ಹುಬ್ಬಳ್ಳಿ: ನೈರುತ್ಯ ರೈಲ್ವೆಯ ಯಶವಂತಪುರ ಬೈಪಾಸ್‌ನಲ್ಲಿ ಡಿ.15ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯುವುದರಿಂದ ಕೆಲ ರೈಲುಗಳ ಸಂಚಾರವನ್ನು ಸಂಪೂರ್ಣ ಹಾಗೂ ಕೆಲ ರೈಲುಗಳನ್ನು ಭಾಗಶಃ ರದ್ದುಪಡಿಸಲಾಗಿದೆ. ಡಿ.15ರಂದು ತುಮಕೂರು-ಬೆಂಗಳೂರು ನಗರ ಪ್ಯಾಸೆಂಜರ್ (56222/56223) ರೈಲು ಸಂಚಾರ ರದ್ದುಪಡಿಸಲಾಗಿದೆ. ಡಿ.15ರಂದು ಚಿಕ್ಕಮಗಳೂರು- ಯಶವಂತಪುರ ಪ್ಯಾಸೆಂಜರ್ (56277/56278) ರೈಲು ಸಂಚಾರವನ್ನು ದೊಡ್ಡಬೆಲೆ-ಯಶವಂತಪುರ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ.
ಮೈಸೂರು-ಯಲಹಂಕ ಎಕ್ಸ್‌ಪ್ರೆಸ್ (16203/16204) ರೈಲು ಸಂಚಾರವನ್ನು ಕೆಂಗೇರಿಯಿಂದ ಯಲಹಂಕವರೆಗೆ; ಮೈಸೂರು-ಯಶವಂತಪುರ ಪ್ಯಾಸೆಂಜರ್ (56216/56215) ರೈಲು ಸಂಚಾರವನ್ನು ಚಿಕ್ಕಬಾಣಾವರ ದಿಂದ ಯಶವಂತಪುರವರೆಗೆ; ಯಶವಂತಪುರ-ಸೇಲಂ ಪ್ಯಾಸೆಂಜರ್ (56242/56241) ರೈಲು ಸಂಚಾರವನ್ನು ಯಶವಂತಪುರದಿಂದ ಬಾಣಸವಾಡಿವರೆಗೆ; ಕಾಚಿಗುಡಾ- ಯಶವಂತಪುರ ಎಕ್ಸ್‌ಪ್ರೆಸ್ (17603) ರೈಲು ಸಂಚಾರವನ್ನು ಯಲಹಂಕದಿಂದ ಯಶವಂತಪುರವರೆಗೆ; ಯಶವಂತಪುರ-ಕಾಚೇಗುಡಾ ಎಕ್ಸ್‌ಪ್ರೆಸ್ (17604) ರೈಲು ಸಂಚಾರವನ್ನು ಯಶವಂತಪುರದಿಂದ ಯಲಹಂಕವರೆಗೆ ಭಾಗಶ: ರದ್ದುಗೊಳಿಸಲಾಗಿದೆ.
ಡಿ.15ರಂದು ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ (12089) ರೈಲು 30 ನಿಮಿಷ ವಿಳಂಬವಾಗಿ ಸಂಚಾರ ಆರಂಭಿಸುವುದು. ಡಿ.15ರಂದು ಯಶವಂತಪುರ- ವಿಜಯಪುರ ಎಕ್ಸ್‌ಪ್ರೆಸ್ (06541) ರೈಲು 45 ನಿಮಿಷ ತಡವಾಗಿ; ಬೆಂಗಳೂರು ನಗರ-ಹಿಂದೂಪುರ ಪ್ಯಾಸೆಂಜರ್ (66523) ರೈಲು 30 ನಿಮಿಷ ವಿಳಂಬವಾಗಿ; ತುಮಕೂರು-ಬೆಂಗಳೂರು ನಗರ ಪ್ಯಾಸೆಂಜರ್ (56226) ರೈಲು 30 ನಿಮಿಷ ತಡವಾಗಿ; ಬೆಂಗಳೂರು ನಗರ-ಅರಸಿಕೆರೆ ಪ್ಯಾಸೆಂಜರ್ (56223) ರೈಲು ತಡವಾಗಿ ಪ್ರಯಾಣ ಆರಂಭಿಸುವುದು.
ಡಿ.15ರಂದು ಬೆಳಗಾವಿ-ಅಶೋಕಪುರಂ ಎಕ್ಸ್‌ಪ್ರೆಸ್ (17325) ರೈಲು ತುಮಕೂರು ಹಾಗೂ ಬೆಂಗಳೂರು ನಗರದ ಮಧ್ಯೆ 45 ನಿಮಿಷ ನಿಲುಗಡೆಗೊಳ್ಳುವುದು. ಅದೇ ರೀತಿ ಲಕ್ನೋ-ಯಶವಂತಪುರ ಎಕ್ಸ್‌ಪ್ರೆಸ್ (12540) ರೈಲು ಜೋಲಾರಪೆಟ್ಟೆ-ಯಶವಂತಪುರ ಮಧ್ಯೆ 75 ನಿಮಿಷ ನಿಲುಗಡೆಯಾಗುವುದು. ಡಿ.15ರಂದು ಬೆಂಗಳೂರು ನಗರ-ಜೋಧಪುರ ಎಕ್ಸ್‌ಪ್ರೆಸ್ (16534) ರೈಲು ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಯಲಹಂಕ ಮಾರ್ಗದ ಬದಲಿಗೆ ಬೆಂಗಳೂರು ಕಂಟೋನ್ಮೆಂಟ್, ಚನ್ನಸಂದ್ರ, ಯಲಹಂಕ ಮಾರ್ಗವಾಗಿ ಸಂಚರಿಸುವುದು. ಅದೇ ರೀತಿ ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್ (17307) ರೈಲು ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಯಲಹಂಕ ಮಾರ್ಗವಾಗಿ ಸಾಗದೇ ಬೆಂಗಳೂರು ಕಂಟೋನ್ಮೆಂಟ್, ಚನ್ನಸಂದ್ರ, ಯಲಹಂಕ ಮಾರ್ಗವಾಗಿ ಪ್ರಯಾಣಿಸುವುದು.
ಮಂಗಳೂರು ಜಂಕ್ಷನ್ ಯಾರ್ಡ್‌ನಲ್ಲಿ ರೈಲ್ವೆ ಸಂಬಂಧಿತ ಕಾರ್ಯದ ನಿಮಿತ್ತ ಡಿ.15, 17 ಹಾಗೂ 24ರಂದು ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (16575) ರೈಲು ಬಂಟ್ವಾಳದವರೆಗೆ ಮಾತ್ರ ಚಲಿಸುವುದು. ಡಿ.12ರಿಂದ ಮೈಸೂರು-ವಾರಣಾಸಿ ವಾರದಲ್ಲಿ ಎರಡು ಬಾರಿ ಸಂಚರಿಸುವ ಎಕ್ಸ್‌ಪ್ರೆಸ್ (16229/16230) ರೈಲಿಗೆ ಶಾಶ್ವತವಾಗಿ ಒಂದು ದ್ವಿತೀಯ ದರ್ಜೆ ಸ್ಲಿಪರ್ ಕೋಚ್ ಜೋಡಿಸಲು ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.