Advertisement

Kapu ಮೀನುಗಾರರಿಗೆ ಹೊಸ ತಂತ್ರಜ್ಞಾನದಡಿ ತರಬೇತಿ: ಸಚಿವೆ ಶೋಭಾ ಕರಂದ್ಲಾಜೆ

12:32 AM Dec 31, 2023 | Team Udayavani |

ಕಾಪು: ಕೇಂದ್ರ ಸರಕಾರ ಮತ್ಸ್ಯಸಂಪದ ಯೋಜನೆಗೆ 26 ಸಾವಿರ ಕೋಟಿ ಮತ್ತು ಆಹಾರ ಸಂಸ್ಕರಣ ವಿಭಾಗಕ್ಕೆ 33 ಸಾವಿರ ಕೋಟಿ ರೂ. ಅನುದಾನ ಮೀಸಲಿರಿಸಿದೆ. ಕಳೆದ ಮೂರು ವರ್ಷಗಳಲ್ಲಿ 4,500 ಕೋಟಿ ರೈತರು ಮತ್ತು ಮೀನುಗಾರರಿಗೆ ಹೊಸ ತಂತ್ರಜ್ಞಾನದಡಿ ತರಬೇತಿ ನೀಡಲಾಗಿದೆ ಎಂದು ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಡಿ. 30ರಂದು ಇಲ್ಲಿ ನೂತನವಾಗಿ ಆರಂಭಗೊಂಡಿರುವ ದ.ಕ. ಮತ್ತುಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ನ ಕಾಪು ಶಾಖೆಯ ನೂತನ ಬ್ಯಾಂಕಿಂಗ್‌ ವಿಭಾಗ ಮತ್ತು ಮತ್ಸ್ಯ ಕ್ಯಾಂಟೀನ್‌ ಅನ್ನು ಉದ್ಘಾಟಿಸಿ ಅವರು ಮಾತನಾಡಿ, ಫೆಡರೇಶನ್‌ ಮೂಲಕ ಮೀನುಗಾರರಿಗೆ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದಲ್ಲಿ ಅದಕ್ಕೆ ಬೇಕಾದ ತಂತ್ರಜ್ಞರನ್ನು ಕಳುಹಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದರು.

ಎಲ್ಲ ತಾಲೂಕುಗಳಿಗೂ ವಿಸ್ತರಣೆ ಗುರಿ
ಅಧ್ಯಕ್ಷತೆ ವಹಿಸಿದ್ದ ಫೆಡರೇಶನ್‌ ಅಧ್ಯಕ್ಷ, ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ನೂತನ ಶಾಖೆಯ ಮೂಲಕ ಬ್ಯಾಂಕಿಂಗ್‌ ಸೇವೆಯನ್ನು ನೀಡಿ ಆರ್ಥಿಕ ಶಕ್ತಿ ತುಂಬಲು ಫೆಡರೇಶನ್‌ ಕಾರ್ಯಪ್ರವೃತ್ತವಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಮತ್ಸ್ಯ ಕ್ಯಾಂಟೀನ್‌ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿಯೂ ಆರಂಭಿಸುವ ಯೋಜನೆಯಿದೆ. ಮೀನುಗಾರಿಕೆ ಅಭಿವೃದ್ಧಿಗೆ ಹಾಗೂ ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸಲು ಸಂಸ್ಥೆ ಬದ್ಧವಾಗಿದೆ ಎಂದರು.

ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಮಾತನಾಡಿ ಯಶ್‌ಪಾಲ್‌ ನೇತೃತ್ವದಲ್ಲಿ ಮೀನು ಮಾರಾಟ ಫೆಡರೇಶನ್‌ ಅದ್ಭುತ ರೀತಿಯಲ್ಲಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದರು. ಮಾಜಿ ಸಚಿವರಾದ ವಿನಯ್‌ ಕುಮಾರ್‌ ಸೊರಕೆ, ಪ್ರಮೋದ್‌ ಮಧ್ವರಾಜ್‌, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ್‌ ಶೆಟ್ಟಿ ಇಂದ್ರಾಳಿ, ಜಿಲ್ಲಾ ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ವಿವಧ ಸಹಕಾರಿ ವ್ಯವಸಾಯ ಸಂಘದ ಅಧ್ಯಕ್ಷರಾದ ದಿವಾಕರ್‌ ಶೆಟ್ಟಿ (ಕಾಪು), ವಿಜಯ್‌ ಕುಮಾರ್‌ (ಕಟಪಾಡಿ), ರಾಜೇಶ್‌ ರಾವ್‌ (ಇನ್ನಂಜೆ), ಪ್ರಸಾದ್‌ ಶೆಟ್ಟಿ ಕುತ್ಯಾರು (ಶಿರ್ವ), ವೈ. ಸುಧೀರ್‌ ಕುಮಾರ್‌ (ಪಡುಬಿದ್ರಿ ), ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್‌ ಶೆಣೈ, ಹೊಸ ಮಾರಿಗುಡಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಪೊಲಿಪು ಮೊಗವೀರ ಮಹಾಸಭಾ ಅಧ್ಯಕ್ಷ ಶ್ರೀಧರ್‌ ಕಾಂಚನ್‌, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಫೆಡರೇಶನ್‌ನ ವ್ಯವಸ್ಥಾಪಕ ನಿರ್ದೇಶಕಿ ದರ್ಶನಾ ಭಾಗವಹಿಸಿದ್ದರು.

ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಎ. ಸುವರ್ಣ ಸ್ವಾಗತಿಸಿದರು. ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

ಪ್ರತಿಭಾ ಪುರಸ್ಕಾರ
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉಚ್ಚಿಲ ದಸರಾ ಸಂದರ್ಭದಲ್ಲಿ ನಡೆಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ನೂತನ ಬ್ಯಾಂಕಿಂಗ್‌ ಶಾಖೆಯ ನಿರಖು ಠೇವಣಿ ಪತ್ರ, ಕಿಸಾನ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next