Advertisement

ಮುರಿದ ಚಕ್ರದಲ್ಲೇ 10ಕಿ.ಮೀ ಚಲಿಸಿದ ರೈಲು… ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ತಪ್ಪಿತು ದುರಂತ

02:48 PM Jul 03, 2023 | Team Udayavani |

ಬಿಹಾರ: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲೊಂದು ಮುರಿದ ಚಕ್ರದಲ್ಲೇ ಸುಮಾರು ಹತ್ತು ಕಿಲೋ ಮೀಟರ್ ಚಲಿಸಿದ ಆಘಾತಕಾರಿ ಘಟನೆ ಬಿಹಾರದ ವೈಶಾಲಿಯಲ್ಲಿ ಬೆಳಕಿಗೆ ಬಂದಿದೆ.

Advertisement

ಭಾನುವಾರ ತಡರಾತ್ರಿ ಪವನ್ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರನ್ನು ಹೊತ್ತು ಮುಂಬೈಗೆ ಪ್ರಯಾಣ ಬೆಳೆಸಿತ್ತು ಈ ವೇಳೆ ಮುಜಾಫರ್‌ಪುರ ತಲುಪುತ್ತಿದ್ದಂತೆ ರೈಲಿನ ಒಂದು ಚಕ್ರ ತುಂಡಾಗಿದೆ. ವರದಿಗಳ ಪ್ರಕಾರ, ಬೋಗಿ ಸಂಖ್ಯೆ ಎಸ್ -11 ಬೋಗಿಯ ಚಕ್ರ ಮುರಿದುಹೋಗಿತ್ತು, ಇದನ್ನು ರೈಲಿನ ಪ್ರಯಾಣಿಕರೊಬ್ಬರು ಗಮನಿಸಿದ್ದಾರೆ ಕೂಡಲೇ ರೈಲು ಅಧಿಕಾರಿಗೆ ಮಾಹಿತಿಯನ್ನು ನೀಡಿದ್ದಾರೆ.

ಒಂದು ವೇಳೆ ಚಕ್ರ ಮುರಿದಿರುವುದನ್ನು ಗಮನಿಸದೇ ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಂಭವವಿತ್ತು ಎನ್ನಲಾಗಿದೆ.

ಪ್ರಯಾಣಿಕರ ಸಮಯಪ್ರಜ್ಞೆಯಿಂದ ತಪ್ಪಿನ ಅನಾಹುತ:
ಪ್ರಯಾಣಿಕರ ಪ್ರಕಾರ, ಭಗವಾನ್‌ಪುರ ನಿಲ್ದಾಣದಲ್ಲಿ ರೈಲು ನಿಂತಾಗಲೂ ಚಕ್ರ ಮುರಿದಿರುವುದು ಚಾಲಕನ ಗಮನಕ್ಕೆ ಬಂದಿಲ್ಲ. ರೈಲು ಮತ್ತೆ ಮುರಿದ ಚಕ್ರದೊಂದಿಗೆ ಮುಂದಕ್ಕೆ ಚಲಿಸಲಾರಂಭಿಸಿತು. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಚಕ್ರ ಮುರಿದಿರುವುದು ಗಮನಕ್ಕೆ ಬಂದಿದೆ ಕೂಡಲೇ ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ಈ ಬಗ್ಗೆ ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿ ಬಳಿಕ ಮುಂದಿನ ನಿಲ್ದಾಣದ ವರೆಗೆ ನಿಧಾನವಾಗಿ ಚಲಾಯಿಸಿ ಮುರಿದ ಚಕ್ರವನ್ನು ಸರಿಪಡಿಸಲಾಯಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: Pension: ಈ ರಾಜ್ಯದಲ್ಲಿರುವ ಅವಿವಾಹಿತರಿಗೆ ಶೀಘ್ರದಲ್ಲೇ ಸಿಗಲಿದೆಯಂತೆ ಪಿಂಚಣಿ…

Advertisement

Advertisement

Udayavani is now on Telegram. Click here to join our channel and stay updated with the latest news.

Next