Advertisement

ಮಣಿಪಾಲ: ಹೊಸ ದಾರಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾಕರು

10:11 AM Sep 27, 2018 | |

ಉಡುಪಿ: ಇಬ್ಬರು ಛಲವಂತ ಲಿಂಗತ್ವ ಅಲ್ಪಸಂಖ್ಯಾಕರು ಸ್ವ ಉದ್ಯೋಗ ಆರಂಭಿಸಿ ಮಾದರಿಯಾಗಿದ್ದಾರೆ. 
ಈ ಸಮುದಾಯದಲ್ಲಿ ಮುಖ್ಯವಾಹಿನಿಗೆ ಬಂದು ಮೌಲಿಕ ಜೀವನ ನಡೆಸಲು ಪ್ರಯತ್ನಿಸಿದ ಕೆಲವರಲ್ಲಿ ಸಂಜೀವ ಮತ್ತು ಆಶ್ವಿ‌ಜ್‌ ಸೇರಿದ್ದು, ಮಣಿಪಾಲ ಬಸ್‌ ನಿಲ್ದಾಣದಲ್ಲಿ ಫಾಸ್ಟ್‌ ಫ‌ುಡ್‌ ಅಂಗಡಿ ತೆರೆದಿದ್ದಾರೆ. 

Advertisement

ವಂಡ್ಸೆ ಮೂಲದ ಸಂಜೀವ್‌
ವಂಡ್ಸೆ ಮೂಲದ ಸಂಜೀವ್‌ ಹೋಟೆಲ್‌ಗ‌ಳಲ್ಲಿ ಕಾರ್ಮಿಕನಾಗಿ ದುಡಿದವರು. ಆದರೆ ಲಿಂಗತ್ವ ಅಲ್ಪಸಂಖ್ಯಾಕ ಎನ್ನುವ ಕಾರಣಕ್ಕೆ ಹಿಂಸೆ ಅನುಭವಿಸಿ ಹುಟ್ಟೂರಿಗೆ ವಾಪಸು ಬಂದರು. “ಆಸರೆ’ ಟ್ರಸ್ಟ್‌ನ ಮೂಲಕ ಎಚ್‌ಐವಿ ಪೀಡಿತ ಮಕ್ಕಳ ರಕ್ಷಣೆ ಮಾಡುತ್ತಿದ್ದಾರೆ.

ಅಶ್ವಿ‌ಜ್‌ ಶಿಕ್ಷಿತ ಕುಟುಂಬದಲ್ಲಿ ಜನಿಸಿದ್ದರೂ ಲೈಂಗಿಕ ಅಲ್ಪಸಂಖ್ಯಾಕ ಎಂಬುದು ತಿಳಿಯುತ್ತಿದ್ದಂತೆ ಮನೆ
ಯಿಂದ ಹೊರದೂಡಲ್ಪಟ್ಟರು. ಹೊಟೇಲ್‌ ಕಾರ್ಮಿಕನಾಗಿ ಜೀವನ ಸಾಗಿಸುತ್ತಿದ್ದರು. ಸಂಜೀವ್‌ ಜತೆಗೆ ಸ್ನೇಹ ಬೆಳೆದು ಬಳಿಕ ಫಾಸ್ಟ್‌ಫ‌ುಡ್‌ ಸೆಂಟರ್‌ ತೆರೆಯಲು ನಿರ್ಧರಿಸಿದರು. 

ಅಧಿಕಾರಿಗಳ ಕಿರುಕುಳ
3 ವರ್ಷದ ಹಿಂದೆಯೇ ಫಾಸ್ಟ್‌ಫ‌ುಡ್‌ ಕೇಂದ್ರ ಕುಂದಾಪುರದಲ್ಲಿ ಆರಂಭವಾಗಬೇಕಿತ್ತು. ಆದರೆ ಅಧಿಕಾರಿಗಳು ಬೆಂಬಲ ನೀಡಿರಲಿಲ್ಲ. ಬಳಿಕ ಡಿಸಿಯವರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡರು. ಡಿಸಿ ಮತ್ತು ನಗರಸಭೆ ಆಯುಕ್ತರು ಮಣಿಪಾಲ ಬಸ್‌ ನಿಲ್ದಾಣದ ಬಳಿ ಸ್ಥಳಾವಕಾಶ ನೀಡಿದ್ದು, ಕೇಂದ್ರವನ್ನು ಮಂಗಳವಾರ ನಗರಸಭೆ ಆಯುಕ್ತ ಜನಾರ್ದನ ಉದ್ಘಾಟಿಸಿದ್ದಾರೆ. 

ವರ್ಷಗಳ ಬಳಿಕ ಅಣ್ಣನ ಭೇಟಿ
ಅಶ್ವಿ‌ಜ್‌ ಅಣ್ಣ ಮಣಿಪಾಲದ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅಶ್ವಿ‌ಜ್‌ ಭೇಟಿಯಾಗಿರಲಿಲ್ಲ. ಬುಧವಾರ ಮಗಳೊಂದಿಗೆ ಕ್ಯಾಂಟಿನ್‌ಗೆ ಬಂದಅವರು “ಇವರು ನಿನ್ನ ಚಿಕ್ಕಪ್ಪ’ ಎಂದು ಪರಿಚಯಿಸಿ ತಿಂಡಿ ಖರೀದಿಸಿದರು.  ಅಣ್ಣನನ್ನು ಕಂಡಾಗ ಅಶ್ವಿ‌ಜ್‌ ಕಣ್ಣಲ್ಲಿ ಆನಂದಭಾಷ್ಪ  ಸುರಿಯಿತು. 

Advertisement

ನಗರಸಭೆ ವ್ಯಾಪ್ತಿಯಲ್ಲಿ ಗೂಡಂಗಡಿ ನಿರ್ಮಾಣಕ್ಕೆ ಅವಕಾಶ ಇಲ್ಲ. ಆದರೆ ಇದು ವಿಶೇಷ ಪ್ರಕರಣ ಎಂದು ಗಮನಿಸಿ ಅನುಮತಿ ನೀಡಲಾಗಿದೆ. ಭಿಕ್ಷಾಟನೆ, ವೇಶ್ಯಾವಾಟಿಕೆಯಲ್ಲಿ ತೊಡಗುವುದಕ್ಕಿಂತ ಸ್ವ ಉದ್ಯೋಗಕ್ಕೆ ಪ್ರೋತ್ಸಾಹಿಸುವುದು ಉತ್ತಮ.
ಜನಾರ್ದನ, ಪೌರಾಯುಕ್ತರು ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next