ಮೈಸೂರು: ಮೈಸೂರು ನಾಗರೀಕರ ವೇದಿಕೆಯುಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರಸ್ವಾಮೀಜಿ ಮೂಲಕ ಜಿಲ್ಲಾಡಳಿತಕ್ಕೆ 5 ಸಾವಿರಔಷಧ ಕಿಟ್ ಹಸ್ತಾಂತರಿಸಿತು.ಶುಕ್ರವಾರ ನಗರದ ಸುತ್ತೂರು ಶಾಖಾಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್‌ಅವರಿಗೆ ಶ್ರೀಗಳು ಕಿಟ್ ಹಸ್ತಾಂತರಿಸಿದರು.
ವೇದಿಕೆಯ ಸದಸ್ಯ ವಾಸುದೇವ ಭಟ್‌ಮಾತನಾಡಿ, ಕೋವಿಡ್ ಸಂಕಷ್ಟದ ಪರಿಸ್ಥಿತಿಎದುರಿಸಲು ನೆರವು ನೀಡಿ ಎಂದು ಸಚಿವ ಎಸ್.ಟಿ. ಸೋಮಶೇಖರ್ ಕೋರಿದ್ದರು. ಆ ವೇಳೆನಾವು 15 ಸಾವಿರ ಔಷಧ ಕಿಟ್ ನೀಡಲು ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಜತೆ ಚರ್ಚಿಸಿದೆವು.
ಆದರೆ ಅವರು ಸದ್ಯಕ್ಕೆ 5 ಸಾವಿರ ಕಿಟ್‌ಗಳು ಸಾಕುಎಂದ ಕಾರಣ 5 ಸಾವಿರ ಕಿಟ್ ನೀಡುತ್ತಿದ್ದೇವೆಎಂದರು.ಔಷಧ ಕಿಟ್‌ನಲ್ಲಿ 5 ಮಾಸ್ಕ್ಗಳು, ಐವರಿಮೆಕ್ಟಿನ್, ವಿಟಮಿನ್ ಸಿ ಮಾತ್ರೆಗಳು, ಯಾವಾಗಯಾವ ಮಾತ್ರೆ ತೆಗೆದುಕೊಳ್ಳಬೇಕು ಎಂಬ ಮಾಹಿತಿಹೊಂದಿರುವ ಔಷಧದ ಚೀಟಿ ಇದೆ. ಶೀಘ್ರ ಮತ್ತೆ10 ಸಾವಿರ ಕಿಟ್ ನೀಡಲಾಗುವುದು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಸಂಘಸಂಸ್ಥೆಗಳು ಸಾಕಷ್ಟು ಸಂಖ್ಯೆಯಲ್ಲಿ ನೆರವುನೀಡುತ್ತಿರುವುದು ಸಂತಸದ ವಿಚಾರ ಎಂದರು.ಸುತ್ತೂರು ಶ್ರೀಗಳು ಮಾತನಾಡಿ, ಜಿಲ್ಲೆಯಲ್ಲಿಇತ್ತೀಚೆಗೆ ಕೋವಿಡ್ ಸೋಂಕು ಅಲ್ಪ ಪ್ರಮಾಣದಲ್ಲಿಕಡಿಮೆಯಾಗಿದೆ
. ಇದು ಕೊನೆಗೊಳ್ಳುವ ತನಕಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕುಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ,ಶಾಸಕ ಎಸ್.ಎ. ರಾಮದಾಸ್, ತನ್ವೀರ್‌ಸೇs…,ಜಿ.ಟಿ. ದೇವೇಗೌಡ, ಎಂಡಿಎ ಅಧ್ಯಕ್ಷ ಎಚ್.ವಿ.ರಾಜೀವ್, ಮೈಲ್ಯಾಕ್ ಅಧ್ಯಕ್ಷ ಎನ್.ವಿ. ಫಣೀಶ್,ರಾಜ್ಯ ಕಾಂಪೋಸ್ಟ್ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಮೃಗಾಲಯ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಡಾ. ಬೆಟಸೂರಮs…ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.