Advertisement
ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಪ್ರೊಬೆಷನರಿ ಸೇವೆ ಆರಂಭಿಸಿದ ರೂಪಾ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ ಉಡುಪಿ ಎಸ್ಪಿಯಾಗಿ ಬಡ್ತಿ ಪಡೆದರು. ಸಿಎಆರ್ ದಕ್ಷಿಣ ವಿಭಾಗ, ಧಾರವಾಡ, ಬೀದರ್, ಗದಗ, ಆಂತರಿಕ ಭದ್ರತಾ ವಿಭಾಗ, ಗೃಹ ಇಲಾಖೆಯ ಉಪ ಕಮಾಂಡ್, ಸೈಬರ್, ಸಿಐಡಿ, ಸಿಎಆರ್, ಪೊಲೀಸ್ ತರಬೇತಿ ಶಾಲೆ ಚನ್ನಪಟ್ಟಣ, ಸಕಾಲ ಸೇರಿ ಹತ್ತಾರು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಆದರೆ, ಆಯಾ ಇಲಾಖೆಗಳ ಕೆಲ ಭ್ರಷ್ಟತೆಯನ್ನು ಹೊರಗೆಳೆದ ರೂಪಾ ಅವರನ್ನು ಕೆಲವೇ ತಿಂಗಳಲ್ಲಿ ಎತ್ತಂಗಡಿ ಮಾಡಿದ್ದಾರೆ. ದುರಾದೃಷ್ಟವೆಂದರೆ ರೂಪಾ ಅವರು ತಮ್ಮ 16 ವರ್ಷದ ಸೇವಾವಧಿಯಲ್ಲಿ ಹೆಚ್ಚು ಕಾಲ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳಲ್ಲೇ ಕರ್ತವ್ಯ ನಿರ್ವಹಿಸಿದ್ದಾರೆ.
ಮೂಲಗಳ ಪ್ರಕಾರ ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕೇವಲ 25 ದಿನಗಳಲ್ಲೇ ಪೊಲೀಸ್ ಇಲಾಖೆಯ ಒಂದು ವಿಭಾಗದಿಂದ ಮತ್ತೂಂದು ವಿಭಾಗಕ್ಕೆ ವರ್ಗಾವಣೆಯಾದ ಮೊದಲ ಐಪಿಎಸ್ ಅಧಿಕಾರಿ ರೂಪಾ ಎನ್ನಲಾಗಿದೆ. ಇತ್ತೀಚೆಗೆ ಸಿಎಂ
ಸಿದ್ದರಾಮಯ್ಯ ಒಬ್ಬ ಐಪಿಎಸ್ ಅಧಿಕಾರಿಯನ್ನು ಎರಡು ವರ್ಷಗಳ ಕಾಲ ವರ್ಗಾವಣೆ ಮಾಡದೆ ಒಂದೇ ಕಡೆ ಕರ್ತವ್ಯನಿರ್ವಹಿಸುವ ಕುರಿತು ಹೊಸ ವರ್ಗಾವಣೆ ನೀತಿ ತರಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದರು. ಆದರೆ, ರೂಪಾ ಅವರು ಕಾರಾಗೃಹ ಇಲಾಖೆಯ ಭ್ರಷ್ಟತೆಯನ್ನು ಹೊರಗೆಳೆಯುತ್ತಿದ್ದಂತೆ ಅಧಿಕಾರ ಸ್ವೀಕರಿಸಿದ ಕೇವಲ 25 ದಿನಗಳಲ್ಲೇ ಸರ್ಕಾರದ ಕೆಂಗಣ್ಣಿಗೆ
ಗುರಿಯಾಗಿ ವರ್ಗಾವಣೆಯಾಗಿದ್ದಾರೆ. ಆರು ತಿಂಗಳ ಹಿಂದೆಯೇ ರೂಪಾ ಅವರಿಗೆ ಕಾರಾಗೃಹ ಇಲಾಖೆಗೆ ವರ್ಗಾವಣೆಯಾಗಿತ್ತು. ಆದರೆ, ವೈಯಕ್ತಿಕ ರಜೆ ಮೇಲೆ ತೆರಳಿದ್ದರು. ಈ ಮೂಲಕ ಸರ್ಕಾರ ತನ್ನ ನಿಯಮವನ್ನು ತಾನೇ ಉಲ್ಲಂ ಸಿ ರೂಪಾ ಅವರನ್ನು
ವರ್ಗಾವಣೆ ಮಾಡಿದೆ. ಕಳೆದ ಜೂನ್ 23ರಂದು ಅಧಿಕಾರ ಸ್ವೀಕರಿಸಿದ ಅವರು ಜೈಲಿನ ಅಕ್ರಮವನ್ನು ಒಂದೊಂದಾಗಿ ಹೊರಗೆಳೆದರು. ಇದು ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಕಣ್ಣು ಕೆಂಪಾಗಿಸಿತ್ತು.