Advertisement

ಭ್ರಷ್ಟಾಚಾರ ಮುಕ್ತಿಗೆ ತರಬೇತಿ: ಕೇರಳ ಸರಕಾರ ನಿರ್ಧಾರ

05:55 AM Jul 21, 2017 | |

ತಿರುವನಂತಪುರ: ಸರಕಾರಿ ವಲಯದಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಕೇರಳ ಸರಕಾರ ತರಬೇತಿ ಮೊರೆ ಹೋಗಿದೆ. ಆಡಳಿತ ಸುಧಾರಣೆ ಜತೆಗೆ ರಾಜ್ಯದಲ್ಲಿನ ಸುಮಾರು 6 ಲಕ್ಷ ಸರಕಾರಿ ಸಿಬಂದಿಯಲ್ಲಿ ನೈತಿಕತೆ, ಸ್ಪರ್ಧಾತ್ಮಕತೆ ಮತ್ತು ಉತ್ತಮ ನಡವಳಿಕೆ ರೂಢಿಸುವ ಉದ್ದೇಶದಿಂದ ತರಬೇತಿ ಕೊಡಿಸಲು ಮುಂದಾಗಿದೆ.

Advertisement

ರಾಜ್ಯದ ಅತ್ಯುನ್ನತ ತರಬೇತಿ ಸಂಸ್ಥೆ ಎನಿಸಿರುವ ಇನ್ಸ್‌ ಟಿಟ್ಯೂಟ್‌ ಆಫ್ ಮ್ಯಾನೇಜ್ಮೆಂಟ್ ಇನ್‌ ಗವರ್ನಮೆಂಟ್‌ (ಐಎಂಜಿ) ಈಗಾಗಲೆ “ತರಬೇತಿ ನೀತಿ 2017’ರ ಅನುಷ್ಠಾನ ಕಾರ್ಯದಲ್ಲಿ ತೊಡಗಿದೆ. ಸಾರ್ವಜನಿಕ ಕೇಂದ್ರಿತ, ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಹಾಗೂ ದಕ್ಷ ಸಾರ್ವಜನಿಕ ಸೇವೆ ವ್ಯವಸ್ಥೆಯನ್ನು ರಾಜ್ಯದಲ್ಲಿ ನೆಲೆಗೊಳಿಸುವುದು ಈ ನೂತನ ನೀತಿಯ ಮೂಲ ಉದ್ದೇಶವಾಗಿದೆ. “ಕೆಳ ಹಂತದ ನೌಕರರಿಂದ ಹಿಡಿದು, ಉನ್ನತ ಹಂತದ ಅಧಿಕಾರಿ ವರ್ಗದ ವರೆಗೆ ಎಲ್ಲರಿಗೂ ತರಬೇತಿ ನೀಡುವ ಮೂಲಕ ಸರಕಾರದ ಆಡಳಿತ ಸಾಮರ್ಥ್ಯವನ್ನು ಸುಧಾರಿಸಲಾಗುತ್ತದೆ ಎಂದು ಐಎಂಜಿ ನಿರ್ದೇಶಕ ಜೇಕಬ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next