Advertisement

ನಗರಸಭೆಗೆ 3 ಬಡಾವಣೆಗೆ ಹಸ್ತಾಂತರ 

12:38 PM Dec 20, 2017 | |

ನಂಜನಗೂಡು: ನಗರದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಮೂರು ಬಡಾವಣೆಗಳನ್ನು ಶೀಘ್ರದಲ್ಲಿಯೇ ನಗರಸಭೆಗೆ ಹಸ್ತಾಂತರ ಮಾಡಲಾಗುವುದು ಎಂದು ಮುಡಾ ಪ್ರಾಧಿಕಾರದ ಆಯುಕ್ತ ಕಾಂತರಾಜ್‌ ಘೋಷಿಸಿದರು.

Advertisement

ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಂಗಳವಾರ ನಂಜನಗೂಡಿಗೆ ಆಗಮಿಸಿ ಶಾಸಕರು, ನಗರಸಭಾ ಅಧ್ಯಕ್ಷರು, ಆಯುಕ್ತರೊಂದಿಗೆ ಪ್ರವಾಸಿ ಮಂದಿರಲ್ಲಿ ಸುದೀರ್ಘ‌ ಚರ್ಚಿಸಿದ ನಂತರ ಬಸವನಗುಡಿ ಬಡಾವಣೆಯಲ್ಲಿ ನಡೆದ ಸಭೆಯಲ್ಲಿ  ಮಾತನಾಡಿದರು.

 22 ವರ್ಷಗಳ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಬಸವನಗುಡಿಯಲ್ಲಿ ನಿರ್ಮಿಸಿದ 72 ಮನೆಗಳ ಹಸ್ತಾಂತರ ಇನ್ನೂ ಆಗದಿರುವ ಕುರಿತು ಫ‌ಲಾನುಭವಿಗಳಿಂದ ಮನವಿ ಸ್ಪೀಕರಿಸಿದ ಅವರು ಆಗಿರಬಹುದಾದ ಎಲ್ಲಾ ಲೋಪಗಳನ್ನು ಸರಿಪಡಿಸಿ ನಗರಸಭೆಗೆ ಹಸ್ತಾಂತರಿಸಲಾಗುವುದು ಎಂದರು. 

ಸಾರ್ವಜನಿಕರ ಅನುಕೂಲಕ್ಕಾಗಿ ಮೂಲೆ ನಿವೇಶನಗಳಿದ್ದು ಸಮಾಜಮುಖೀ ಕಾರ್ಯಾಕ್ಕಾಗಿಯೇ ಮೀಸಲಾಗಿಡಲು ಈಗಾಗಲೇ ನಿರ್ಧರಿಸಲಾಗಿದೆ. ರೋಷ್ಟರ್‌ ಪದ್ಧತಿಯನ್ನು ಬಿಟ್ಟಿದ್ದಲ್ಲಿ ಅದನ್ನು ಸೇರಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಶಾಸಕ ಕಳಲೆ ಎನ್‌.ಕೇಶವಮೂರ್ತಿ, ಮೂಡಾದಿಂದ ಬಡಾವಣೆ ನಿರ್ಮಿಸುವಾಗ ರೋಷ್ಟರ್‌ ಪದ್ಧತಿಯನ್ನು ಅನುಸರಿಸಿಲ್ಲ. ಈಗಲಾದರೂ ರೋಷ್ಟರ್‌ ಪದ್ಧತಿ ಅಳವಡಿಸಿಕೊಳ್ಳಬೇಕೆಂದರು.

ಇನ್ನೂ ವಿತರಣೆಯಾಗದೇ ಉಳಿದಿರುವ ಮನೆಗಳನ್ನು ತಕ್ಷಣ ವಿತರಿಸಿ ಎಂದ ಶಾಸಕರು ನಂಜನಗೂಡು ನಗರಸಭಾ ವ್ಯಾಪ್ತಿಯಲ್ಲಿ 43 ಖಾಸಗಿ ಬಡಾವಣೆಗಳಿದ್ದು ಅವುಗಳ ಅಭಿವೃದ್ಧಿ ಪ್ರಾಧಿಕಾರ ಕ್ರಮ ಜರುಗಿಸಬೇಕೆಂದರು. ಅಲ್ಲದೆ, ಹತ್ತು ವಿವಿಧ ಬಡಾವಣೆಗಳಲ್ಲಿ ವ್ಯಾಯಾಮ ಶಾಲೆ, ಉದ್ಯಾನವನ, ವಾಚನಾಲಯಗಳನ್ನು ಪ್ರಾರಂಭಿಸಬೇಕೆಂದರು.

