Advertisement
ಉತ್ತರ ಪ್ರದೇಶ ಸರಕಾರ ಈಚೆಗಷ್ಟೇ ಬಿಡುಗಡೆ ಮಾಡಿದ್ದ ಪ್ರವಾಸೋದ್ಯಮ ಪುಸ್ತಿಕೆಯಲ್ಲಿ ತಾಜ್ ಮಹಲ್ ಉಲ್ಲೇಖವನ್ನು ಕೈಬಿಡಲಾಗಿತ್ತು. ತತ್‌ಪರಿಣಾಮವಾಗಿ ಭಾರೀ ಟೀಕೆ, ಟಿಪ್ಪಣಿ, ವಿವಾದ ಸೃಷ್ಟಿಯಾಗಿತ್ತು.
Related Articles
Advertisement
ಮೀರತ್ ಜಿಲ್ಲೆಯ ಸಿಸೋಲಿ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಜನರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಶಾಸಕ ಸೋಮ್ ತಾಜ್ ಮಹಲ್ ಕುರಿತಾಗಿ ತನ್ನ ಅಭಿಪ್ರಾಯಗಳನ್ನು ನಿಷ್ಠುರ ಮಾತುಗಳಲ್ಲಿ ಹೇಳಿದರು.
ಇದೇ ವೇಳೆ ಸೋಮ್, “ಮೊಹಮ್ಮದ ಅಲಿ ಜೌಹರ್ ವಿಶ್ವವಿದ್ಯಾಲಯವು ಭಯೋತ್ಪಾಕರ ಕಾರಸ್ಥಾನವಾಗಿದೆ’ ಎಂದು ಆರೋಪಿಸಿದರು.
ಸೋಮ್ ಅವರು ಈ ಹಿಂದೆಯೂ ಕೋಮು ಸಂಘರ್ಷಕ್ಕೆ ಕಾರಣವಾಗುವ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲ ಉರಿನಾಲಗೆಯ ಬಿಜೆಪಿ ಶಾಸಕ ಎಂದೇ ಪರಿಚಿತರಾಗಿದ್ದರು.
ತಾಜ್ ಮಹಲ್ ಮತ್ತು ಮೊಹಮ್ಮದ್ ಅಲಿ ಜೌಹರ್ ವಿವಿ ಕುರಿತಾದ ಸೋಮ್ ಅವರ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ದೂರ ಸರಿದಿದೆ.
“ಸೋಮ್ ಹೇಳಿರುವುದೆಲ್ಲ ಅವರ ವೈಯಕ್ತಿಕ ನೆಲೆಯಲ್ಲಿ; ಅದು ಬಿಜೆಪಿಯ ಅಭಿಪ್ರಾಯವಲ್ಲ’ ಎಂದು ಬಿಜೆಪಿ ವಕ್ತಾರ ಅನಿಲ್ ಸಿಂಗ್, ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ನೋಡಿ ಪ್ರತಿಕ್ರಿಯಿಸಿದ್ದಾರೆ.
ಹಾಗಿದ್ದರೂ ಈಚೆಗೆ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, “ಐತಿಹಾಸಿಕ ತಾಜ್ ಮಹಲ್ ಕಟ್ಟಡಕ್ಕೂ ಭಾರತೀಯ ಸಂಸ್ಕತಿ ಮತ್ತು ಪರಂಪರೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.