Advertisement

ನಿಧಾನವಾಗಿ ಗೇರ್‌ ಬದಲಿಸುತ್ತಿರುವ ಸಿಬ್ಬಂದಿ

01:53 PM Apr 12, 2021 | Team Udayavani |

ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರದ ನಡುವೆಯೂ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ಕ್ರಮೇಣಹೆಚ್ಚಾಗುತ್ತಿದೆ. ಸರಕಾರ ಪ್ರಯೋಗ ಮಾಡುತ್ತಿರುವಅಸ್ತ್ರಗಳ ಪರಿಣಾಮ ಕೆಲ ಸಿಬ್ಬಂದಿ ಡಿಪೋಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಾಗಿ ಐದನೇ ದಿನ ಮುಷ್ಕರದಸಂದರ್ಭದಲ್ಲಿ ಹಳೇ ಬಸ್‌ ನಿಲ್ದಾಣದಿಂದ ಸಾರಿಗೆ ಸಂಸ್ಥೆ ಹಲವು ಬಸ್‌ಗಳು ಸಂಚಾರ ಮಾಡಿದವು.

Advertisement

ಸರಕಾರ ಆರಂಭದಲ್ಲಿ ಮನವೊಲಿಕೆ ನಂತರ ನೋಟಿಸ್‌, ಮೊಬೈಲ್‌ಗ‌ಳಿಗೆ ಸೂಚನೆಗಳ ಸಂದೇಶ, ವಸತಿಗೃಹ ಖಾಲಿ ಮಾಡಿಸುವ ನೋಟಿಸ್‌, ವಜಾ ಕ್ರಮಕ್ಕೆ ಸಿಬ್ಬಂದಿ ಜಗ್ಗಲಿಲ್ಲ. ಆದರೆ ತರಬೇತಿ ಸಿಬ್ಬಂದಿಯೊಂದಿಗೆಕಾಯಂ ಸಿಬ್ಬಂದಿ ವರ್ಗಾವಣೆ ಅಸ್ತ್ರ ಬಳಸುತ್ತಿದ್ದಂತೆಕೆಲ ಸಿಬ್ಬಂದಿ ಡಿಪೋದತ್ತ ಮುಖ ಮಾಡುತ್ತಿದ್ದಾರೆ.ಪರಿಣಾಮ ಕಳೆದ ನಾಲ್ಕು ದಿನಗಳಿಗಿಂತ ಐದನೇದಿನ ಒಂದಿಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳು ರಸ್ತೆಗಿಳಿದವು.

ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಅವರು ಏ. 7ರಿಂದ 10ರ ವರೆಗೆಹಾಗೂ ಏ.11 ರಿಂದ ಕರ್ತವ್ಯಕ್ಕೆ ಬರುವ ಸಿಬ್ಬಂದಿಗೆಮಾರ್ಚ್‌ ತಿಂಗಳ ವೇತನ ನೀಡುವುದಾಗಿ ಆದೇಶಹೊರಡಿಸಿದ್ದರು. ಹೀಗಾಗಿ ಕೆಲವರು ಕರ್ತವ್ಯಕ್ಕೆಹಾಜರಾಗಿದ್ದಾರೆ. ವರ್ಗಾವಣೆ ಅಸ್ತ್ರಕ್ಕೆ ಕೆಲವರು ಬೆಂಡಾಗಿದ್ದಾರೆ ಎನ್ನಲಾಗಿದೆ.

