Advertisement

ಉದ್ಯಮಿಗಳ ಯಶಸ್ಸಿಗೆ ತಂತ್ರಜ್ಞಾನದ ಜತೆೆ ತರಬೇತಿ ಅವಶ್ಯ

12:33 PM Feb 14, 2017 | |

ಮೈಸೂರು: ಉದ್ಯಮಿಗಳು ಆಧುನಿಕ ತಂತ್ರಜ್ಞಾನದ ಜತೆಗೆ ಸೂಕ್ತ ತರಬೇತಿ ಪಡೆದರೆ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಫ್ಕೆಸಿಸಿಐ ಉಪಾಧ್ಯಕ್ಷ ಎಸ್‌.ಸುಧಾಕರ್‌ ಶೆಟ್ಟಿ ಸಲಹೆ ನೀಡಿದರು. 

Advertisement

ಬೆಂಗಳೂರಿನ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕಾ ಸಂಘದ ವತಿಯಿಂದ ನಗರದ ಎಂಜಿನಿಯರುಗಳ ಸಂಸ್ಥೆಯಲ್ಲಿ ಕೈಗಾರಿಕೋದ್ಯಮಿಗಳು, ವಾಣಿಜ್ಯೋದ್ಯಮಿಗಳು ಹಾಗೂ ಬಾವಿ ರಫ್ತುದಾರರಿಗಾಗಿ ಆಯೋಜಿ ಸಿರುವ ರಫ್ತು ನಿರ್ವಹಣಾ ತರಬೇತಿ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಯಾವುದೇ ಉದ್ಯಮಿಗಳು ಹೊಸದಾಗಿ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಮುನ್ನ ಅವರು ಉದ್ಯಮದ ಕುರಿತು ಸಂಪೂರ್ಣ ಮಾಹಿತಿ ಹೊಂದಿರಬೇಕು. ಪ್ರಮುಖವಾಗಿ ತಾವು ಮಾಡುವ ಉದ್ಯಮದ ಕಚ್ಚಾ ಪದಾರ್ಥ ಎಲ್ಲಿ ದೊರೆಯುತ್ತದೆ, ತಮಗೆ ಯಾರೂ ಗ್ರಾಹಕರು ಎಂಬ ವಿಷಯಗಳ ಬಗ್ಗೆ ತಿಳಿದಿರಬೇಕು.

ಜತೆಗೆ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಾಮಾನ್ಯ ಜ್ಞಾನ, ಸಮಯ ಪ್ರಜ್ಞೆ ಜತೆಗೆ ತರಬೇತಿಯೂ ಅತ್ಯಂತ ಅವಶ್ಯಕವಾಗಿದ್ದು, ಇದರ ಜತೆಗೆ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡರೆ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು ಎಂದ ಅವರು, ಉದ್ಯಮಿಗಳು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಉತ್ಪನ್ನದ ಗುಣಮಟ್ಟದ ಬಗ್ಗೆಯೂ ಹೆಚ್ಚಿನ ಆದ್ಯತೆಯನ್ನು ನೀಡಿದರೆ, ಗ್ರಾಹಕರು ಎಷ್ಟೇ ದುಬಾರಿಯಾದರೂ ಉತ್ಪನ್ನ ಖರೀದಿಸುತ್ತಾರೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಣ್ಣ ಉದ್ಯಮಗಳನ್ನು ಪೋÅತ್ಸಾಹಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳ ಮೂಲಕ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಸಾಲಸೌಲಭ್ಯ ನೀಡುತ್ತದೆ. ಆದರೆ ಉದ್ಯಮ ಕ್ಷೇತ್ರಕ್ಕೆ ಬರುವ ಹೊಸ ಉದ್ಯಮಿಗಳು ಹಾಗೂ ಉದ್ಯಮಿಗಳಿಗೆ ಈ ಬಗ್ಗೆ ಅರಿವಿನ ಕೊರತೆಯಿದೆ.

Advertisement

ಹೀಗಾಗಿ ಉದ್ಯಮಿಗಳು ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಉದ್ಯಮ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಬೇಕು. ಕೇವಲ ಸಾಲ ಸೌಲಭ್ಯ ಮಾತ್ರವಲ್ಲದೆ ಉದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದ ಅನೇಕ ಯೋಜನೆಗಳನ್ನು ಉದ್ಯಮಿಗಳು ಸೂಕ್ತ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಅಲ್ಲದೆ ಸರ್ಕಾರದ ಯೋಜನೆಗಳನ್ನು ಪಡೆಯುವ ಸಂದರ್ಭದಲ್ಲಿ ಕೆಲವೊಂದು ಕಾರಣದಿಂದ ವಿಳಂಬವಾಗುವ ಸಾಧ್ಯತೆಗಳಿದ್ದು, ಉದ್ಯಮಿಗಳು ಇದರಿಂದ ನಿರಾಶೆಗೊಳ್ಳದೆ ಉದ್ಯಮ ಆರಂಭದ ಬಗ್ಗೆ ನಿಗಾವಹಿಸಬೇಕು. ಪ್ರಮುಖವಾಗಿ ಉದ್ಯಮಿಗಳು ಬ್ಯಾಂಕಿನಿಂದ ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಹಿಂದಿರುಗಿಸುವ ಮೂಲಕ ಬ್ಯಾಂಕಿನೊಂದಿಗೆ ಉತ್ತಮ ವಹಿವಾಟು ಹೊಂದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲ ಪಡೆಯಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಚ್‌.ರಾಮಕೃಷ್ಣೇಗೌಡ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಎ.ಎಸ್‌.ಸತೀಶ್‌, ಕೊಡಗು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಎನ್‌.ಪ್ರಕಾಶ್‌, ಹೆಬ್ಟಾಳು ಕೈಗಾರಿಕೋದ್ಯಮಿಗಳ ವಸಾಹತು ತಯಾರಕರ ಸಂಘದ ಅಧ್ಯಕ್ಷ ಎನ್‌.ಎಚ್‌.ಜಯಂತ್‌, ಎಂಜಿನಿಯರುಗಳ ಸಂಸ್ಥೆ ಅಧ್ಯಕ್ಷ ಎಂ.ಚಿನ್ನಸ್ವಾಮಿ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಕಾರ್ಯದರ್ಶಿ ಶ್ರೀಶೈಲರಾಮಣ್ಣವರ, ಪ್ರಧಾನ ಕಾರ್ಯದರ್ಶಿ ಎನ್‌.ಸತೀಶ್‌ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next