Advertisement
ಅ. 12ರಂದು ಮಂಗಳೂರು ಸೆಂಟ್ರಲ್‌ನಿಂದ ಹೊರಡುವ ರೈಲು ಸಂಖ್ಯೆ 06602 ಮಂಗಳೂರು ಸೆಂಟ್ರಲ್-ಮಡಗಾಂವ್ ವಿಶೇಷ ರೈಲು ಕುಮಟಾ ನಿಲ್ದಾಣದಲ್ಲಿ ಕೊನೆಯಾಗಲಿದೆ. ಕುಮಟಾ-ಮಡಗಾಂವ್ ನಡುವೆ ಸಂಚಾರ ಭಾಗಶಃ ರದ್ದುಗೊಳ್ಳಲಿದೆ.
ಮಂಗಳೂರು: ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗದ ಕೆಲವು ಸೆಕ್ಷನ್‌ಗಳಲ್ಲಿ ಎಂಜಿನಿಯರಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಅ. 11ರಿಂದ 16ರ ವರೆಗೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
Related Articles
Advertisement
ಅ. 12, 13ರಂದು 22638 ಮಂಗಳೂರು ಸೆಂಟ್ರಲ್ ಎಂಜಿಆರ್ ಚೆನ್ನೈ ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್ 30 ನಿಮಿಷ ನಿಯಂತ್ರಿಸಲ್ಪಡುವುದು. 13ರಂದು 22637 ವೆಸ್ಟ್‌ಕೋಸ್ಟ್ 40 ನಿಮಿಷ ಕಾಲ ನಿಯಂತ್ರಿಸಲ್ಪಡುವುದು.
ಅ. 14ರಂದು 20910 ಪೋರಬಂದರ್ ಕೊಚ್ಚುವೇಲಿ ವೀಕ್ಲಿ ಸೂಪರ್‌ಫಾಸ್ಟ್ 30 ನಿಮಿಷ, 16649 ಮಂಗಳೂರು ಸೆಂಟ್ರಲ್ ನಾಗರಕೋವಿಲ್ ಜಂಕ್ಷನ್ ಪರಶುರಾಮ ಎಕ್ಸ್‌ಪ್ರೆಸ್ 20 ನಿಮಿಷ, 12678 ಎರ್ನಾಕುಳಂ ಕೆಎಸ್‌ಆರ್ ಬೆಂಗಳೂರು ರೈಲನ್ನು 30 ನಿಮಿಷ ಕಾಲ ನಿಯಂತ್ರಿಸಲಾಗುತ್ತದೆ.
ಅ.15ರಂದು 22638 ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ಸನ್ನು 1.40 ಗಂಟೆ, 12618 ನಿಜಾಮುದ್ದೀನ್-ಎರ್ನಾಕುಳಂ ಮಂಗಳಾ ಲಕ್ಷದ್ವೀಪ್ 1.10 ಗಂಟೆ, 12224 ಎರ್ನಾಕುಳಂ-ಲೋಕಮಾನ್ಯ ತಿಲಕ್ ವೀಕ್ಲಿ ಎಕ್ಸ್‌ಪ್ರೆಸ್ 2.35 ಗಂಟೆ, 22637 ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್ಸನ್ನು 1.40 ಗಂಟೆ ನಿಯಂತ್ರಿಸಲಾಗುವುದು.
ಅ. 16ರಂದು 22637 ವೆಸ್ಟ್ ಕೋಸ್ಟ್ ಎಕ್ಸ್‌ಪ್ರೆಸ್ಸನ್ನು 1.40 ಗಂಟೆ, ನಂ. 22638 ವೆಸ್ಟ್‌ಕೋಸ್ಟ್ ಎಕ್ಸ್‌ಪ್ರೆಸ್ 1.40 ಗಂಟೆ, 12618 ನಿಜಾಮುದ್ದೀನ್ ಎರ್ನಾಕುಳಂ ಮಂಗಳಾ ಎಕ್ಸ್‌ಪ್ರೆಸ್ 1.10 ಗಂಟೆ, 16603 ಮಂಗಳೂರು ಸೆಂಟ್ರಲ್ ತಿರುವನಂತಪುರ ಸೆಂಟ್ರಲ್ ಮಾವೇಲಿ ಎಕ್ಸ್‌ಪ್ರೆಸ್ 1.10 ಗಂಟೆ, 12484 ಅಮೃತಸರ – ಕೊಚ್ಚುವೇಲಿ ವೀಕ್ಲಿ ಎಕ್ಸ್‌ಪ್ರೆಸ್ 30 ನಿಮಿಷ, 11098 ಎರ್ನಾಕುಳಂ – ಪುಣೆ ಜಂಕ್ಷನ್ ಪೂರ್ಣ ಎಕ್ಸ್‌ಪ್ರೆಸ್ಸನ್ನು 45 ನಿಮಿಷ ಕಾಲ ನಿಯಂತ್ರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.