ಬೇಡಿಕೆ ಈಡೇರುವವರೆಗೆ ಬರೋಲ್ಲ: ಸರಕಾರದ ದಮನಕಾರಿ ಕ್ರಮಗಳನ್ನು ಅಧಿಕಾರಿಗಳು ಪಾಲನೆಮಾಡುತ್ತಿದ್ದಾರೆ. ಇದು ಮುಷ್ಕರ ಹತ್ತಿಕ್ಕುವಕಾರ್ಯವಾಗಿದೆ. ಸರಕಾರದ ಕುತಂತ್ರ ಅಸ್ತ್ರಗಳಿಗೆ ಬಲಿಯಾಗಬಾರದು ಎನ್ನುವ ಕಾರಣಕ್ಕೆ ಕೆಲ ಸಿಬ್ಬಂದಿ ಒಂದು ದಿನ ಕೆಲಸ ಮಾಡಿ ನಂತರ ಮುಷ್ಕರದಲ್ಲಿಪಾಲ್ಗೊಳ್ಳುತ್ತಿದ್ದಾರೆ. ಸಾವಿರಾರು ಬಸ್‌ಗಳುಓಡಾಡುವ ಸಂದರ್ಭದಲ್ಲಿ ಎರಡಂಕಿಯ ಬಸ್‌ಗಳನ್ನು ಓಡಿಸಿದಾಕ್ಷಣ ಮುಷ್ಕರಕ್ಕೆ ಯಾವುದೇದಕ್ಕೆಯಾಗುವುದಿಲ್ಲ. ಯಾವುದೇ ಕಾರಣಕ್ಕೂ ಬೇಡಿಕೆಈಡೇರುವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎನ್ನುವ ಹಠ ಬಹುತೇಕ ಕಾರ್ಮಿಕರದ್ದಾಗಿದೆ.

ಗ್ರಾಮಾಂತರ ವಿಭಾಗದಿಂದ 26 ಬಸ್‌ :

Advertisement

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ 26 ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗಿದೆ. ಹಳೇ ಬಸ್‌ನಿಲ್ದಾಣದಿಂದ ಗದಗಕ್ಕೆ 26 ಟ್ರಿಪ್‌, ಬೆಳಗಾವಿಗೆ 4, ಬಾಗಲಕೋಟೆಗೆ 6, ಕಲಘಟಗಿಗೆ 6, ಮತ್ತಿತರ ಸ್ಥಳಗಳಿಗೆ 8 ಟ್ರಿಪ್‌ಗ್ಳಲ್ಲಿ ಬಸ್‌ ಸಂಚಾರ ಮಾಡಿವೆ. ನಲಗುಂದದಿಂದ ರೋಣಕ್ಕೆ ಒಂದು ಹಾಗೂಕಲಘಟಗಿಯಿಂದ ಹುಬ್ಬಳ್ಳಿಗೆ ಎರಡು ಸರತಿಗಳಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ವಿಭಾಗದಿಂದ17 ಸಿಬ್ಬಂದಿಯನ್ನು ವಿವಿಧ ಘಟಕಗಳಿಗೆ ವರ್ಗಾವಣೆ ಮಾಡಲಾಗಿದೆ. ಮುಷ್ಕರದ ಆರಂಭದಿನದಿಂದ ಸಿಬ್ಬಂದಿ ಡಿಪೋದತ್ತ ಸುಳಿದಿರಲಿಲ್ಲ. ಇದೀಗ ಮೇಲಧಿ ಕಾರಿಗಳನ್ನು ಸಂಪರ್ಕಿಸಿ ಕರ್ತವ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿ ಕಾರಿ ಎಚ್‌.ರಾಮನಗೌಡರ ತಿಳಿಸಿದ್ದಾರೆ.

ಖಾಸಗಿ ವಾಹನಗಳದೇ ದರ್ಬಾರ್‌ :

ದಿನದಿಂದ ದಿನಕ್ಕೆ ಖಾಸಗಿ ವಾಹನಗಳ ಸಂಖ್ಯೆ ಹಳೇ ಬಸ್‌ ನಿಲ್ದಾಣದಲ್ಲಿ ಹೆಚ್ಚಾಗುತ್ತಿವೆ. ವಿವಿಧೆಡೆಯಿಂದವಾಹನಗಳು ಆಗಮಿಸುತ್ತಿದ್ದು ಪ್ರಯಾಣಿಕರಿಗೆ ಒಂದಿಷ್ಟುಸಾರಿಗೆ ಸೌಲಭ್ಯ ದೊರೆಯುತ್ತಿದೆ. ಬೆಳಗ್ಗೆ ಹಾಗೂ ಸಂಜೆವೇಳೆ ಹಳೇ ಬಸ್‌ ನಿಲ್ದಾಣದಲ್ಲಿ ವಾಹನಗಳ ದಟ್ಟಣೆವಿಪರೀತವಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ ಇಷ್ಟು ಪ್ರಮಾಣದಲ್ಲಿ ಸಾರಿಗೆ ಸಂಸ್ಥೆ ಬಸ್‌ಗಳೂ ಇರುತ್ತಿರಲಿಲ್ಲ. ಐದನೇ ದಿನವೂ ಖಾಸಗಿ ವಾಹನಗಳು ಕೆಲವೇ ಮಾರ್ಗಗಳಲ್ಲಿ ಸಂಚಾರ ಮಾಡಿದವು.

