ಹಾಸನ: ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ನೀಡದ ಶಾಸಕ ಪ್ರೀತಂ ಜೆ.ಗೌಡ ಅವರು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡ ಗಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಉಪಾ ಧ್ಯಕ್ಷ ಎಚ್.ಪಿ.ಸ್ವರೂಪ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಬ್ಬ ಎಇಇ ವರ್ಗಾವಣೆಗೆ 15 ಲಕ್ಷ ರೂ. ವಸೂಲಿ ಮಾಡಲು ಶಾಸಕರು ಮುಂದಾಗಿದ್ದಾರೆ.
ಶಾಸಕರ ಹಿಂಬಾಲಕರು ಎಂಜಿನಿ ಯರ್‌ಗೆ ದೂರವಾಣಿ ಮಾಡಿ ಹಣ ಕೇಳಿದ್ದಾರೆ. ಹಿಂಬಾಲಕರ ಮೂಲಕ ಪ್ರೀತಂ ಜೆ.ಗೌಡ ಅಧಿಕಾರಿಗಳ ವರ್ಗಾವಣೆಯ ದಂಧೆ ನಡೆಸುತ್ತಿದ್ದಾರೆ ಎಂದರು. ದೇವೇಗೌಡರ ಮತ್ತು ರೇವಣ್ಣ ಅವರನ್ನು ಟೀಕಿಸುವ ಶಾಸಕ ಪ್ರೀತಂ ಜೆ.ಗೌಡ ಅವರಿಗೆ ಹಾಸನ ಜಿಲ್ಲೆಯ ಅಭಿವೃದ್ಧಿಗೆ ರೇವಣ್ಣ ಮತ್ತು ದೇವೇಗೌಡರು ನೀಡಿರುವ ಕೊಡುಗೆ ತಿಳಿದು ಕೊಳ್ಳುವ ಸಾಮಾನ್ಯ ಜ್ಞಾನ ಇಲ್ಲದಿರಬಹುದು.
ಆದರೆ ರಾಜ್ಯದ ಜನತೆಗೆ ಗೊತ್ತಿದೆ ಎಂದ ಅವರು, ಕೇಂದ್ರೀಯ ಬಸ್ ನಿಲ್ದಾಣದ ಎದುರು ಚನ್ನಪಟ್ಟಣ ಕೆರೆ ಸೌಂದಯಿಕರಣ, ಉದ್ಯಾನವನ ನಿರ್ಮಾಣ ಯೋಜನೆಗೆ ಎಚ್.ಡಿ.ರೇವಣ್ಣ ಅವರು 144 ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಆದರೆ ಅದನ್ನು ಬೇರೆ, ಬೇರೆ ಕೆರೆಗಳ ಅಭಿವೃದ್ಧಿಗೆ ಮತ್ತು ಪಾರ್ಕುಗಳ ಅಭಿವೃದ್ಧಿಗೆ ಹಂಚಿ ಗುತ್ತಿಗೆದಾರ ರಿಂದ ಕಮಿಷನ್ ಹೊಡೆಯಲು ಶಾಸಕರು ಮುಂದಾಗಿದ್ದಾರೆ ಎಂದು ಆರೋಪಿಸಿದರು. ರೇವಣ್ಣ ಅವರು ಮಂಜೂರು ಮಾಡಿಸಿದ್ದ ಅನುದಾನವನ್ನು ಹಂಚಲು ಹೊರಟಿರುವುದು ಸಲ್ಲದು. 144 ಕೋಟಿ ರೂ. ಚನ್ನ ಪಟ್ಟಣ ಕೆರೆ ಅಭಿವೃದ್ಧಿಗೆ ಬಳಕೆಯಾಗಬೇಕು.
ಈಗಾಗಲೇ ರೂಪಿಸಿರುವ ಯೋಜನೆ ಪ್ರಕಾರವೇ ಕಾಮಗಾರಿ ನಡೆಯಬೇಕು. ಇಲ್ಲದಿದ್ದರೆ ಜೆಡಿಎಸ್ ಹೋರಾಟ ಹಮ್ಮಿಕೊಳ್ಳ ಲಿದೆ ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ರ್ಥಿಗಳಿಗೆ 1 ಸಾವಿರ ಮಾಸ್ಕ್ಗಳು ಹಾಗೂ ಸ್ಯಾನಿಟೈಸರ್‌ನ್ನು ಸ್ವರೂಪ್ ಅವರು ಬಿಇಒ ಬಲರಾಂ ಅವರಿಗೆ ಕೊಡುಗೆ ನೀಡಿದರು. ಜೆಡಿಎಸ್ ಮುಖಂಡರಾದ ಮೊಗಣ್ಣಗೌಡ, ವಾಸುದೇವ್, ಎಚ್‌ಎಸ್.ರಘು, ಚನ್ನಂಗಿ ಹಳ್ಳಿ ಶ್ರೀಕಾಂತ್ ಸುದ್ದಿಗೋಷ್ಠಿಯಲ್ಲಿ ದ್ದರು.