ಚಿಕ್ಕಬಳ್ಳಾಪುರ: ಅಕ್ಷರ ದಾಸೋಹ ಬಿಸಿಯೂಟತಯಾರು ಮಾಡುವ ಅಡುಗೆ ಸಿಬ್ಬಂದಿ ಮತ್ತು ನೌಕರರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸ ಬೇಕು ಎಂದು ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಸಹಾಯಕ ನಿರ್ದೇಶಕಿ ಲಲಿತಮ್ಮ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ಬಿಸಿಯೂಟ ತಯಾರು ಮಾಡುವ ಸಿಬ್ಬಂದಿ ಅಡುಗೆಅನಿಲವನ್ನು ಹೇಗೆ ಬಳಸಬೇಕು ಒಂದು ವೇಳೆಆಕಸ್ಮಿಕವಾಗಿ ಅವಘಡ ಸಂಭವಿಸಿದರೆ, ಯಾವರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳ ಬೇಕು ಎಂಬುದರ ಕುರಿತು ತರಬೇತಿ ಹೊಂದಿರಬೇಕು ಎಂದರು.
ಶಾಲೆಯಲ್ಲಿ ಪ್ರತ್ಯೇಕ ಅಡುಗೆ ಕೊಠಡಿ: ಚಿಕ್ಕ ಬಳ್ಳಾಪುರ ತಾಲೂಕಿನಲ್ಲಿ ಬಿಸಿಯೂಟ ತಯಾರು ಮಾಡಲು ಪ್ರತಿಯೊಂದು ಶಾಲೆಯಲ್ಲಿ ಪ್ರತ್ಯೇಕವಾಗಿ ಅಡುಗೆ ಕೊಠಡಿಗಳನ್ನುನಿರ್ಮಿಸಲಾಗುತ್ತಿದೆ. ಅಡುಗೆ ಸಿಬ್ಬಂದಿ ಸ್ವತ್ಛತೆ ಕಾಪಾಡಿಕೊಂಡು ವಿದ್ಯಾರ್ಥಿಗಳಿಗೆ ರುಚಿಯಾದಅಡುಗೆ ತಯಾರಿಸಬೇಕು. ಇಲಾಖೆಯಿಂದ ಬರುವ ಆದೇಶಗಳು ಮತ್ತು ಸುತ್ತೋಲೆಗಳನ್ನುಪಾಲಿಸಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸ ಬೇಕು ಎಂದರು.
ಅಡುಗೆ ಅನಿಲ ಬಳಸುವ ವಿಧಾನ, ಅಡುಗೆಸಿಬ್ಬಂದಿ ಜವಾಬ್ದಾರಿಗಳು ಅಗ್ನಿ ನಂದಕ ಬಳಕೆಯ ಪ್ರಾತ್ಯಕ್ಷಿಕೆ, ಪೌಷ್ಠಿಕಾಂಶ ಪುಡಿಯ ಬಳಕೆ,ಮಕ್ಕಳ ಭದ್ರತೆ ಮತ್ತು ಮಕ್ಕಳ ಆರೋಗ್ಯ ತಪಾಸಣೆ ಹಾಗೂ ದಾಖಲೆಗಳ ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಅಧ್ಯಕ್ಷ ನಾರಾಯಣ ಸ್ವಾಮಿ, ತಾಪಂ ಯೋಜನಾಧಿಕಾರಿ ಮುನಿವೆಂಕಟಪ್ಪ, ಜಿಲ್ಲಾ ಅಕ್ಷರದಾಸೋಹ ಬಿಸಿಯೂಟ ನೌಕರರ ಸಂಘದಗೌರವ ಅಧ್ಯಕ್ಷ ಬಿಎನ್ ಮುನಿಕೃಷ್ಣಪ್ಪ, ಆಗಲ ಗುರ್ಕಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಾಮಶೇಷಪ್ಪ, ನಾಯನಹಳ್ಳಿ ಹಿರಿಯ ಪ್ರಾಥಮಿಕ ಶಾಲೆ ಸಂಪನ್ಮೂಲ ವ್ಯಕ್ತಿ ಲಕ್ಷ್ಮೀ ನಾರಾಯಣ, ಗುಂಡ್ಲಹಳ್ಳಿ ನಿವೃತ್ತ ಮುಖ್ಯ ಶಿಕ್ಷಕ ಡಿ.ಆರ್. ಕೃಷ್ಣಪ್ಪ, ಜಿಲ್ಲಾ ಬಿಸಿಯೂಟ ನೌಕರರಸಂಘದ ಕಾರ್ಯದರ್ಶಿ ಕೆ.ಆರ್. ಮಂಜುಳ,ಅಕ್ಷರ ದಾಸೋಹ ಬಿಸಿಯೂಟ ಯೋಜನೆಇಲಾಖೆ ಅಧಿಕಾರಿ ಕುಮಾರಸ್ವಾಮಿ, ಅಗ್ನಿಶಾಮಕ ದಳದ ಕಚೇರಿಯ ರಾಜು, ಗ್ಯಾಸ್ ಏಜೆನ್ಸಿಯ ರಮೇಶ್ ಉಪಸ್ಥಿತರಿದ್ದರು.