ಹುಬ್ಬಳ್ಳಿ: ಕೊರೊನಾ ಲಾಕ್‌ಡೌನ್ ವಿನಾಯಿತಿ ಬಳಿಕ ನೈಋತ್ಯ ರೈಲ್ವೆ ಮೇ 22ರಿಂದ ರಾಜ್ಯದೊಳಗೆ ಪ್ರಯಾಣಿಕ ರೈಲು ಸೇವೆಯನ್ನು ಆರಂಭಿಸಲಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ರೈಲ್ವೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಾರ್ಚ್ 22ರಿಂದ ಪ್ರಯಾಣಿಕರ ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಸರಕು ಮತ್ತು ಪಾರ್ಸಲ್ ರೈಲುಗಳ ಸಂಚಾರ ಎಂದಿನಂತಿತ್ತು. ಲಾಕ್‌ಡೌನ್ 4.0ರ ಮೊದಲ ದಿನ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದೊಳಗೆ ಅಂತರ ಜಿಲ್ಲಾ ರೈಲು ಓಡಾಟಕ್ಕೆ ಹಸಿರು ನಿಶಾನೆ ತೋರಿದ್ದರು.
ಇದನ್ನು ಪರಿಗಣಿಸಿ ರೈಲ್ವೆ ಇಲಾಖೆ ಬೆಂಗಳೂರು-ಮೈಸೂರು ಹಾಗೂ ಬೆಂಗಳೂರು- ಬೆಳಗಾವಿ ನಡುವೆ ತಲಾ 2 ರೈಲುಗಳನ್ನು ಓಡಿಸಲು ಅನು ಮೋದನೆ ನೀಡಿದೆ. ಕರ್ನಾಟಕದಲ್ಲಿ ಶ್ರೇಣೀಕೃತ ರೀತಿ ಯಲ್ಲಿ ರೈಲುಗಳನ್ನು ಪುನರಾರಂಭಿಸುವಲ್ಲಿ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮೇ 22ರಿಂದ ಬೆಂಗಳೂರು-ಬೆಳಗಾವಿ ಟ್ರೈ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (06597) ರೈಲು ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನಿಂದ ಹೊರಟು ಯಶವಂ ತಪುರ (8:09), ತುಮಕೂರು (8:59),
ಅರಸೀಕೆರೆ (10: 25), ಬೀರೂರು (11:13), ಚಿಕ್ಕಜಾಜೂರು (ಮಧ್ಯಾಹ್ನ 12:09), ದಾವಣಗೆರೆ (12:48), ಹರಿಹರ (1:03), ರಾಣಿಬೆನ್ನೂರು (1:25), ಹಾವೇರಿ (1:51), ಹುಬ್ಬಳ್ಳಿ (3:25), ಧಾರವಾಡ (3:45) ಮಾರ್ಗವಾಗಿ ಸಂಜೆ 6:30 ಗಂಟೆಗೆ ಬೆಳಗಾವಿ ತಲುಪಲಿದೆ. ಅದೇ ರೀತಿ ಮೇ 23ರಿಂದ ಬೆಳಗಾವಿ-ಬೆಂಗಳೂರು ಟ್ರೈ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (06598) ರೈಲು ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ಬೆಳಗ್ಗೆ 8:00 ಗಂಟೆಗೆ ಬೆಳಗಾವಿಯಿಂದ ಹೊರಟು ಧಾರವಾಡ (10:15), ಹುಬ್ಬಳ್ಳಿ (10:37), ಹಾವೇರಿ (11:40), ರಾಣಿಬೆನ್ನೂರು (ಮಧ್ಯಾಹ್ನ 12:05), ಹರಿಹರ (12:27),
