Advertisement

ರೈಲಿನಲ್ಲಿ   ಸಿಲಿಂಡರ್‌ ಸಾಗಾಟ ಪತ್ತೆ

10:50 AM Mar 11, 2017 | |

ಉಡುಪಿ: ರೈಲಿನಲ್ಲಿ ಗ್ಯಾಸ್‌ ಸಿಲಿಂಡರ್‌ ಅನ್ನು ಸಾಗಿಸುತ್ತಿದ್ದುದನ್ನು ರೈಲ್ವೇ ಪ್ರೊಟೆಕ್ಷನ್‌ ಫೋರ್ಸ್‌ನವರು (ಆರ್‌ಪಿಎಫ್) ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ರಾಣಾ ಸಿಂಗ್‌ ಬಂಧಿತ ವ್ಯಕ್ತಿ. ಈತ ಉಡುಪಿ ಯಿಂದ ಕಣ್ಣೂರಿಗೆ ಗೃಹಬಳಕೆ ಸಿಲಿಂಡರ್‌ ಅನ್ನು ಸಾಗಿಸುತ್ತಿದ್ದುದಾಗಿ ತಿಳಿಸಿದ್ದಾನೆ ಎಂದು ಆರ್‌ಪಿಎಫ್ ಪೊಲೀಸರು ಹೇಳಿದ್ದಾರೆ. 

Advertisement

ಗ್ಯಾಸ್‌ ಸಿಲಿಂಡರ್‌, ಪಟಾಕಿ, ಪೆಟ್ರೋಲ್‌ ಮೊದಲಾದ ಯಾವುದೇ ಅಪಾಯಕಾರಿ ಸೊತ್ತುಗಳನ್ನು ಪ್ರಯಾಣಿಕರ ರೈಲಿನಲ್ಲಿ ಸಾಗಿಸಿದಲ್ಲಿ ಅಂತಹ ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡು ಸೊತ್ತುಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಆರ್‌ಪಿಎಫ್ ಇನ್ಸ್‌ಪೆಕ್ಟರ್‌ ಶಿವರಾಮ್‌ ರಾಠೊಡ್‌  ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next