Advertisement

ವರ್ಗಾವಣೆ ಮಿತಿ ಶೇ.2ರಿಂದ 6ಕ್ಕೆ ಹೆಚ್ಚಳ

12:44 AM Jun 21, 2019 | Sriram |

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವರ್ಗಾವಣೆ ಸಂಬಂಧ ಶೇ.2ರಿಂದ 6ಕ್ಕೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

Advertisement

2019-20ನೇ ಸಾಲಿಗೆ ನಿಗದಿಪಡಿಸಿರುವ ವರ್ಗಾವಣೆ ಮಿತಿಯನ್ನು ಒಟ್ಟಾರೆ ಕಾರ್ಯನಿರತ ವೃಂದಬಲದ ಶೇ.2ಕ್ಕೆ ಬದಲಾಗಿ ಶೇ.6ಕ್ಕೆ ನಿಗದಿಪಡಿಸಲಾಗಿದೆ. ಈ ವರ್ಗಾವಣೆ ಯನ್ನು ಅನುಷ್ಠಾನಗೊಳಿಸುವಾಗ ಖಾಲಿ ಹುದ್ದೆಗಳು ವಿವಿಧ ಜಿಲ್ಲೆಗಳಲ್ಲಿ ಸಮನಾಗಿ ಹಂಚಿಕೆಯಾಗಿರುವಂತೆಯೂ ನೋಡಿ ಕೊಳ್ಳುವಂತೆ ಎಲ್ಲ ಸಕ್ಷಮ ಪ್ರಾಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಸ್ತುತ ಇರುವ ಸರ್ಕಾರಿ ನೌಕರರ ಕಾರ್ಯನಿರತ ವೃಂದ ಬಲವನ್ನು ಪರಿಗಣಿಸಿದಲ್ಲಿ ಈಗಾಗಲೇ ವರ್ಗಾವಣೆಗೆ ನಿಗದಿ ಗೊಳಿಸಿರುವ ಮಿತಿಯು ತುಂಬಾ ಕಡಿಮೆಯಾಗಿರುವುದನ್ನು ಮನಗಂಡು ಶೇ.2ರ ಮಿತಿ ಹೆಚ್ಚಿಸುವ ತೀರ್ಮಾನ ಕೈಗೊಳ್ಳ ಲಾಗಿದೆ. ವರ್ಗಾವಣೆ ಪ್ರಕ್ರಿಯೆ ಈಗಾಗಲೇ ಪ್ರಾರಂಭ ವಾಗಿದ್ದು ಜೂ.30ರವರೆಗೆ ಗಡುವು ನೀಡಲಾಗಿದೆ.

ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ನೆಲೆಸಿರುವ ಕಚೇರಿಗಳಿಗೆ ಸ್ಥಳೀಯ ವೃಂದ ಮತ್ತು ಮಿಕ್ಕುಳಿದ ವೃಂದ ಗಳಲ್ಲಿನ ವಿವಿಧ ವೃಂದದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆ ಗಳಿಗೆದುರಾಗಿ ನೇಮಕಾತಿ ಹೊಂದಿರುವ ನೌಕರರನ್ನು ಅವರ ನೇಮಕಾತಿ ದಿನಾಂಕದಿಂದ ಕನಿಷ್ಠ 10 ವರ್ಷಗಳವರೆಗೂ ಹೈ-ಕ ಪ್ರದೇಶ ಹೊರತುಪಡಿಸಿ ಬೇರೆಡೆಗೆ ವರ್ಗಾವಣೆ ಮಾಡತಕ್ಕದ್ದಲ್ಲ ಎಂಬ ಅಂಶವನ್ನೂ ಮತ್ತೂಮ್ಮೆ ಎಲ್ಲ ಸಕ್ಷಮ ಪ್ರಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next