್ಕ ಸಂಖ್ಯೆ ಇತ್ಯಾದಿಗಳ ಬಗ್ಗೆ ತಿಳಿವಳಿಕೆ.
– ಸೂಕ್ತ ವಾತಾವರಣ ವ್ಯವಸ್ಥೆ, ಚಿಕಿತ್ಸಾ ಗುಣ ಅಗತ್ಯ
– ಆಯಾ ಸ್ಥಳದ ಕಲೆ, ಸಂಸ್ಕೃತಿ, ಇತಿಹಾಸ ಕುರಿತು ವಿಶೇಷ ಜ್ಞಾನ
– ನಾನಾ ಭಾಷೆ ಸಂಬಂಧಿ ಅರಿವು. ಉತ್ತಮ ಸಂವಹನಾ ಕೌಶಲ್ಯ ಅವಕಾಶಗಳು ಎಲ್ಲೆಲ್ಲಿ?
ಸರ್ಕಾರಿ ಪ್ರವಾಸಿ ವಿಭಾಗ
ಟ್ರಾವೆಲ್ ಏಜೆನ್ಸಿಗಳು
ಟೂರ್ ಆಪರೇಟರ್‌ಗಳು
ಸಿವಿಲ್ ಏವಿಯೇಷನ್‌ಗಳು
ರೈಲ್ವೆ ಇಲಾಖೆ
ಕ್ರೂಸ್ ಲೈನರ್ ಓದುವುದೆಲ್ಲಿ?
ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಕ್ರೈಸ್ಟ್ ಕಾಲೇಜು, ಹೊಸೂರು ರಸ್ತೆ, ಬೆಂಗಳೂರು
ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್, ಇಂದಿರಾನಗರ, ಬೆಂಗಳೂರು
ಇಂದಿರಾ ಅಕಾಡೆಮಿ ಡಿಗ್ರಿ ಕಾಲೇಜು, ಕಲ್ಯಾಣನಗರ, ಬೆಂಗಳೂರು
ರೇವಾ ಯೂನಿವರ್ಸಿಟಿ, ಯಲಹಂಕ, ಬೆಂಗಳೂರು
ಸ್ಕೈಬರ್ಡ್ ಏವಿಯೇಷನ್, ಶಂಕರನಗರ, ಬೆಂಗಳೂರು
ಮೌಂಟ್ ಕಾರ್ಮೆಲ್ ಕಾಲೇಜು, ಪ್ಯಾಲೇಸ್ ರೋಡ್, ಬೆಂಗಳೂರು – ಅನಂತನಾಗ್ ಎನ್.