Advertisement

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ

03:25 AM Jul 08, 2017 | |

ಬೆಂಗಳೂರು: ಕರ್ನಾಟಕ ಸಾಮಾನ್ಯ ಸೇವೆಯ 10 ಜನ ಹಿರಿಯ ಶ್ರೇಣಿಯ ಹಾಗೂ 31 ಜನ ಕಿರಿಯ ಶ್ರೇಣಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 

Advertisement

ವರ್ಗಗೊಂಡ ಅಧಿಕಾರಿಗಳೆಲ್ಲ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳ ಉನ್ನತ ಅಧಿಕಾರಿಗಳಾಗಿದ್ದಾರೆ
ಹಿರಿಯ ಶ್ರೇಣಿಯ ಅಧಿಕಾರಿಗಳು: ಟಿ.ಎಸ್‌. ಲೋಕೇಶ್‌-ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್‌, ಚಿತ್ರದುರ್ಗ, ಡಾ. ಎಸ್‌. ರಂಗಸ್ವಾಮಿ, ಉಪ ಕಾರ್ಯದರ್ಶಿ,ಜಿಲ್ಲಾ ಪಂಚಾಯತ್‌, ಶಿವಮೊಗ್ಗ, ಕೆ. ಲತಾ-ಯೊಜನಾ ನಿರ್ದೇಶಕರು, ಡಿಆರ್‌ಡಿಎ, ಜಿಲ್ಲಾ ಪಂಚಾಯತ್‌, ಬೆಂಗಳೂರು ಗ್ರಾಮಾಂತರ, ಎಚ್‌.ಪಿ. ಪುಟ್ಟಸ್ವಾಮಿ-ಉಪ ಕಾರ್ಯದರ್ಶಿ,ಜಿಲ್ಲಾ ಪಂಚಾಯತ್‌, ರಾಮನಗರ, ಅಮರೇಶ್‌ ನಾಯ್ಕ-ಯೋಜನಾ ನಿರ್ದೇಶಕರು, ಜಿಲ್ಲಾ ಪಂಚಾಯತ್‌, ಗದಗ, ಕಾಂತರಾಜು-ಉಪ ಕಾರ್ಯದರ್ಶಿ,ಜಿಲ್ಲಾ ಪಂಚಾಯತ್‌, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮುನಿರಾಜು-ಅಪರ್‌ ಅಭಿಯಾನ ನಿರ್ದೇಶಕರು, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಮುಕ್ಕಣ್ಣ ಕರಿಗಾರ್‌-ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್‌, ಬಾಗಲಕೋಟೆ, ಡಾ. ಎಂ. ಎಚ್‌. ತಿಪ್ಪೆಸ್ವಾಮಿ-ಬಿಬಿಎಂಪಿ, ಜಂಟಿ ಆಯುಕ್ತರ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಟಿ.ದಿನೇಶ್‌-ಗದಗ ಜಿಲ್ಲಾ ಪಂಚಾಯತ್‌ ಯೋಜನಾ ನಿರ್ದೇಶಕರ ಹುದ್ದೆಯಿಂದ ಅವರ ಮಾತೃ ಇಲಾಖೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ವರ್ಗಾಯಿಸಲಾಗಿದೆ.

