Advertisement

ಅಮೃತಸರದಲ್ಲಿ ಘೋರ ದುರಂತ : ರೈಲು ಹರಿದು 62 ಸಾವು

06:00 AM Oct 20, 2018 | Team Udayavani |

ಅಮೃತಸರ: ಹಳಿ ಮೇಲೆ ನಿಂತು ರಾವಣ, ಮೇಘನಾದರ ಪ್ರತಿಕೃತಿ ದಹನ ಕಾರ್ಯಕ್ರಮ ನೋಡುತ್ತಿ ದ್ದವರ ಮೇಲೆ ರೈಲು ಸಂಚರಿಸಿ ಕನಿಷ್ಠ 62 ಮಂದಿ ಅಸುನೀ ಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ  ಪಂಜಾಬ್‌ನ ಅಮೃತಸರದಲ್ಲಿ ಸಂಭವಿಸಿದೆ. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಜಲಂಧರ್‌ನಿಂದ  ಅಮೃತಸರಕ್ಕೆ ಬರುತ್ತಿದ್ದ ಡೆಮು ರೈಲು ಹಳಿಯ ಮೇಲೆ ನಿಂತಿದ್ದ ಜನರ ಮೇಲೆಯೇ ಸಂಚರಿಸಿತು. ಸ್ಥಳದಲ್ಲಿ 700ಕ್ಕೂ ಅಧಿಕ ಮಂದಿ ಸೇರಿದ್ದರು ಎಂದು ಸ್ಥಳೀಯ ಆಡಳಿತಾಧಿಕಾರಿ ಹೇಳಿದ್ದಾರೆ. 

Advertisement

ಸ್ಥಳೀಯರು ಆರೋಪಿಸಿರುವಂತೆ ರೈಲ್ವೇ ಇಲಾಖೆಯೇ ದುರಂತಕ್ಕೆ ಕಾರಣ. ರೈಲು ಬರುವ ಬಗ್ಗೆ ಮುನ್ನೆಚ್ಚರಿಕೆಯನ್ನೇ ನೀಡಿರಲಿಲ್ಲ. ಜತೆಗೆ ಸ್ಥಳೀಯ ದಸರಾ ಉತ್ಸವ ಆಯೋಜನಾ ಸಮಿತಿಯೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು ಎಂದಿದ್ದಾರೆ. ಪ್ರಧಾನಿ ಮೋದಿ ಘಟನೆಗೆ ಶೋಕ ವ್ಯಕ್ತಪಡಿಸಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಬಗ್ಗೆ ಸೂಚಿಸಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿ ಆಘಾತ ವ್ಯಕ್ತಪಡಿಸಿದ್ದಾರೆ. ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಉಸ್ತುವಾರಿಗೆ ಆರೋಗ್ಯ, ಗೃಹ ಕಾರ್ಯದರ್ಶಿಗಳನ್ನು ºರು ಸಚಿವರನ್ನು ಕಳುಹಿಸಿ ಕೊಟ್ಟಿದ್ದಾರೆ. ಗಾಯಗೊಂಡ ಎಲ್ಲರಿಗೂ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಅಸುನೀಗಿದ ವ್ಯಕ್ತಿಗಳ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next