Advertisement

ಮತ್ತೆ ಬಂತು, “ಟ್ರೈನ್‌ ಟು ಪಾಕಿಸ್ತಾನ್‌’

04:42 PM May 12, 2018 | |

ಖುಷ್ವಂತ್‌ ಸಿಂಗ್‌ ಅವರ ಐತಿಹಾಸಿಕ ಕಾದಂಬರಿ “ಟ್ರೈನ್‌ ಟು ಪಾಕಿಸ್ತಾನ್‌’ ಕನ್ನಡದಲ್ಲಿ ಮತ್ತೂಮ್ಮೆ ಚುಕುಬುಕು ಎನ್ನುತ್ತಿದೆ. 1947ರಲ್ಲಿ ದೇಶ ವಿಭಜನೆಯಾದಾಗ ಸಂಭವಿಸಿದ ಮನಕಲುಕುವ ಘಟನೆಗಳನ್ನಾಧರಿಸಿದ ಕತೆಯಿದು. ಕನ್ನಡಕ್ಕೆ ಡಾ.ಎಂ.ಬಿ. ರಾಮಮೂರ್ತಿ ತರ್ಜುಮೆ ಮಾಡಿದ್ದಾರೆ. ಕತೆಗಾರ ಚಿದಾನಂದ ಸಾಲಿ ಅವರು ನಾಟಕ ರೂಪಕ್ಕೆ ಇಳಿಸಿದ್ದಾರೆ. ಅಭಿನಯತರಂಗ ನಾಟಕ ಶಾಲೆಯ 2017- 18ನೇ ಸಾಲಿನ ವಿದ್ಯಾರ್ಥಿಗಳು ಈ ನಾಟಕಕ್ಕೆ ಬಣ್ಣ ಹಚ್ಚಲಿದ್ದಾರೆ, ಪ್ರಶಾಂತ್‌ ಕೆ.ಎಸ್‌. ಇದನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ಇದೇ ನಾಟಕವನ್ನು ರೂಪಾಂತರ ತಂಡವೂ ಪ್ರದರ್ಶಿಸಿತ್ತು.
ಎಲ್ಲಿ?: ಕೆ.ಎಚ್‌. ಕಲಾಸೌಧ, ಹನುಮಂತನಗರ
ಯಾವಾಗ?: ಮೇ 14, 16 ಸಂ.7

Advertisement

ಮಾಸದ ಮಾಧುರ್ಯದ “ಛಾಯೆ’ಯಲ್ಲಿ…
ಜಗನ್ನಾಥ ಬಳಗದವರಿಂದ ನಡೆಯುವ “ಮಾಸದ ಮಾಧುರ್ಯ’ ಸರಣಿಯಲ್ಲಿ ಈ ಬಾರಿ “ಛಾಯಾಗೀತ’ ಕೇಳಲಿದೆ. ಛಾಯಾಚಿತ್ರ ಗೊತ್ತು, ಏನಿದು ಛಾಯಾಗೀತ ಅಂತೀರ? ಇಂಪು ಕಂಠದ ಗಾಯಕಿ ಬಿ.ಆರ್‌. ಛಾಯಾ ಅವರಿಂದ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದು, ಗಾಯಕರಾದ ಡಾ.ಚಂದ್ರಿಕಾ ಮುರುಳೀ ಧರ್‌, ಭರತ್‌ ಕೆ.ವಿ, ಗಣೇಶ ಯಾಜಿ ಹಾಡಿಗೆ ಜೊತೆಯಾಗಲಿದ್ದಾರೆ. ನಿಮ್ಮಿಷ್ಟದ ಭಾವಗೀತೆ, ಜನಪದಗೀತೆ, ಭಕ್ತಿಗೀತೆಗಳನ್ನು ಒಟ್ಟಿಗೆ ಕೇಳುವ ಸುವರ್ಣಾವಕಾಶ ಇದು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ 
ಎನ್‌.ರವಿಕುಮಾರ್‌ ಪಾಲ್ಗೊಳ್ಳುತ್ತಿದ್ದಾರೆ. ಪ್ರವೇಶ ಉಚಿತ.
ಎಲ್ಲಿ?: ಜಗನ್ನಾಥ ಭವನ, #48, 13ನೇ ಅಡ್ಡರಸ್ತೆ, ದೇವಸ್ಥಾನ ಬೀದಿ, ಮಲ್ಲೇಶ್ವರ
ಯಾವಾಗ?: ಮೇ 13, ಭಾನುವಾರ ಸಂಜೆ 5.30 

