Advertisement

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

10:27 AM Apr 05, 2020 | Sriram |

ಬೆಂಗಳೂರು: ಕೋವಿಡ್‌-19 ನಿಯಂತ್ರಣ ನಿಟ್ಟಿನಲ್ಲಿ ಹೊರ ರಾಜ್ಯದಿಂದ ಬರುವ ಪ್ರಯಾಣಿಕ ವಾಹನಗಳನ್ನು ತಡೆಗಟ್ಟಲು ಮತ್ತು ಅಗತ್ಯ ವಸ್ತುಗಳ ಸರಾಗ ಸಾಗಾಟಕ್ಕೆ ಅಡ್ಡಿಯಾಗದಂತೆ ಸಾರಿಗೆ ಇಲಾಖೆ ನಿಯಂತ್ರಣ ಕೊಠಡಿ ತೆರೆದಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

Advertisement

ಕರ್ನಾಟಕದಲ್ಲಿರುವ ಎಲ್ಲ ಸಾರಿಗೆ ಕಚೇರಿಗಳ ನಿರಂತರ ಸಂಪರ್ಕ ಹೊಂದಲು ಮತ್ತು ಅಲ್ಲಿಂದ ತುರ್ತು ಮಾಹಿತಿಗಳನ್ನು ಪಡೆಯಲು ವಿಶೇಷ ಸಹಾಯವಾಣಿ ಹಾಗೂ ನಿಯಂತ್ರಣ ಕೊಠಡಿಯನ್ನು ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವಂತೆ ತೆರೆಯಲಾಗಿದೆ. ದಿನನಿತ್ಯಕ್ಕೆ ಬೇಕಾಗುವ ಅಗತ್ಯ ವಸ್ತುಗಳ ನಿರಂತರ ಪೂರೈಕೆಗೆ ಸಂಬಂಧಿಸಿದಂತೆ ಯಾವುದೇ ಸಂಘ ಸಂಸ್ಥೆ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ರವಾನಿಸಿ ಸೂಕ್ತ ಕ್ರಮ ಜರಗಿಸಲು ಈ ವ್ಯವಸ್ಥೆ ಅನುಕೂಲಕರವಾಗಿರುತ್ತದೆ.ಅಗತ್ಯ ವಸ್ತುಗಳು ಕೊರತೆಯಾಗದಂತೆ ವಾಹನಗಳನ್ನು ಒದಗಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಸಹಾಯವಾಣಿ -ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 080-22236698 ಮತ್ತು ಮೊಬೈಲ್‌ ಸಂಖ್ಯೆ: 9449863214.

Advertisement

Udayavani is now on Telegram. Click here to join our channel and stay updated with the latest news.

Next