ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯ ಕಾರ್ಯಾವಧಿ ಆರಂಭವಾಗುತ್ತಿದ್ದಂತೆ ವರ್ಗಾವಣೆ ದಂಧೆ ಜೋರಾಗಿದೆ.
Advertisement
ಒಂದೊಂದು ಹುದ್ದೆಗೆ ನಾಲ್ಕೈದು ಬಾರಿ ಪತ್ರ ಕೊಡುತ್ತಿದ್ದು, ಅದರೊಂದಿಗೆ ವಸೂಲಿ ನಡೆದಿದೆ. ರಾಜ್ಯದ ಅನೇಕ ಕಡೆಗಳಲ್ಲಿ ವರ್ಗಾವಣೆ ನಡೆಯುತ್ತಿದ್ದು, ಅಧಿಕಾರಿಗಳಿಂದ ಹಣ ವಸೂಲಿ ನಡೆದಿದೆ. ಆಂತರಿಕ ತನಿಖೆ ನಡೆಸಿದರೆ ಎಷ್ಟು ಹಣ ಪಡೆಯುತ್ತಿದ್ದಾರೆ ಎಂಬ ಸತ್ಯ ಹೊರಬರಲಿದೆ. ಇದರಲ್ಲಿ ರಾಜಕೀಯ ಒತ್ತಡ ಇರುವುದು ಸ್ಪಷ್ಟವಾಗಿದ್ದು, ಮುಖ್ಯಮಂತ್ರಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.