“ತಾಜ್‌’ನಲ್ಲಿ ಅಮ್ಮಂದಿರ ದಿನ

ವರ್ಷಪೂರ್ತಿ ಮನೆಮಂದಿಗೆಲ್ಲ ಅಡುಗೆ ಮಾಡಿ ಬಡಿಸುವವಳು ಅಮ್ಮ. ಮನೆಯಲ್ಲಿ ಎಲ್ಲರ ಊಟ ಆದ ನಂತರವೇ ಅಮ್ಮನ ಹೊಟ್ಟೆಗೆ ತುತ್ತು ಬೀಳುವುದು. ಆದರೆ, ನಾಳೆ ಹಾಗಾಗುವುದಿಲ್ಲ. ಯಾಕಂದ್ರೆ, ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಅಮ್ಮನ ದಿನದ ಪ್ರಯುಕ್ತ ಆಕರ್ಷಕ ಆಫ‌ರ್‌ಗಳಿವೆ. ಅಮ್ಮನನ್ನು ಅಲ್ಲಿಗೆ ಕರೆ ತನ್ನಿ. ಬ್ರೆಡ್‌ ಚೀಸ್‌, ಪಿಝಾj, ಸಲಾಡ್‌, ಲಖೌ°, ಕೇರಳ ಕರಾವಳಿಯ ತಿನಿಸುಗಳನ್ನು ಒಟ್ಟಿಗೆ ಎಂಜಾಯ್‌ ಮಾಡಿ. ಆಹ್ಲಾದಕರ ಪರಿಸರ, ಹಿನ್ನೆಲೆಯಲ್ಲಿ ಕೇಳಿ ಬರುವ 60-70ರ  ದಶಕದ ಹಾಡುಗಳು ಅಮ್ಮನಿಗೆ ಖಂಡಿತಾ ಇಷ್ಟವಾಗುತ್ತದೆ. 
ಎಲ್ಲಿ?: ತಾಜ್‌ ವೆಸ್ಟ್‌ ಎಂಡ್‌, ರೇಸ್‌ಕೋರ್ಸ್‌ ರಸ್ತೆ, ಹೈಗ್ರೌಂಡ್ಸ್‌ 
ಯಾವಾಗ?: ಮೇ 13, ಭಾನುವಾರ
ಸಂಪರ್ಕ: 080- 6660 5660

ಭಜನೆ ಮತ್ತು ದೇವರ ನಾಮ
ರಾಗಿಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದ ವತಿಯಿಂದ “ಪ್ರವಚನ ವಾಹಿನಿ’ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದ ಅಂಗವಾಗಿ ಶನಿವಾರ ಸಂಜೆ ಚಂದ್ರಿಕಾ ಭಜನಾ ಮಂಡಳಿಯಿಂದ ಭಜನೆ ಹಾಗೂ ಭಾನುವಾರ ಸಂಜೆ ವಿದುಷಿ ಕೃತಿಕ ಶ್ರೀನಿವಾಸನ್‌ರಿಂದ ದೇವರನಾಮ ಗಾಯನ ನಡೆಯಲಿದೆ.  
ಎಲ್ಲಿ?: ಸಾಂಸ್ಕೃತಿಕ ಮಂದಿರ, ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನ, 9ನೇ ಬಡಾವಣೆ, ಜಯನಗರ 
ಯಾವಾಗ?: ಮೇ 12, 13 ಸಂಜೆ 6.30-8

Advertisement

ಬಾಸ್ಕೆಟ್‌ ಬಾಲ್‌ ಆಡಿ!
ನಿಮಗೆ ಬಾಸ್ಕೆಟ್‌ ಬಾಲ್‌ ಆಡುವುದು ಅಂದರೆ ಇಷ್ಟಾನ? ಹಾಗಾದ್ರೆ ಆಟ ಆಡಿ, ಪ್ರಶಸ್ತಿ ಗೆಲ್ಲೋಕೆ ಇಲ್ಲೊಂದು ಅವಕಾಶವಿದೆ. ಗೇಮರ್ ಲೂಪ್‌ ವತಿಯಿಂದ ಬಾಸ್ಕೆಟ್‌ ಬಾಲ್‌ ಸ್ಪರ್ಧೆ ನಡೆಯುತ್ತಿದ್ದು, ಮೂರು ಸುತ್ತಿನಲ್ಲಿ ಆಟ ನಡೆಯುತ್ತದೆ. ಮೊದಲ ಬಹುಮಾನ 3 ಸಾವಿರ, 2ನೇ ಬಹುಮಾನ 2 ಸಾವಿರ ಹಾಗೂ 3ನೇ ಬಹುಮಾನಕ್ಕೆ ಮೆಡಲ್‌ ಮತ್ತು ಪ್ರಶಸ್ತಿ ಪತ್ರವಿದೆ. ಟಿಕೆಟ್‌ ದರ 150 ರೂ. ಆನ್‌ಲೈನ್‌ ನೋಂದಣಿಗೆ https://tinyurl.com/ya7bmjs2 ಸಂಪರ್ಕಿಸಿ. ಸ್ಥಳದಲ್ಲಿಯೂ ನೋಂದಣಿ ಮಾಡಿಕೊಳ್ಳಬಹುದು. 
ಎಲ್ಲಿ?: ಗೇಮರ್ ಲೂಪ್‌ 286, 2ನೇ ಮಹಡಿ, ಕಮರ್ಷಿಯಲ್‌ ಪ್ಲಾಝ, ಕಾಮರಾಜ ರಸ್ತೆ, ಸಿವನಚೆಟ್ಟಿ ಗಾರ್ಡನ್‌
ಯಾವಾಗ?: ಮೇ 13, ಬೆ. 10.30-5.30

Advertisement

Udayavani is now on Telegram. Click here to join our channel and stay updated with the latest news.

Next