Advertisement

ಸಾರಿಗೆ ನಿಗಮಗಳಿಗೆ ಹಲ್ಲಿದ್ದಾಗ ಕಡಲೆಯಿಲ್ಲ

02:13 PM Apr 23, 2021 | Team Udayavani |

ಬೆಂಗಳೂರು: ಹಲ್ಲು ಇದ್ದಾಗ ಕಡಲೆ ಇಲ್ಲ; ಕಡಲೆಇದ್ದಾಗ ಹಲ್ಲು ಇಲ್ಲದಂತಾಗಿದೆ ರಾಜ್ಯ ರಸ್ತೆ ಸಾರಿಗೆನಿಗಮಗಳ ಸ್ಥಿತಿ!ಹೌದು, ಈ ಮೊದಲು ಪ್ರಯಾಣಿಕರಿದ್ದರು.ಆದರೆ, ಮುಷ್ಕರದ ಹಿನ್ನೆಲೆಯಲ್ಲಿ ಇದುವರೆಗೆ ಬಸ್‌ಗಳು ರಸ್ತೆಗಿಳಿಯಲೇ ಇಲ್ಲ.

Advertisement

ಈಗ ಬಸ್‌ಗಳು ರಸ್ತೆಗಿಳಿಯಲು ಶುರುವಾಗಿವೆ. ಆದರೆ, ಸರ್ಕಾರವೇಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಜನರಿಗೆ ಅನಗತ್ಯಪ್ರಯಾಣಕ್ಕೆ ಬ್ರೇಕ್‌ ಹಾಕಿದೆ.ಅಷ್ಟೇ ಅಲ್ಲ, ಆಸನಗಳ ಸಾಮರ್ಥ್ಯದ ಶೇ. 50ರಷ್ಟುಮಾತ್ರ ಅನುಮತಿ ನೀಡಿದ್ದರಿಂದ ಇರುವ ಪ್ರಯಾಣಿಕರಿಗೆ ಹೆಚ್ಚು ವಾಹನಗಳಲ್ಲಿ ಸೇವೆ ಕಲ್ಪಿಸುವ ಅನಿವಾರ್ಯತೆ ಇದೆ.

ಉದಾಹರಣೆಗೆ 5,000 ಬಸ್‌ಗಳಲ್ಲಿಕೊಂಡೊಯ್ಯುತ್ತಿದ್ದ ಪ್ರಯಾಣಿಕರನ್ನು ಈಗ ಹತ್ತುಸಾವಿರ ಬಸ್‌ಗಳಲ್ಲಿ ಕರೆದೊಯ್ಯಬೇಕಾಗುತ್ತದೆ. ಆದರೆ,ಬಸ್‌ಗಳ ಕಾರ್ಯಾಚರಣೆ ವೆಚ್ಚ ಮಾತ್ರ ಅಷ್ಟೇ ಇದೆ.ಲೆಕ್ಕಾಚಾರದ ಪ್ರಕಾರ ನಿತ್ಯ ಆದಾಯದ ಮೂರುಪಟ್ಟು ಕಾರ್ಯಾಚರಣೆ ವೆಚ್ಚ ಆಗಲಿದೆ.

ಶಾಲಾ-ಕಾಲೇಜು ರಜೆ, ವರ್ಕ್‌ ಫ್ರಾಮ್‌ ಹೋಂ ಮತ್ತಿತರನಿರ್ಬಂ ಧ ಗಳಿಂದ ಕನಿಷ್ಟ ಶೈಕ್ಷಣಿಕ ವರ್ಷ ಆರಂಭವಾಗು ವವರೆಗೂ ಈ ನಷ್ಟದ ಹೊರೆಯನ್ನು ಬಿಎಂಟಿಸಿಅನುಭವಿಸಬೇಕಾಗುತ್ತದೆ.ಜಾಗತಿಕ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆಇದು ಅನಿವಾರ್ಯವಾಗಿದ್ದರೂ ಸಾರಿಗೆ ಸಂಸ್ಥೆಗಳಿಗೆಮಾತ್ರ ನುಂಗಲಾರದ ತುತ್ತಾಗಿದೆ.