ಕರ್ತವ್ಯಕೆ ಅಡ್ಡಿ ; ಪ್ರತ್ಯೇಕ ದೂರು ದಾಖಲು :

ಮುಷ್ಕರದ ಅವ ಧಿಯಲ್ಲಿ ಕರ್ತವ್ಯ ನಿರತ ಸಾರಿಗೆ ಸಿಬ್ಬಂದಿ ಕೆಲಸಕ್ಕೆಅಡ್ಡಿಪಡಿಸಿದ ಘಟನೆಗಳು ನಡೆದಿದ್ದು ಪ್ರಕರಣ ದಾಖಲಾಗಿವೆ.ಗುರುವಾರ ಹುಬ್ಬಳ್ಳಿ ಗ್ರಾಮಾಂತರ 2ನೇ ಡಿಪೋದ ಕೆಎ-42 ಎಫ್‌ 1501 ಸಂಖ್ಯೆಯ ಬಸ್‌ ಡಿಪೋದಿಂದ ಹಳೆ ಬಸ್‌ ನಿಲ್ದಾಣಕ್ಕೆಹೋಗುವಾಗ ಸಿಬ್ಬಂದಿ ವಸತಿಗೃಹಗಳ ಹತ್ತಿರ ಕೆಲವರು ಸ್ವಲ್ಪಹೊತ್ತು ಬಸ್‌ ತಡೆದು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗೋಕುಲಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ರವಿವಾರಗ್ರಾಮಾಂತರ 1ನೇ ಘಟಕದ ಕೆಎ-63 ಎಫ್‌ 0171 ಬಸ್‌ ಹುಬ್ಬಳ್ಳಿಯಿಂದ ಬಾಗಲಕೋಟೆಗೆ ತೆರಳುತ್ತಿದ್ದಾಗ ನವಲಗುಂದಬಸ್‌ ನಿಲ್ದಾಣದಲ್ಲಿ ಶಿವಾನಂದ ಎಂಬುವರು ಬಸ್‌ ಚಾಲಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಗೆ ಸಂಬಂಧಿ ಸಿದಂತೆ ನವಲಗುಂದಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌.ರಾಮನಗೌಡರ ತಿಳಿಸಿದ್ದಾರೆ.

ಆರ್‌ಟಿಒ ಅಧಿಕಾರಿಗಳಿಗೆ ಹೊಣೆ : ಸಾರಿಗೆ ಸಂಸ್ಥೆ ಅಧಿಕಾರಿಗಳು ತಮ್ಮ ಬಸ್‌ಗಳನ್ನುಓಡಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಮುಷ್ಕರದಮೊದಲೆರಡು ದಿನ ಇದ್ದ ಪೊಲೀಸ್‌ ಬಂದೋಬಸ್ತ್ಕೂಡ ಕಡಿಮೆಯಾಗಿದೆ. ಓರ್ವ ಪಿಎಸ್‌ಐ ಜೊತೆಮೂರ್‍ನಾಲ್ಕು ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿರುತ್ತಾರೆ.ಹೀಗಾಗಿ ಇಡೀ ಹಳೇ ಬಸ್‌ ನಿಲ್ದಾಣದಲ್ಲಿ ಖಾಸಗಿವಾಹನಗಳ ಸಂಚಾರ, ವಿವಿಧ ಮಾರ್ಗಗಳಿಗೆ ಕಾರ್ಯಾಚರಣೆ ಮಾಡುವಂತೆ ನೋಡಿಕೊಳ್ಳುವುದು ಆರ್‌ಟಿಒ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಏನೇನ್ಯೂ ನತೆಗಳಿದ್ದರೂ ಮೌಖೀಕ ಸೂಚನೆ ಮೂಲಕಎಚ್ಚರಿಕೆ ನೀಡುವ ಕೆಲಸವಾಗುತ್ತಿದೆ. ಕಳೆದ ಐದುದಿನಗಳಿಂದ ನಿತ್ಯ ಬೆಳಗ್ಗೆಯಿಂದ ಸಂಜೆಯವರೆಗೂ ಇದೇ ಕಾರ್ಯದಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next