Advertisement
ಹಿಂದೆಂದೂ ಕಂಡು ಕೇಳರಿಯದ ಮಳೆಯಿಂದ ತೊಂದರೆಗೆ ಸಿಲುಕಿರುವವರಿಗೆ ಸ್ಪಂದಿಸಿರುವ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಸಂಸ್ಥೆಯಿಂದ 185 ಬ್ಲಾಂಕೆಟ್, 500 ನೈಟೀಸ್, 200 ಸ್ವೆಟರ್, 480 ಸ್ಕಾರ್ಫ್, 36 ಛತ್ರಿ, 100 ಪ್ಯಾಂಟ್, 100 ಟೀ-ಶರ್ಟ್, 240 ಸ್ವೆಟರ್, 100 ಜೀನ್ಸ್ ಪ್ಯಾಂಟ್, 120 ಬನಿಯನ್, 400 ನೈಟ್ ಪ್ಯಾಂಟ್, 300 ಚಿಕ್ಕ ಮಕ್ಕಳ ಉಡುಪು, 300 ಚಿಕ್ಕಮಕ್ಕಳ ಟೋಪಿ, 648 ಡೈಪರ್, 103ಮಕ್ಕಳ ಟೀ-ಶರ್ಟ್, 240 ರಷ್ಟು ಬಾಲಕಿಯರ ಶಾರ್ಟ್, 100 ಟೈಟ್ಸ್, 100 ಪ್ಯಾಂಟ್, 600 ಸಾಕ್ಸ್, 576 ರಷ್ಟು ಮಂಕಿಕ್ಯಾಪ್, 180 ಚಾಪೆ, 96 ಸೊಳ್ಳೆ ಪರದೆ, 24 ಬ್ಯಾಟರಿ, 20 ಬಾಕ್ಸ್ ಬಿಸ್ಕೆಟ್, 1,200 ಮ್ಯಾಗಿ ಬಾಕ್ಸ್, 240 ನೀರಿನ ಬಾಟಲಿ, 120 ಜ್ಯೂಸ್ ಬಾಟಲಿ, 2 ಬಾಕ್ಸ್ ಉಪ್ಪಿನಕಾಯಿ, ಖಾರ ಇತರೆ ಅವಶ್ಯಕ ವಸ್ತುಗಳನ್ನು ಶನಿವಾರ ರಾತ್ರಿ ಮೈಸೂರಿನ ರೋಟರ್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ದಾವಣಗೆರೆಯಿಂದ ಕೊಡಗು ಜಿಲ್ಲೆಯ ಸಂತ್ರಸ್ತ ಪರಿಹಾರದ ಶಿಬಿರಕ್ಕೆ ವಾಹನದ ಮೂಲಕ ಕಳಿಸಿಕೊಡಲಾಯಿತು ಎಂದು ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಸಂಸ್ಥೆಯ ಬಿ.ಯು. ಚಂದ್ರಶೇಖರ್ ತಿಳಿಸಿದ್ದಾರೆ.