Advertisement
ಆದರೆ, ಇವೆರಡೂ ಒಂದಕ್ಕೊಂದು ತಳುಕು ಹಾಕಿಕೊಂಡಿವೆ.ಅಷ್ಟೇ ಅಲ್ಲ, ಕೆಲ ನೌಕರರ ಜೀವನನಿರ್ವಹಣೆಯನ್ನೇ ದುಸ್ತರಗೊಳಿಸಿದೆ. ಇತ್ತೀಚೆಗೆ ನಡೆದ ಸಾರಿಗೆ ಮುಷ್ಕರದಲ್ಲಿ ನಿಗಮಗಳ ಕೆಂಗಣ್ಣಿಗೆ ಗುರಿಯಾದ ಸುಮಾರು ಮೂರುಸಾವಿರ ನೌಕರರನ್ನುಅಮಾನತುಗೊಳಿಸಲಾಗಿದೆ.
Related Articles
Advertisement
ಹೋರಾಟಕ್ಕೆ ಕೈಜೋಡಿಸಿದ್ದರಿಂದ ನಾನು ಸೇರಿದಂತೆ ನೂರಾರು ಸಹೋದ್ಯೋಗಿಗಳನ್ನುಅಮಾನತುಗೊಳಿಸಲಾಯಿತು. ನಿಯಮದ ಪ್ರಕಾರ ನಿತ್ಯ ಕಡ್ಡಾಯವಾಗಿ ಬೆಳಗ್ಗೆ 10ರಿಂದ ಸಂಜೆ 5ರ ಒಳಗೆ ಘಟಕಕ್ಕೆ ತೆರಳಿ ಸಹಿ ಹಾಕಿ ಬರಬೇಕು. ಲಾಕ್‌ಡೌನ್ ಆಗಿದ್ದರಿಂದ ಊರಿಗೆ ಬಂದಿದ್ದೇನೆ. ನೂರಾರು ಕಿ.ಮೀ.ದೂರದಿಂದ ಹೋಗಿ ಬರುವುದು ಕಷ್ಟ.
ಬೆಂಗಳೂರಲ್ಲಿ ಕೊರೊನಾ ಹಾವಳಿ ತೀವ್ರವಾಗಿದ್ದು, ಆಮ್ಲಜನಕಮತ್ತು ಹಾಸಿಗೆಗಳ ಸಮಸ್ಯೆ ಹೆಚ್ಚಿದೆ. ಇದೆಲ್ಲದರಿಂದ ಹೆದರಿ, ತಾಯಿ, ಪತ್ನಿ, ಮಕ್ಕಳೊಂದಿಗೆ ಊರಿಗೆ ಬಂದುಬಿಟ್ಟಿದ್ದೇನೆ. ಇಂತಹದ್ದರಲ್ಲಿ ಸಹಿ ಹಾಕಿ ಬರಲು ಹೇಗೆ ಸಾಧ್ಯ ನೀವೇ ಹೇಳಿ ಸರ್? ಈ ಸಮಸ್ಯೆ ಬಗ್ಗೆ ಕೂಟವೂಚಕಾರ ಎತ್ತುತ್ತಿಲ್ಲ ಎಂದು ಬಿಎಂಟಿಸಿ ಚಾಲಕಚಂದ್ರಶೇಖರ್ ಅಸಹಾಯಕತೆ ತೋಡಿಕೊಂಡರು.
ಮೇ 8ರ ಒಳಗೆ ವರದಿ ಸಲ್ಲಿಸುವಂತೆ ಸೂಚನೆ
ಹೈಕೋರ್ಟ್ ಮಧ್ಯಂತರ ಆದೇಶದ ಬೆನ್ನಲೆ ಮತ್ತು ವಜಾ ಮತ್ತು ಅಮಾನತುಗೊಂಡ ಹಾಗೂ ವರ್ಗಾವಣೆಗೊಂಡ ನೌಕರರ ಪ್ರಕರಣಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡುಮೇ 8ರ ಒಳಗೆ ವರದಿ ಸಲ್ಲಿಸುವಂತೆ ಕಾನೂನು ಇಲಾಖೆ ಕೆಎಸ್‌ಆರ್‌ಟಿಸಿಯ ಎಲ್ಲ ಇಲಾಖಾಮುಖ್ಯಸ್ಥರಿಗೆ ಸೂಚಿಸಿದೆ. ಕಾರ್ಮಿಕ ಸಂಘದ ಬೇಡಿಕೆಗಳನ್ನು ಪಕ್ಷಗಾರರು ಸೌಹಾರ್ದಯುತ ಮಾತುಕತೆಮೂಲಕ ಇತ್ಯರ್ಥಪಡಿಸಿಕೊಂಡು ವರದಿ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ವಿಫಲರಾದಲ್ಲಿ, ಹೈಕೋರ್ಟ್ ನಿವೃತ್ತನ್ಯಾಯಾಧೀಶರನ್ನು ಕಾರ್ಮಿಕ ವಿವಾದಕ್ಕೆ ಸಂಬಂಧಿಸಿದಂತೆ ನೇಮಿಸಲಾಗುವುದು ಎಂದೂ ಸೂಚಿಸಲಾಗಿದೆ.