Advertisement

ಸೆಪ್ಟಂಬರ್‌ನಿಂದ ‘ಟ್ರೈನ್‌ 18’ಪರೀಕ್ಷೆ

10:00 AM Aug 24, 2018 | Team Udayavani |

ಹೊಸದಿಲ್ಲಿ: ಭಾರತೀಯ ರೈಲ್ವೇಯ ಅತ್ಯಂತ ಮಹತ್ವಾಕಾಂಕ್ಷೆಯ ಸೆಮಿಸ್ಪೀಡ್‌ ‘ಟ್ರೈನ್‌ 18’ ಅನ್ನು ಮುಂದಿನ ತಿಂಗಳು ಪರೀಕ್ಷಾರ್ಥವಾಗಿ ಓಡಿಸಲು ನಿರ್ಧರಿಸಲಾಗಿದೆ. ಇದು ಸಂಪೂರ್ಣವಾಗಿ ಸ್ವದೇಶಿ ನಿರ್ಮಿತವಾಗಿದ್ದು, ಎಂಜಿನ್‌ ರಹಿತವಾಗಿದೆ. ಅಂದರೆ, ಮೆಟ್ರೋ ರೈಲು ಮಾದರಿಯಲ್ಲೇ ಪ್ರತಿಯೊಂದು ಕೋಚ್‌ನಲ್ಲೂ ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ರೈಲಿನ ವೇಗವನ್ನು ಗಂಟೆಗೆ 160 ಕಿ.ಮೀ. ವೇಗದಲ್ಲಿ ಓಡಿಸಬಹುದಾಗಿದೆ ಎಂದು ರೈಲ್ವೇ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ವಿನ್ಯಾಸ ಮತ್ತು ಗುಣಮಟ್ಟದ ಸಂಶೋಧನಾ ಸಂಸ್ಥೆ (ಆರ್‌ಡಿಎಸ್‌ಒ) ಈ ಪ್ರಯೋಗಾತ್ಮಕ ಪರೀಕ್ಷೆಯ ಉಸ್ತುವಾರಿ ವಹಿಸಿಕೊಂಡಿದೆ. ಇದರಲ್ಲಿ ಯಶಸ್ವಿಯಾದಲ್ಲಿ ಮೊದಲಿಗೆ ಶತಾಬ್ದಿ ರೈಲುಗಳಿಗೆ ಅಳವಡಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next