Advertisement
ಪ್ರಯಾಣಿಕರು 90 ನಿಮಿಷ ಮುಂಚಿತವಾಗಿ ರೈಲು ನಿಲ್ದಾಣ ತಲುಪಬೇಕಿದೆ. ಸ್ಕ್ರೀನಿಂಗ್,ತಪಾಸಣೆ ಮತ್ತಿತರ ಪ್ರಕ್ರಿಯೆಗಳನ್ನು ನಡೆಸುವುದಕ್ಕೆ ಈ ಅವಧಿಯನ್ನು ಬಳಸಿಕೊಳ್ಳಲಾಗುತ್ತದೆ. ದಿಲ್ಲಿಯಿಂದ ಬೆಂಗಳೂರು ಸಹಿತ ದೇಶದ 15 ರಾಜ್ಯ ರಾಜಧಾನಿಗಳಿಗೆ ರೈಲುಗಳು ಸಂಚರಿಸಲಿದ್ದು, ವೇಳಾಪಟ್ಟಿ, ಪ್ರಯಾಣಿಕ ಮಾರ್ಗಸೂಚಿಗಳನ್ನು ರೈಲ್ವೇ ಇಲಾಖೆ ಬಿಡುಗಡೆ ಮಾಡಿದೆ.
-90 ನಿಮಿಷ ಮೊದಲೇ ರೈಲು ನಿಲ್ದಾಣಕ್ಕೆ ಹೋಗಬೇಕು.
-ಸದ್ಯಕ್ಕೆ ತತ್ಕಾಲ್, ಪ್ರೀಮಿಯಂ ತತ್ಕಾಲ್ ಬುಕ್ಕಿಂಗ್ ಇಲ್ಲ
-ಸೂಪರ್ ಫಾಸ್ಟ್ ರೈಲು ಟಿಕೆಟ್ ದರ; ವಿನಾ ಯಿತಿ ಇಲ್ಲ
-ದೃಢೀಕೃತ ಇ-ಟಿಕೆಟ್ ಹೊಂದಿದ್ದರೆ ಮಾತ್ರ ರೈಲು ನಿಲ್ದಾಣಕ್ಕೆ ಪ್ರವೇಶ
-ಮಾಸ್ಕ್, ನಿರ್ಗಮನಕ್ಕೆ ಮುನ್ನ ಸ್ಕ್ರೀನಿಂಗ್ ಕಡ್ಡಾಯ
-ಹೊದಿಕೆ, ಬೆಡ್ ಶೀಟ್, ಆಹಾರ ಪ್ರಯಾಣಿಕರೇ ತರಬೇಕು. ಕರಾವಳಿಗೆ ಒಂದು ರೈಲು
ಮಂಗಳೂರು: ವಿಶೇಷ ರೈಲುಗಳಲ್ಲಿ ಒಂದು ಮಾತ್ರ ಕರಾವಳಿ ಮೂಲಕ ಹಾದು ಹೋಗಲಿದೆ. ಆದರೆ ನಿಲುಗಡೆ ಇರುವುದು ಮಂಗಳೂರಿನಲ್ಲಿ ಮಾತ್ರ. ಹೊಸದಿಲ್ಲಿಯಿಂದ ಮೇ 13ರಂದು ಹೊರಡುವ ರೈಲು ಮೇ 15ರಂದು ತಿರುವನಂತಪುರ ತಲುಪಲಿದೆ. ಇದು ಹೊಸದಿಲ್ಲಿಯಿಂದ ಮಂಗಳವಾರ, ಬುಧವಾರ ಮತ್ತು ರವಿವಾರ ಸಂಚರಿಸಲಿದೆ. ಈ ರೈಲಿಗೆ ಮಂಗಳೂರಿನಲ್ಲಿ ಮಾತ್ರ ನಿಲುಗಡೆ ಇದೆ; ಉಡುಪಿ, ಕಾರವಾರಗಳಲ್ಲಿ ಇದು ನಿಲ್ಲುವುದಿಲ್ಲ.
Related Articles
ಸೋಮವಾರ ಸಂಜೆ 4 ಗಂಟೆಗೆ ಜನರು ಟಿಕೆಟ್ ಖರೀದಿಸಲು ಮುಗಿಬಿದ್ದರು. ಇದರಿಂದಾಗಿ ಐಆರ್‌ಸಿಟಿಸಿ ವೆಬ್‌ಸೈಟ್ ಕ್ರ್ಯಾಶ್ ಆಗಿತ್ತು. ಕೊನೆಗೆ ಬುಕ್ಕಿಂಗ್ ಸ್ಥಗಿತಗೊಳಿಸಿ, 6 ಗಂಟೆಯ ಬಳಿಕ ಆರಂಭಿಸಲಾಯಿತು. ವಿಶೇಷ ರೈಲುಗಳಿಗೆ ಸಂಬಂಧಿಸಿದ ಹೊಸ ದತ್ತಾಂಶ ಅಪ್ ಲೋಡ್ ಪ್ರಕ್ರಿಯೆ ವಿಳಂಬವಾದ ಕಾರಣ ವೆಬ್ ಸೈಟ್ ಕ್ರ್ಯಾಶ್ ಆಗಿದೆ ಎಂದು ಸಚಿವಾಲಯ ಹೇಳಿದೆ.
Advertisement