ಹಾಗಾಗಿ, ನೌಕರರವೇತನಕ್ಕಾಗಿ ಮತ್ತೆ ಸರ್ಕಾರದ ಮೊರೆಹೋಗುವುದುಅನಿವಾರ್ಯ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.ಕೆಎಸ್‌ಆರ್‌ಟಿಸಿಯಲ್ಲಿ ಸುಮಾರು 7,600 ಬಸ್‌ಗಳ ಕಾರ್ಯಾಚರಣೆಯಿಂದ ಕೊರೊನಾ ಪೂರ್ವದಲ್ಲಿನಿತ್ಯ ಬರುತ್ತಿದ್ದ ಆದಾಯ 8ರಿಂದ 9 ಕೋಟಿ ರೂ.ಇತ್ತು. ಕೊರೊನಾ ಹಾವಳಿ ನಂತರದಲ್ಲೂ ಅಂದರೆಜನವರಿ-ಫೆಬ್ರವರಿಯಲ್ಲಿ ಕೂಡ 6ರಿಂದ 7 ಕೋಟಿರೂ. ಹರಿದುಬರುತ್ತಿತ್ತು.

Advertisement

ಆದರೆ, ಈಗ ಅದು ಕೇವಲ2 ಕೋಟಿ ರೂ.ಗೆ ಕುಸಿದಿದೆ. ಕಾರ್ಯಾಚರಣೆ ವೆಚ್ಚಮಾತ್ರ ಹಿಂದಿನಷ್ಟೇ 6-7 ಕೋಟಿ ರೂ. ಇದೆ ಎಂದುನಿಗಮದ ಅಧಿಕಾರಿಯೊಬ್ಬರು ವಿವರಿಸಿದರು.ಬಿಎಂಟಿಸಿ ಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ.ಒಟ್ಟಾರೆ ಬಸ್‌ಗಳ ಪೈಕಿ ಮುಷ್ಕರ ಹಿಂಪಡೆಯುವದಿನವೇ ಶೇ. 50ರಷ್ಟು ಕಾರ್ಯಾಚರಣೆ ಪುನಾರಂಭಗೊಂಡಿದೆ.

ಆದರೆ, ಜನರೇ ಇಲ್ಲ. ಹಾಗಾಗಿ, ದಿನಕ್ಕೆ 6-7 ಸಾವಿರ ರೂ. ಆದಾಯ ತರುತ್ತಿದ್ದ ತಲಾ ಒಂದುಬಸ್‌, ಈಗ ಹೆಚ್ಚೆಂದರೆ 1,500 ರೂ. ತರುತ್ತಿವೆ. ಆದರೆ,ಒಂದು ಬಸ್‌ನ ಕಾರ್ಯಾಚರಣೆ ವೆಚ್ಚ ದಿನಕ್ಕೆ 7,500ರೂ. ಆಗುತ್ತದೆ.ಅಂದರೆ ಒಂದು ದಿನಕ್ಕೆ 3.75 ಕೋಟಿ ರೂ. ವೆಚ್ಚಇದ್ದರೆ, 80 ಲಕ್ಷ ರೂ. ಆದಾಯ ಬರುತ್ತದೆ. ಹೆಚ್ಚು-ಕಡಿಮೆ ಆದಾಯದ ಮೂರುಪಟ್ಟು.

ಕೊರೊನಪೂರ್ವದಲ್ಲಿ ಸಂಸ್ಥೆಯ ನಿತ್ಯದ ಆದಾಯ ನಾಲ್ಕುಕೋಟಿ ರೂ. ಇತ್ತು ಎಂದು ಹೆಸರು ಹೇಳಲಿಚ್ಛಿಸದಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.ವೇತನಕ್ಕೆ ಸರ್ಕಾರದ ಮೊರೆ: ಕೊರೊನಾ ಹಾವಳಿಗೆಕಡಿವಾಣ ಹಾಕಲು ಸರ್ಕಾರದ ಮಾರ್ಗಸೂಚಿಗಳಪಾಲನೆ ಅನಿವಾರ್ಯ.

ಇದರಿಂದ ಖಂಡಿತ ಸಂಸ್ಥೆಗೆಆದಾಯದಲ್ಲಿ ಖೋತಾ ಆಗಲಿದೆ. ಆಗ ಅದು ನೌಕರರ ವೇತನ ಪಾವತಿ ಮೇಲೆ ಪರಿಣಾಮ ಬೀರಲಿದೆ.ಹಾಗಾಗಿ, ಮುಂದಿನ ದಿನಗಳಲ್ಲಿ ಸರ್ಕಾರದಮೊರೆಹೋಗಬೇಕಾಗುತ್ತದೆ ಎಂದು ಬಿಎಂಟಿಸಿವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ಸ್ಪಷ್ಟಪಡಿಸಿದರು.

ವಿಜಯಕುಮಾರ್ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next