ಕಿರಿಯ ಶ್ರೇಣಿಯ ಅಧಿಕಾರಿಗಳು: ಸಿ. ಶ್ರೀನಿವಾಸ-ಚಿಂತಾಮಣಿ ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಸ್ಥಾನದಿಂದ ಅವರ ಮಾತೃ ಇಲಾಖೆ ಅರಣ್ಯ ಮತ್ತು ಪರಿಸರ ಇಲಾಖೆಗೆ ವರ್ಗಾಯಿಸಲಾಗಿದೆ. ಗಿರಿಜಾ ಶಂಕರ-ಸಹಾಯಕ ಯೋಜನಾಧಿಕಾರಿ ಜಿಲ್ಲಾ ಪಂಚಾಯತ್‌ ತುಮಕೂರು, ಗುರುನಾಥ ಶೆಟ್ಟಗಾರ್‌-ಕಾರ್ಯ ನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತ್‌ ಅಫ‌ಜಲ್‌ಪುರ, ಎನ್‌. ವೆಂಕಟೇಶ್‌-ತಾಲೂಕು ಪಂಚಾಯತ್‌ ಕಾರ್ಯ ನಿರ್ವಾಹಕ ಅಧಿಕಾರಿ, ಬಂಗಾರಪೇಟೆ, ಡಾ. ಪ್ರೇಮ್‌ ಕುಮಾರ್‌-ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್‌ ಮಂಡ್ಯ, ಪ್ರಾಣೇಶ್‌ ರಾವ್‌-ಕಾರ್ಯ ನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ,ರಾಯಚೂರು, ಡಾ. ಎಸ್‌. ಟಕ್ಕಳಕಿ-ಕಾರ್ಯನಿರ್ವಾಹ ಅಧಿಕಾರಿ, ತಾಲೂಕು ಪಂಚಾಯತ್‌, ಶಹಪುರ, ಬಿ. ಜಗದೇವ್‌-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ ಸುರಪುರ, ಕೆ.ಎಚ್‌. ಕೃಷ್ಣಮೂರ್ತಿ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಅರಸಿಕೆರೆ, ಕೆ.ಒ. ಜಾನಕಿ ರಾಮ್‌ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಜಗಳೂರು, ಎಸ್‌.ಬಿ. ಜಯೇಂದ್ರ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಕಲಬುರಗಿ, ಎಂ. ಮೂಕಪ್ಪಗೌಡ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಶೃಂಗೇರಿ, ಮಹೇಶ್‌ ಕುರಿಯವರ್‌-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಕುಮಟಾ, ಎ.ಟಿ. ಜಯಕುಮಾರ್‌-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ,  ಬ್ಯಾಡಗಿ, ಬಸವರಾಜ್‌ ಅಯ್ಯಣ್ಣವರ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಬೆಳ್ತಂಗಡಿ, ಪಿ.ಬಿ. ದೇವರ ಮನಿ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಹಾವೇರಿ, ಡಿ.ಎಂ.ಪ್ರಭುಸ್ವಾಮಿ-ಸಹಾಯಕ ಯೋಜನಾಧಿಕಾರಿ, ಜಿಲ್ಲಾ ಪಂಚಾಯತಿ,ಚಿತ್ರದುರ್ಗ, ಕೆ.ವಿ. ರೆಡ್ಡೆಪ್ಪ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಚಿಂತಾಮಣಿ, ಸಿ.ಆರ್‌. ಕೃಷ್ಣಕುಮಾರ್‌-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಪಿರಿಯಾಪಟ್ಟಣ, ಮೂಗನೂರಮಠ-ಉಪ ನಿರ್ದೇಶಕರು, ಪ್ರಾದೇಶಿಕ ಅಬ್ದುಲ್‌ ನಜೀರ್‌ಸಾಬ್‌ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಧಾರವಾಡ, ಎಸ್‌.ಎಂ. ರುದ್ರಸ್ವಾಮಿ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಧಾರವಾಡ, ಜಿ.ಡಿ. ಜೋಶಿ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ನವಲಗುಂದ, ಕೆ.ಪಿ. ಸಂಜೀವಪ್ಪ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಚಿಕ್ಕಬಳ್ಳಾಪುರ, ಶಿವಶಂಕರಯ್ಯ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಮಾಲೂರು, ಅಶೋಕ್‌ ತೋಟದ್‌-ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್‌ ಬಾಗಲಕೋಟೆ, ಟಿ.ವೆಂಕೋಬಪ್ಪ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಹೊಸಪೇಟೆ, ಕೃಷ್ಣಪ್ಪ ಲೋಹರ್‌-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ದೊಡ್ಡಬಳ್ಳಾಪುರ, ಮಲ್ಲಾ ನಾಯಕ್‌-ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್‌, ದಾವಣಗೆರೆ, ರೇವಣಪ್ಪ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ,  ಕಡೂರು, ಎನ್‌. ನಾರಾಯಣಸ್ವಾಮಿ-ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ, ಕುಣಿಗಲ್‌,  ವಿಜಯ್‌ಗೌಡ-ಪಂಚಾಯತ್‌ ರಾಜ್‌ ಎಂಜನೀಯರಿಂಗ್‌ ಉಪ ವಿಭಾಗ, ಶೃಂಗೇರಿಗೆ ವರ್ಗಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next