ದಾವಣಗೆರೆ (12:43), ಚಿಕ್ಕಜಾಜೂರು (1:35), ಬೀರೂರು (2:35), ಅರಸೀಕೆರೆ (3:10), ತುಮಕೂರು (ಸಂಜೆ 4:35), ಯಶವಂತಪುರ (5:40) ಮಾರ್ಗ ವಾಗಿ ಸಂಜೆ 6:30 ಗಂಟೆಗೆ ಬೆಂಗಳೂರು ತಲುಪ ಲಿದೆ. ಈ ರೈಲು 14 ಚೇರ್ ಕಾರ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್ ವ್ಯಾನ್ ಸಂಯೋಜನೆ ಹೊಂದಿದೆ. ಈ ರೈಲಿನ ಒಟ್ಟು ಆಸನ ಸಾಮರ್ಥಯ 1484 (ಪ್ರತಿ ಬೋಗಿಯಲ್ಲಿ 106) ಆಗಿದೆ. ಮೇ 22ರಿಂದ ಬೆಂಗಳೂರು-ಮೈಸೂರು ವಿಶೇಷ (06503) ರೈಲು ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಕೆಎಸ್‌ಆರ್ ಬೆಂಗಳೂರಿನಿಂದ ಬೆಳಗ್ಗೆ 9:20 ಗಂಟೆಗೆ ಹೊರಟು ಕೆಂಗೇರಿ (9:43),
ರಾಮನಗರಂ (10:15), ಮದ್ದೂರು (10:48), ಮಂಡ್ಯ (11:08), ಪಾಂಡವಪುರ (11:44), ನಾಗನಹಳ್ಳಿ (11: 59) ಮಾರ್ಗ ವಾಗಿ ಮಧ್ಯಾಹ್ನ 12:45 ಗಂಟೆಗೆ ಮೈಸೂರು ತಲುಪಲಿದೆ. ಅದೇ ರೀತಿ ಮೈಸೂರು-ಬೆಂಗಳೂರು ವಿಶೇಷ (06504) ರೈಲು ಭಾನುವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಮೈಸೂರಿನಿಂದ ಮಧ್ಯಾಹ್ನ 1:45ಗಂಟೆಗೆ ಹೊರಟು ನಾಗನ ಹಳ್ಳಿ (1:54), ಪಾಂಡವಪುರ (1:10), ಮಂಡ್ಯ (1:40), ಮದ್ದೂರು (3:02), ರಾಮನಗರಂ (3:34), ಕೆಂಗೇರಿ (ಸಂಜೆ 4:10) ಮಾರ್ಗವಾಗಿ ಸಂಜೆ 5:00 ಗಂಟೆಗೆ ಬೆಂಗ ಳೂರು ತಲುಪಲಿದೆ. ಈ ರೈಲು 14 ಚೇರ್ ಕಾರ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್ ವ್ಯಾನ್ ಸಂಯೋಜನೆ ಹೊಂದಿದೆ.
ಈ ರೈಲು ಸೇವೆಗಳ ಜತೆಗೆ ಕರ್ನಾಟಕದಿಂದ ಇತರ ರಾಜ್ಯಗಳಿಗೆ ಹೊರಡುವ ಶ್ರಮಿಕ ವಿಶೇಷ, ನವದೆಹಲಿ- ಬೆಂಗಳೂರು ರಾಜಧಾನಿ ವಿಶೇಷಗಳು ಚಾಲನೆಯಲ್ಲಿರಲಿವೆ. ಭಾನುವಾರ ರಾಜ್ಯದಲ್ಲಿ ಲಾಕ್‌ಡೌನ್ ಕಾರಣ ಈ ನಾಲ್ಕು ರೈಲುಗಳ ಸಂಚಾರ ಇರಲ್ಲ. ಪ್ರಯಾಣ ವೇಳೆ ಪ್ರಯಾಣಿಕರು ಮಾಸ್ಕ್ ಧರಿಸುವುದು ಮುಂತಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಥರ್ಮಲ್ ಸ್ಕ್ರೀನಿಂಗ್ ಇತ್ಯಾದಿಗಳಿಗೆ ನಿಲ್ದಾಣಕ್ಕೆ ಮುಂಚಿತ ಬರಬೇಕು. ಐಆರ್ ಸಿಟಿಸಿ ವೆಬ್‌ಸೈಟ್ ಮೂಲಕ ಆನ್‌ಲೈನ್‌ದಲ್ಲಿ ಟಿಕೆಟ್ ಕಾಯ್ದಿರಿಸಬೇಕು ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.