Advertisement

ನಂಜನಗೂಡಿನ ನಾಗರಿಕರು ತಮ್ಮ ಕೆಲಸಗಳಿಗಾಗಿ ಪ್ರಾಧಿಕಾರಕ್ಕೆ ಅಲೆಯುವುದನ್ನು ತಪ್ಪಿಸಲು ಅಧಿಕಾರಿಯೊಬ್ಬರನ್ನು ವಾರದಲ್ಲಿ ಒಂದೆರೆಡು ದಿನ ನಂಜನಗೂಡಿನಲ್ಲಿ ಲಭ್ಯವಾಗಿರುವಂತೆ ನೋಡಿಕೊಳ್ಳಿ ಎಂದರು. ಮಾಜಿ ಸಚಿವ ದಿ.ಎಂ.ಮಹದೇವು ಅವರ ಕಾಲದಲ್ಲಿ ಸೃಷ್ಟಿಯಾದ ಬಸವನಗುಡಿ ಬಡಾವಣೆ ಮನೆಗಳ ದರ ನಿಗದಿಪಡಿಸುವಾಗ ಪ್ರಾಧಿಕಾರ ವಿವಿಧ ರೀತಿಯ ಮಾನದಂಡ ಅನುಸರಿಸಿದೆ.

92 ರಲ್ಲಿ  ನಿಗಮವೇ ನಿರ್ಮಿಸಿದ ಮನೆಗಳಿಗಿಂತ 94 ರಲ್ಲಿ ನಿರ್ಮಿಸಿದ ಅದೇ ಅಳತೆ ಮನೆಗಳ ದರ ಕಡಿಮೆಯಾಗಿದ್ದು ಎಷ್ಟು ಸರಿ. ಈ ಅವೈಜಾnನಿಕ ದರ ಪುನರ್‌ ಪರಿಶೀಲಿಸಿ ಹಕ್ಕು ಪತ್ರ ನೀಡುವ ವ್ಯವಸ್ಥೆಯಾಗಬೇಕೆಂದರು. ಈ ಬಡಾವಣೆಗೆ ಒಳಚರಂಡಿ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆಯನ್ನು ನಗರಸಭೆ ಮಾಡುತ್ತಿದ್ದು ತಕ್ಷಣ ನಗರಸಭೆಗೆ ವಹಿಸಿ ಕಂದಾಯದ ಮೂಲಕ ಅದರ ಆದಾಯ ಹೆಚ್ಚಿಸಿ ಎಂದು ಶಾಸಕರು ತಿಳಿಸಿದರು.

 ಆಯುಕ್ತ ಪಿ.ಎಸ್‌.ಕಾಂತರಾಜ್‌, ಶಾಸಕ ಕಳಲೆ ಎನ್‌.ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಪುಷ್ಪಲತಾ, ಉಪಾಧ್ಯಕ್ಷ ಪ್ರದೀಪ್‌, ಸದಸ್ಯರಾದ ಮಂಜುನಾಥ್‌,ರಾಜೇಶ್‌, ವಿಜಯಾಂಭಿಕ, ರಾಮಕೃಷ್ಣ, ಸಿ.ಎಂ.ಶಂಕರ್‌, ಗಿರೀಶ್‌, ನಿಂಗಪ್ಪ, ಇಂದ್ರಾಣಿ, ನಗರಸಭಾ ಆಯುಕ್ತ ವಿಜಯ, ಮೂಡಾ ಅಧಿಕಾರಿಗಳಾದ ಗಿರೀಶ್‌, ಬಿ.ಎನ್‌.ಪ್ರಭಾಕರ್‌, ಎಸ್‌.ಕೆ.ಭಾಸ್ಕರ್‌, ಯಾದವಗಿರಿ, ರವಿಕುಮಾರ್‌ ಮತ್ತಿತರರಿದ್ದರು.

ಶಾಸಕರೊಂದಿಗೆ ತಾವು ಬಡಾವಣೆ ವೀಕ್ಷಿಸಿದ್ದು, ಶಾಸಕ ಕಳಲೆ ಎನ್‌.ಕೇಶವಮೂರ್ತಿ ಅವರೂ ಗಮನ ಸೆಳೆದಿದ್ದಾರೆ. 92-94  ರಲ್ಲಿ ನಿರ್ಮಿಸಿದ ಮನೆಗಳ ದರಪಟ್ಟಿಯಲ್ಲಿ ತಾರತಮ್ಯವಾಗಿದೆ ಎನ್ನುವ ವಿಷಯಕ್ಕೆ ಸಂಬಂದಿಸಿದಂತೆ ಅದನ್ನು ಸರಿಪಡಿಸಿ ಹಸ್ತಾಂತರಿಸಲಾಗುವುದು.
-ಕಾಂತರಾಜ್‌, ಮುಡಾ ಪ್ರಾಧಿಕಾರದ ಆಯುಕ್ತ 

Advertisement

Udayavani is now on Telegram. Click here to join our channel and stay updated with the latest news.

Next