Advertisement
ಇದರಿಂದ ಎಚ್ಚತ್ತ ಪೊಲೀಸರು ಬಾಧಿತನಿಂದ ದೂರು ಪಡೆದು, ಕೃತ್ಯ ನಡೆಸಿದ ಐವರು ಮಂಗಳಮುಖಿಯರ ವಿರುದ್ಧ ದೂರು ದಾಖಲಿಸಿಕೊಂಡು, ಬಂಧಿಸಿದ್ದಾರೆ. ಇದೀಗ ಇಡೀ ಪ್ರಕರಣ ‘ನಾನವಳಲ್ಲ’ ಎಂಬ ಕಥೆಗೆ ತಿರುಗಿದೆ.
Related Articles
Advertisement
ಅಲ್ಲದೇ ಅಮಾನವೀಯ ಕೃತ್ಯ ಎಸಗಿದ ಮಂಗಳಮುಖಿಯರಾದ ಅಶ್ವಿನಿ, ಹುಲಿಗೆಮ್ಮ, ಕವಿತಾ, ದಾನಮ್ಮ, ಮಹಾನಮ್ಮ ಎಂಬವರನ್ನು ಬಂಧಿಸಲಾಗಿದೆ. ಇಡೀ ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ತನಿಖೆಯ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು SP ಋಷಿಕೇಶ ಭಗವಾನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಹಿನ್ನೆಲೆ : ಘಟನೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂತ್ರಸ್ತ ಸಚಿನ್ ರೆಡ್ಡಿ, ತಾನು ಹೆಣ್ಣಾಗಿ ಹುಟ್ಟಿದ್ದು, ಹಾರ್ಮೋನ್ ಬದಲಾವಣೆಯಿಂದಾಗಿ ಗಂಡಾಗಿ ಪರಿವರ್ತನೆಗೊಂಡಿದ್ದೇನೆ. ಪುರುಷರಂತೆ ಪ್ಯಾಂಟ್-ಶರ್ಟ್ ಧರಿಸಿ ಪುಣೆಯ ಅಶ್ವಿನಿ ಎಂಬ ಮಂಗಳಮುಖಿ ಜೊತೆ ಒಡನಾಟ ಇರಿಸಿಕೊಂಡಿದ್ದೆ.
ಈ ಹಂತದಲ್ಲಿ ನಾನು ಗಂಡಲ್ಲ ಹೆಣ್ಣೆಂದು ಗೊತ್ತಾಗಿ ಮಂಗಳಮುಖಿಯರು ಪುಣೆಯಲ್ಲಿ ಹಲ್ಲೆ ಮಾಡಿದ್ದರು. ಇದರಿಂದಾಗಿ ನಮ್ಮ ಊರಿಗೆ ಬಂದ ಬಳಿಕ ನಾನು ಸಾಮಾಜಿಕ ಜಾಲ ತಾಣದಲ್ಲಿ ನನ್ನ ವಿರುದ್ಧ ಹಲ್ಲೆ ಮಾಡಿದವರ ವಿರುದ್ಧ ನಿಂದಿಸಿ ಪೋಸ್ಟ್ ಮಾಡಿದ್ದೆ ಎಂದಿದ್ದಾರೆ.
ಇದರಿಂದ ಕುಪಿತರಾಗಿದ್ದ ಮಂಗಳಮುಖಿಯರು, ಜೂನ್ 21 ರಂದು ವಿಜಯಪುರ ನಗರದಲ್ಲಿ ಹಾಡುಹಗಲೇ ನನ್ನನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದರು. ಇದೀಗ ಪೊಲೀಸರು ನನ್ನ ನೆರವಿಗೆ ನಿಂತಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿರುವುದಕ್ಕೆ ಸಂತಸವಾಗಿದೆ. ನನ್ನ ಮೇಲೆ ಹಲ್ಲೆ ನಡೆಸಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.