Advertisement

ಸಂಧಾನವೊಂದೇ ಮಾರ್ಗ : ಉದಯವಾಣಿ ಸಮೀಕ್ಷೆಯಲ್ಲಿ ಜನಮತ

12:08 AM Apr 12, 2021 | Team Udayavani |

ಬೆಂಗಳೂರು: ಮುಷ್ಕರ ನಿರತ ಸಾರಿಗೆ ನೌಕರರೊಂದಿಗೆ ಆದಷ್ಟು ಬೇಗ ಮಾತುಕತೆ ನಡೆಸಿ ಬಿಕ್ಕಟ್ಟು ಪರಿಹರಿಸಿ. ವಜಾ, ವರ್ಗಾವಣೆಯಂಥ ಕಠಿನ ಕ್ರಮ ಅನುಸರಿಸಬೇಡಿ…

Advertisement

-ಇದು ಮುಷ್ಕರ ತಿಕ್ಕಾಟದ ಬಗ್ಗೆ “ಉದಯವಾಣಿ’ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾದ ಜನಾಭಿಪ್ರಾಯದ ಸಾರ. ಸಾರಿಗೆ ನೌಕರರ ಮುಷ್ಕರ ಮತ್ತು ಸರಕಾರದ ಕಠಿನ ಕ್ರಮಗಳ ಬೆನ್ನಲ್ಲೇ ಪತ್ರಿಕೆಯು ಜನರ ನಾಡಿಮಿಡಿತ ತಿಳಿಯಲು ಮುಂದಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದ್ದು, 3,500ಕ್ಕೂ ಹೆಚ್ಚು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಬಹುತೇಕ ಮಂದಿ ಮುಷ್ಕರವನ್ನು ಬೆಂಬಲಿಸಿದರೆ, ಕೆಲವರು ಮುಷ್ಕರಕ್ಕೆ ಇದು ಸೂಕ್ತ ಸಮಯವಲ್ಲ ಎಂದಿದ್ದಾರೆ. ಮುಷ್ಕರ ನಿರತರ ಮೇಲೆ ಸರಕಾರದ ಕ್ರಮದ ಬಗ್ಗೆ ಸಾಕಷ್ಟು ಅಪಸ್ವರ ವ್ಯಕ್ತವಾಗಿದೆ. ಇನ್ನಷ್ಟು ಕಠಿನ ಕ್ರಮ ಕೈಗೊಳ್ಳಬೇಕೆಂದು ಶೇ. 4.7ರಷ್ಟು ಜನ ಮಾತ್ರ ಹೇಳಿದರೆ, ಮಾತುಕತೆಯ ಮೂಲಕ ಬಗೆಹರಿಸಿ ಎಂದು ಶೇ. 47 ರಷ್ಟು ಮಂದಿ ಪ್ರತಿಪಾದಿಸಿದ್ದಾರೆ.

ವ್ಯಕ್ತವಾದ ಅಭಿಮತಗಳು
– ದೇಶ ಕೊರೊನಾ ಸಂಕಷ್ಟದಲ್ಲಿದೆ. ಇಂಥ ಸಮಯದಲ್ಲಿ ಮುಷ್ಕರ ಬೇಡವಾಗಿತ್ತು.
– ಇದು ಸರಕಾರ ಮತ್ತು ನೌಕರರ ನಡುವಿನ ಸಮಸ್ಯೆ. ಆದರೆ ತೊಂದರೆ ಜನಸಾಮಾನ್ಯರಿಗೆ. ಹೀಗಾಗಿ ತತ್‌ಕ್ಷಣವೇ ಇದಕ್ಕೆ ಪರಿಹಾರ ಹುಡುಕಬೇಕು.
– ಸರಕಾರದ ಆರ್ಥಿಕ ಪರಿಸ್ಥಿತಿ ಒಂದು ಹಂತಕ್ಕೆ ಬಂದ ಮೇಲೆ ವೇತನ ಹೆಚ್ಚಳ ಬೇಡಿಕೆ ಇರಿಸಬಹುದಾಗಿತ್ತು.
– ಇದು ಸರಕಾರ ಮತ್ತು ನೌಕರರ ನಡುವಿನ ವಿಷಯ. ಆದರೆ ಕೋಡಿಹಳ್ಳಿ ಚಂದ್ರಶೇಖರ್‌ ಮತ್ತು ಚೇತನ್‌ ಮಧ್ಯಪ್ರವೇಶ ಮಾಡಬಾರದಿತ್ತು. ಇವರ ಮಧ್ಯ ಪ್ರವೇಶದಿಂದಲೇ ಮುಷ್ಕರ ಹಾದಿ ತಪ್ಪುತ್ತಿದೆ.

ಸಮೀ ಕ್ಷೆಯಲ್ಲಿ ಕಂಡುಬಂದದ್ದು
- ಸರಕಾರದ ಪ್ರತಿಕ್ರಿಯೆಗೆ ಏನು ಹೇಳುತ್ತೀರಿ?
: ಸರಿ - 9.7%  l ಸರಿಯಲ್ಲ – 47.9%

- ಇನ್ನಷ್ಟು ಕ್ರಮ ಕೈಗೊಳ್ಳಬೇಕು – 4.7%
- ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿ – 37.7%

Advertisement

- ಸಾರಿಗೆ ಸಮಸ್ಯೆಗೆ ಖಾಸಗೀಕರಣ ಪರಿಹಾರವೇ?
: ಹೌದು – 4.8% l ಅಪಾಯಕಾರಿ – 29.9%

- ಏನಾದರೂ ಆಗಲಿ, ಜನರ ಹಿತ ಕಾಪಾಡಲಿ – 8.2%
- ರಾಜಕಾರಣಿಗಳ ಸ್ವಾರ್ಥಕ್ಕಾಗಿ ಖಾಸಗೀಕರಣ – 57.1%

Advertisement

Udayavani is now on Telegram. Click here to join our channel and stay updated with the latest news.

Next