Advertisement

ಕಡತ ವಿಲೇವಾರಿಯಾಗದಿದ್ದರೆ ವರ್ಗಾವಣೆ ಶಿಕ್ಷೆ: ಶಾಸಕ

11:24 AM Sep 08, 2017 | Team Udayavani |

ನಂಜನಗೂಡು: ಜನಸೇವಕರಾದ ನೀವು ಸಾರ್ವಜನಿಕರು ನೀಡಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡದಿದ್ದರೆ ವರ್ಗಾವಣೆ ಶಿಕ್ಷೆ ನೀಡಲಾಗುವುದು ಎಂದು ಶಾಸಕ ಕಳಲೆ ಕೇಶವಮೂರ್ತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಂಜನಗೂಡು ನಗರಸಭಾ ವ್ಯಾಪ್ತಿಯ ಸ್ವತ್ಛತಾ ನಿರ್ವಹಣೆಗಾಗಿ ಟಿಪ್ಪರ್‌, ಟ್ರೈಲರ್‌ ಸೇರಿದಂತೆ 10 ವಾಹನಗಳು ಹಾಗೂ 28 ಕೈಗಾಡಿಗಳನ್ನು ಸಂಸದ ಧ್ರುವನಾರಾಯಣರೊಂದಿಗೆ ಲೋಕಾರ್ಪಣೆ ಮಾಡಿದ ಬಳಿಕ, ಸ್ವತ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಈ ವೇಳೆ 14 ಜನ  ಪೌರ ಕಾರ್ಮಿಕರಿಗೆ ತಲಾ 6 ಲಕ್ಷ ರೂಗಳ ವಸತಿ ಸಹಾಯ ಹಾಗೂ 20 ಲಕ್ಷರೂಗಳ ಆರೋಗ್ಯ ವಿಮಾ ಬಾಂಡ್‌ ವಿತರಿಸಿದರು. ಕಡತಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡದಿದ್ದರೆ ಅಂತಹವರು ನಮಗೆ ಬೇಕಿಲ್ಲ. ಅವರಿಗೆ ವರ್ಗಾವಣೆ ಶಿಕ್ಷೆ ವಿಧಿಸಿ ಕಳುಹಿಸಲಾಗುವುದು. ಸದ್ಯದಲ್ಲೇ ಖಾತಾ ಅದಾಲತ್‌ ನಡೆಸಿ ಬಡವರ ಸಮಸ್ಯೆ ನೀಗಿಸಲಾಗುವುದು ಎಂದು ತಿಳಿಸಿದರು.

ಸಂಸದ ಆರ್‌.ಧ್ರುವನಾರಾಯಣ ಮಾತನಾಡಿ, ಮುಖ್ಯಮಂತ್ರಿಗಳ ವಿಶೇಷ ಕಾಳಜಿಯಿಂದಾಗಿ ನಗರಕ್ಕೆ 33 ಕೋಟಿ ರೂ., ಹಣ ಮಂಜೂರಾಗಿದ್ದು ಈ ಹಣವನ್ನು ಸದಸ್ಯರು ತಮ್ಮ ವಾರ್ಡುಗಳಿಗೆ ಹಂಚಿಕೊಳ್ಳದೆ ಅಭಿವೃದ್ಧಿ ಕಾಣದ ಬಡಾವಣೆಗಳ ಅಭಿವೃದ್ಧಿಗೆ ವಿನಿಯೋಗಿಸಿ ಎಂದು ತಿಳಿಸಿದರು. ಪುರಸಭೆಯಿಂದ ಬಡ್ತಿ ಹೊಂದಿ ನೂತನ ನಗರಸಭಾ ಭವನ ನಿರ್ಮಿಸಲು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸದ್ಯದಲ್ಲೇ ಅನುಮೋದನೆ ಸಿಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹಾಗೂ ಸಂಸದರನ್ನು ಸ್ವಾಗತಿಸಿದ ನಗರಸಭಾ ಆಯುಕ್ತ ವಿಜಯ್‌ ಖಾತಾ ಆಂದೋಲನದ ಪ್ರಸ್ತಾವನೆ ಈಗಾಗಲೇ ಜಿಲ್ಲಾಧಿಕಾರಿಗಳ ಮುಂದಿದೆ ಎಂದರು. ನಗರಸಭಾ ಅಧ್ಯಕ್ಷೆ ಪುಷ್ಪ$ಲತಾ, ಉಪಾಧ್ಯಕ್ಷ ಪ್ರದೀಪ, ಸದಸ್ಯರಾದ ದೊಡ್ಡ ಮಾದಯ್ಯ ,ವಿಜಯಾಂಬಿಕಾ, ಮಂಜುನಾಥ ,ಅನಸೂಯ, ಮಹದೇವಸ್ವಾಮಿ, ಚೆಲುವರಾಜು, ಸಿ.ಎಂ.ಶಂಕರ, ಗಿರೀಶ, ಚುಂದರ್‌ರಾಜ್‌, ಲಿಂಗಪ್ಪ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಮೂರ್ತಿ, ಅಧಿಕಾರಿಗಳಾದ ವೆಂಕಟೇಶ, ಶ್ರೀನಿವಾಸ, ಅರ್ಚನಾ ರೇಖ, ಸುಷ್ಮಾ ಪುಟ್ಟಸ್ವಾಮಿ ಮತ್ತಿತರರಿದ್ದರು.

ಕಸ ವಿಲೇವಾರಿಗೆ ಬೇಕಾಗಬಹುದಾದ ಎಲ್ಲಾ ಸೌಲಭ್ಯಗಳನ್ನು ನಗರಸಭೆ ಕಲ್ಪಿಸಿದೆ. ಹೀಗಾಗಿ ಘನ ತ್ಯಾಜ್ಯ  ನಿರ್ವಹಣೆಯನ್ನು ಸುಗಮವಾಗಿ ನಿರ್ವಹಿಸಬೇಕು. ಭಕ್ತರಿಂದ ಕೂಡಿರುವ ನಂಜನಗೂಡು ಸ್ವತ್ಛತೆಯಲ್ಲಿ ಹೆಸರುಗಳಿಸುವಂತಾಗಲಿ. ಅಧಿಕಾರಿಗಳು ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕಿದ್ದು ನಾವೆಲ್ಲಾ ಜನ ಸೇವಕರು ಎನ್ನುವುದನ್ನು ಮರೆಯಬಾರದು. 
-ಆರ್‌.ಧ್ರುವನಾರಾಯಣ, ಸಂಸದ 

Advertisement
Advertisement

Udayavani is now on Telegram. Click here to join our channel and stay updated with the latest news.

Next