ಬೆಳಗಾವಿ: ಕೋವಿಡ್-19 ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆರೋಗ್ಯ ಸಿಬ್ಬಂದಿಗೆ ತರಬೇತಿ ಶಿಬಿರ ಆರಂಭವಾಯಿತು. ವೈದ್ಯರ ದಿನಾಚರಣೆ ನಿಮಿತ್ತ ತರಬೇತಿ ಶಿಬಿರ ಆರಂಭಿಸಲಾಗಿದೆ.
ಪ್ರಾದೇಶಿಕ ಆಯುಕ್ತರು ಹಾಗೂ ಬಿಮ್ಸ್‌ನ ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿ ಕಾರಿ ಉಪಸ್ಥಿತಿಯಲ್ಲಿ ಈ ತರಬೇತಿ ಆರು ದಿನಗಳ ಕಾಲ ನಡೆಯಲಿದೆ ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ. ಬಿಮ್ಸ್‌ನ ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಮಾತನಾಡಿ, ಪ್ರತಿ ಬ್ಯಾಚ್‌ಗೆ 50 ಜನ ಶುಶ್ರೂಷಾಧಿ ಕಾರಿಗಳಂತೆ ಒಟ್ಟು 6 ಬ್ಯಾಚ್ ಗಳಲ್ಲಿ ಕೋವಿಡ್‌ಗೆ ಸಂಬಂಧಿ ಸಿದಂತೆ ಪ್ರಾಥಮಿಕ ತಿಳಿವಳಿಕೆ ನೀಡಲಾಗುವುದು.
ಮಕ್ಕಳಲ್ಲಿ ಕೋವಿಡ್ ಗುಣಲಕ್ಷಣಗಳು, ಪರೀûಾ ವಿಧಾನ, ಮಕ್ಕಳಲ್ಲಿ ಕೋವಿಡ್ ಕಂಡು ಬಂದಲ್ಲಿ ನೀಡುವ ಚಿಕಿತ್ಸಾ ಪದ್ಧತಿ, ಕೋವಿಡ್ ಬಾ ಧಿತ ನವಜಾತ ಶಿಶುಗಳ ಆರೈಕೆ, ಮಕ್ಕಳಲ್ಲಿ ಬಳಸುವ ಆಕ್ಸಿಜನ್ ಉಪಕರಣಗಳ ಬಳಕೆ ಬಗ್ಗೆ ಉಪನ್ಯಾಸ ಹಾಗೂ ಆಸ್ಪತ್ರೆಯಲ್ಲಿ ಪಾಲಿಸಬೇಕಾದ ಕ್ರಮಗಳ ಕುರಿತು ತಿಳಿವಳಿಕೆ ನೀಡಲಾಯಿತು.
ಜು.1ರಿಂದ ತರಬೇತಿ ಪ್ರಾರಂಭಿಸಲಾಗಿದ್ದು, 6 ದಿನಗಳವರೆಗೆ ನಡೆಯುವ ತರಬೇತಿಯಲ್ಲಿ ಕಿರಿಯ ನಿವಾಸಿ ವೈದ್ಯರಿಗೆ ಹಾಗೂ ಗೃಹ ವೈದ್ಯರಿಗೆ ಪ್ರಾಥಮಿಕ ತಿಳಿವಳಿಕೆ ನೀಡಲಾಗುವುದು ಎಂದು ವಿವರಿಸಿದರು.
ಈ ವೇಳೆ ಬಿಮ್ಸ್ ಪ್ರಭಾರ ನಿರ್ದೇಶಕ ಡಾ| ಉಮೇಶ ಕುಲಕರ್ಣಿ, ಮುಖ್ಯ ಆಡಳಿತಾ ಧಿಕಾರಿ ಎಸ್.ಎಸ್. ಬಳ್ಳಾರಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಸುಧಾಕರ ಆರ್.ಸಿ, ವೈದ್ಯಕೀಯ ಅಧಿಧೀಕ್ಷಕ ಡಾ| ಗಿರೀಶ ದಂಡಗಿ, ಡಾ| ಶೈಲೇಶ ಪಾಟೀಲ ಸೇರಿದಂತೆ ಮಕ್ಕಳ ವಿಭಾಗ ಬಿಮ್ಸ್ ಹಾಗೂ ಪ್ರಾಧ್ಯಾಪಕರು, ವಿಭಾಗದ ಮುಖ್ಯಸ್ಥರು ಇದ್ದರು.